ಮೊರೆನಾ: ಮಧ್ಯಪ್ರದೇಶದ ಮೊರೆನಾದಲ್ಲಿ ನಾಯಿಯ ಮೇಲೆ ಕಸದ ಕ್ಷುಲ್ಲಕ ಕಾರಣಕ್ಕೆ ದಲಿತ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಇಬ್ಬರು ವ್ಯಕ್ತಿಗಳು ಶುಕ್ರವಾರ ಅಮಾನುಷವಾಗಿ ಹಲ್ಲೆ ನಡೆಸಿ, ನಂತರ ರಸ್ತೆಯಲ್ಲಿ ದರದರ ಎಳೆದೊಯ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಬಾಹ್ ಪ್ರದೇಶದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿಯೇ ನಡೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅನಿತಾ ಮಹೋರ್ ಅವರಿಗೆ ದೊಣ್ಣೆಗಳಿಂದ ಹೊಡೆದು ನಂತರ ರಸ್ತೆಯಲ್ಲಿ ಎಳೆದಾಡಿದ ಕಾರಣ ಗಂಭೀರ ಗಾಯಗೊಂಡಿದ್ದಾರೆ. ಅವರ ಮಗಳು ಭಾರ್ತಿ ಕೂಡ ಗಾಯಗೊಂಡಿದ್ದಾರೆ. ಈ ಘಟನೆಗೆ ಕಾರಣರಾದ ರಾಜೇಶ್ ತೋಮರ್ ಮತ್ತು ಕುಮ್ಹೇರ್ ಸಿಂಗ್ ತೋಮರ್ ಅವರನ್ನು ಬಂಧಿಸಿದ್ದೇವೆ ಎಂದು ಅಂಬಾ ಪೊಲೀಸ್ ಠಾಣೆಯ ಉಸ್ತುವಾರಿ ಸತೇಂದ್ರ ಸಿಂಗ್ ಕುಶ್ವಾಹಾ ಹೇಳಿದ್ದಾರೆ.
ಇಂದು ಬೆಳಿಗ್ಗೆ ನನ್ನ ಕಿರಿಯ ಸಹೋದರ ಸಂತೋಷ್ ಕಸವನ್ನು ಎಸೆಯಲು ಹೋಗಿದ್ದು ಅಲ್ಲಿ ಈ ಆರೋಪಿಗಳ ನಾಯಿ ಇರುವ ಕಾರಣಕ್ಕೆ ಗಾಬರಿಗೊಂಡು, ಅದು ಕಚ್ಚುವ ಭೀತಿಯಿಂದ ಅದರ ಮೇಲೆ ಸಗಣಿ ಸೇರಿದಂತೆ ಕಸವನ್ನು ಎಸೆದು ಪರಾರಿಯಾಗಿದ್ದ. ಇದು ಈ ಇಬ್ಬರು ಆರೋಪಿಗಳನ್ನು ಕೆರಳಿಸಿತು ಎಂದು ಅನಿತಾ ಮಹೋರ್ ಅವರ ಹಿರಿಯ ಮಗ ದೀಪಕ್ ತಿಳಿಸಿದ್ದಾನೆ.
ಈ ಇಬ್ಬರು ಆರೋಪಿಗಳು ಮತ್ತು ಇತರರು ಮಚ್ಚು, ದೊಣ್ಣೆಗಳಿಂದ ಮಹೋರ್ ಮನೆಗೆ ನುಗ್ಗಿದರು ಮತ್ತು ಅನಿತಾ ಮತ್ತು ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಮೋದಿ ಚಾದರ್ ಅರ್ಪಣೆ : ತಡೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ


