‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ’ದ ಹಿಂದಿನ ಅಧ್ಯಕ್ಷರಾದ ಕಾಂತರಾಜು ಆಯೋಗ 10 ವರ್ಷಗಳ ಹಿಂದೆ ನಡೆಸಿದ ಜಾತಿಗಣತಿ ವರದಿಯದ್ದು ಎನ್ನಲಾದ ಅಂಕಿ-ಅಂಶಗಳು ಹರಿದಾಡುತ್ತಿದ್ದು, ರಾಜ್ಯದಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ.
5,98,14,942 ಜನ ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟಿದ್ದು, ಪರಿಶಿಷ್ಟ ಜಾತಿ ಜನಸಂಖ್ಯೆ 1,09,29,347 ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆಯ 42,81,289 ಜನರಿದ್ದಾರೆ. ಒಟ್ಟಾರೆ ದಲಿತರ ಸಂಖ್ಯೆ 1,52,10,636 ಇದೆ. ರಾಜ್ಯದಲ್ಲಿ ಪ್ರವರ್ಗ 1ಎ ಜನಸಂಖ್ಯೆ 34,96,638, ಲಕ್ಷ ಪ್ರವರ್ಗ 1ಬಿ ಜನಸಂಖ್ಯೆ 73,92,313 ಲಕ್ಷ ಹಾಗೂ ಪ್ರವರ್ಗ 2ಎ ಜನಸಂಖ್ಯೆ 77,78,209 ಲಕ್ಷ ಇದೆ.
ಪ್ರವರ್ಗ 2ಬಿ ಜನಸಂಖ್ಯೆ 75,25,880 ಲಕ್ಷ, ಪ್ರವರ್ಗ 3ಎ ಜನಸಂಖ್ಯೆ 72,99,577 ಲಕ್ಷ, ಪ್ರವರ್ಗ 3ಬಿ ಜನಸಂಖ್ಯೆ 81,37,536 ಲಕ್ಷ ಇದೆ.
ಪ್ರವರ್ಗ 1 ರಲ್ಲಿ 97 ಜಾತಿಗಳು, ಪ್ರವರ್ಗ 2ಎ ನಲ್ಲಿ 102 ಜಾತಿಗಳು, ಪ್ರವರ್ಗ 2ಬಿ ನಲ್ಲಿ ಮುಸ್ಲಿಂ, ಪ್ರವರ್ಗ 3ಎ ನಲ್ಲಿ ಒಕ್ಕಲಿಗ , ಬಲಿಜ, ಕೊಡವ ಸಮುದಾಯಗಳಿವೆ.
ಪ್ರವರ್ಗ 3ಬಿ ನಲ್ಲಿ ಲಿಂಗಾಯತ–ವೀರಶೈವ ಲಿಂಗಾಯತ, ಲಿಂಗಾಯತ ಉಪ ಪಂಗಡಗಳು, ಮರಾಠ, ಕೊಂಕಣ ಮರಾಠ, ಕ್ಷತ್ರಿಯ, ಕ್ರಿಶ್ಚಿಯನ್ ಸಮುದಾಯಗಳಿವೆ.
ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟ ಜನಸಂಖ್ಯೆ 5,98,14,942
ಎಸ್‌ಸಿ ಜನಸಂಖ್ಯೆ 1,09,29,347
ಎಸ್‌ಟಿ ಜನಸಂಖ್ಯೆ 42,81,289
ಪ್ರವರ್ಗ 1ಎ ಜನಸಂಖ್ಯೆ 34,96,638
ಪ್ರವರ್ಗ 1ಬಿ ಜನಸಂಖ್ಯೆ 73,92,313
ಪ್ರವರ್ಗ 2ಎ ಜನಸಂಖ್ಯೆ 77,78,209
ಪ್ರವರ್ಗ 2ಬಿ ಜನಸಂಖ್ಯೆ 75,25,880
ಪ್ರವರ್ಗ 3ಎ ಜನಸಂಖ್ಯೆ 72,99,577
ಪ್ರವರ್ಗ 3ಬಿ ಜನಸಂಖ್ಯೆ 81,37,536
ಪ್ರವರ್ಗ – 1 – 97 ಜಾತಿಗಳು
ಪ್ರವರ್ಗ – 2ಎ – 102 ಜಾತಿಗಳು
ಪ್ರವರ್ಗ – 2ಬಿ – ಮುಸ್ಲಿಂ
ಪ್ರವರ್ಗ – 3ಎ – ಒಕ್ಕಲಿಗ , ಬಲಿಜ, ಕೊಡವ
ಆಯೋಗ ಶಿಫಾರಸುಗಳೇನು?
ಒಬಿಸಿ ಸಮುದಾಯದ ಶೇ.32ರಷ್ಟು ಮೀಸಲಾತಿಯನ್ನು ಶೇ.51ಕ್ಕೆ ಹೆಚ್ಚಿಸಲು ಆಯೋಗದ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ 5 ವಿಭಾಗಗಳಲ್ಲಿ ವರ್ಗೀಕರಣವಾಗಿದೆ. ಪ್ರವರ್ಗ 1 ಅನ್ನು ಎರಡು ವಿಭಾಗಗಳನ್ನಾಗಿ ಮಾಡಿ ವರ್ಗೀಕರಣ ಮಾಡಲಾಗಿದೆ. 1ಎ ಮತ್ತು 1ಬಿ ಎಂದು ವರ್ಗಿಕರಿಸುವಂತೆ ಶಿಫಾರಸು ಆಗಿದೆ. ಕಾಯಕ, ಕುಲಕಸುಬು ಆಧಾರಿತ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಈ ವರ್ಗೀಕರಣದಲ್ಲಿ ಮನ್ನಣೆ ನೀಡಲಾಗಿದೆ. ಹಾಲಿ ಇರುವ ಪ್ರವರ್ಗ 1ಕ್ಕೆ ಶೇ. 4ರಷ್ಟು ಮೀಸಲಾತಿ ಇದೆ . ಇದನ್ನು 2 ಭಾಗಗಳನ್ನಾಗಿ ಮಾಡಿ 1ಎಗೆ ಶೇ. 6ರಷ್ಟು, 1ಬಿಗೆ ಶೇ. 12ರಷ್ಟು ಮೀಸಲಾತಿಗೆ ಸಲಹೆ ನೀಡಲಾಗಿದೆ. ಹಾಗೇ, ಹಾಲಿ 2ಎಗೆ ಇರುವ ಶೇ.15ರಷ್ಟು ಮೀಸಲಾತಿಯನ್ನು ಶೇ.10ಕ್ಕೆ ಇಳಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದರೆ 2ಬಿ ಅಂದರೆ ಮುಸ್ಲಿಂ ಸಮುದಾಯಕ್ಕಿರುವ ಶೇ. 4ರಷ್ಟು ಮೀಸಲಾತಿಯನ್ನು ಡಬಲ್ ಅಂದರೆ, ಶೇ. 8ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ. ಹಾಗೇ 3ಎಗಿರುವ ಶೇ. 4ರಷ್ಟು ಮೀಸಲಾತಿಯನ್ನು ಶೇ. 7ಕ್ಕೆ ಏರಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇನ್ನು. ಶೇ. 5ರಷ್ಟಿರುವ 3ಬಿ ಮೀಸಲಾತಿಯನ್ನು ಶೇ. 8ಕ್ಕೆ ಹೆಚ್ಚಿಸುವಂತೆ ಜಾತಿ ಗಣತಿ ವರದಿ ಹೇಳಿದೆ.


