Homeಕರೋನಾ ತಲ್ಲಣ‘ಜನ ದಂಗೆ ಏಳುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ’: ಗ್ರಾಮೀಣ ಭಾಗದ ವೈದ್ಯರ ಆಕ್ರೋಶ

‘ಜನ ದಂಗೆ ಏಳುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ’: ಗ್ರಾಮೀಣ ಭಾಗದ ವೈದ್ಯರ ಆಕ್ರೋಶ

ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆ ಇದನ್ನೆಲ್ಲ ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನೋವಾಗುತ್ತಿದೆ, ನಮ್ಮ ಜನರಿಗೆ ನಾವು ಹೆಲ್ಪ್ ಮಾಡೋಕೂ ಒದ್ದಾಡ್ತಾ ಇದ್ದಿವಿ...

- Advertisement -
- Advertisement -

ಕೋವಿಡ್ ಎರಡನೇ ಅಲೆ ಭಾರತವನ್ನು ತತ್ತರಿಸುವಂತೆ ಮಾಡಿದೆ. ಮೊದಲ ಅಲೆ ನಗರ ಪ್ರದೇಶದಲ್ಲಿ ತನ್ನ ಕರಾಳ ಬಾಹುಗಳನ್ನು ಚಾಚಿದ್ದರೆ, ಎರಡನೇ ಅಲೆ ಗ್ರಾಮಮಟ್ಟಕ್ಕೂ ಹರಡಿ ಅಪಾರ ಸಾವು ನೋವುಗಳಿಗೆ ಕಾರಣವಾಗಿದೆ. ನಗರಗಳಲ್ಲಿಯೇ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ, ಆಕ್ಸಿಜನ್ ಮತ್ತು ಔಷಧಗಳಿಗಾಗಿ ಹಾಹಾಕಾರವೆದ್ದಿರುವಾಗ ಗ್ರಾಮೀಣ ಪರಿಸ್ಥಿತಿಯಂತೂ ಇನ್ನು ಕೆಟ್ಟದಾಗಿದೆ. ಇಂತಹ ಸಂದರ್ಭದಲ್ಲಿ ‘ಕೋವಿಡ್ ನಿಯಂತ್ರಣದ ವಿಷಯದಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಹೀಗೇ ಮುಂದುವರೆದರೆ ಬರಲಿರುವ ದಿನಗಳಲ್ಲಿ ಜನ ದಂಗೆ ಏಳುವ ಸಾಧ್ಯತೆ ಇದೆ’ ಎಂಬ ಅಭಿಪ್ರಾಯ ವೈದ್ಯ ವಲಯದಿಂದಲೇ ಕೇಳಿಬರುತ್ತಿದೆ.

ಗ್ರಾಮೀಣ ತಾಲೂಕಾ ಭಾಗದಲ್ಲಿ ಖಾಸಗಿ ಆಸ್ಪತ್ರೆ ನಡೆಸುವ ಡಾ. ಬಿ.ಎನ್ ಪಾಟೀಲ್ ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿ “‘ಕೇವಲ ಬೆಂಗಳೂರು ಕೇಂದ್ರಿತ ನಿರ್ವಹಣೆ ಮಾಡಿದರೆ ಆಗುವುದಿಲ್ಲ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಲಿ. ನನ್ನನ್ನೂ ಸೇರಿ ಎಲ್ಲ ವೈದ್ಯರೂ 3 ತಿಂಗಳು ಕಾಲ ಯಾವುದೇ ಫಲಾಫೇಕ್ಷೆ ಇಲ್ಲದೇ ಕೆಲಸ ಮಾಡಬೇಕು. ಹಾಗಂತ ಹೊಸ ವೈದ್ಯರನ್ನು ಶೋಷಣೆ ಮಾಡಬಾರದು. ಅವರಿಗೆ ಸೂಕ್ತ ಸಂಬಳ ನೀಡಬೇಕು. ಸರ್ಕಾರಗಳು ಈಗಿಂದಲೇ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ತರಹದ ಜಾಹೀರಾತುಗಳನ್ನು ನಿಲ್ಲಿಸಬೇಕು. ನರ್ಸ್‌ಗಳು, ತಾಂತ್ರಿಕ ಸಿಬ್ಬಂದಿ ಮುಂತಾದವರ ಕುಟುಂಬಗಳು ನಡೆಯಲು ಅಗತ್ಯವಾದ ಸಂಬಳ ನೀಡಬೇಕು. ಬ್ಲಾಕ್ ಮಾರ್ಕೆಟಿನಲ್ಲಿ ಆಮ್ಲಜನಕ, ಇತರ ಔಷಧಿಗಳು ಖುಲ್ಲಂಖುಲ್ಲಾ ಮಾರಾಟ ಆಗುತ್ತಿವೆ. ಅದನ್ನು ಕೂಡಲೇ ತಡೆಯಲು ಕಠಿಣ ಕ್ರಮ ಘೋಷಿಸಬೇಕು’ ಎನ್ನುತ್ತಾರೆ.

ಹಿಂದುಳಿದ ತಾಲೂಕಾದ ಸಿಂಧನೂರಿನ ಅನ್ನದಾನೀಶ್ವರ ಆಸ್ಪತ್ರೆಯ ವೈದ್ಯ, ರಾಜ್ಯ ಸರ್ಜನ್ ವೈದ್ಯರ ಸಂಘದ ನಿಯೋಜಿತ ಅಧ್ಯಕ್ಷರು ಆಗಿರುವ ಡಾ.ಬಿ.ಎನ್ ಪಾಟೀಲ್ “ಕೋವಿಡ್ ಸಾವುಗಳು ಹೆಚ್ಚುತ್ತಿವೆಯಲ್ಲ, ಅದರಲ್ಲಿ ಬಹುಪಾಲು ಸಾವುಗಳು ಸರ್ಕಾರದ ಅವ್ಯವಸ್ಥೆಯಿಂದಾದ ಸಾವುಗಳು. ಮುಖ್ಯವಾಗಿ ಆಮ್ಲಜನಕ ಕೊರತೆಯೇ ಈಗಿನ ಬಹುಪಾಲು ಸಾವಿಗಳಿಗೆ ಕಾರಣ. ನಮ್ಮ ಖಾಸಗಿ ಆಸ್ಪತ್ರೆಗಳನ್ನು ಬಿಟ್ಟು ಕೊಡಲೂ ನಾವು ರೆಡಿ ಆಗಬೇಕು. ಮೆಡಿಕಲ್ ಎಮರ್ಜೆನ್ಸಿ ಸದ್ಯದ ತುರ್ತು ಅಗತ್ಯ. ನಾವೆಲ್ಲ (ವೈದ್ಯರು) ಎಂ.ಎಸ್, ಎಂ.ಡಿ, ಸ್ಪೆಷಾಲಿಸ್ಟ್ ಈ ಎಲ್ಲ ಅಹಂಗಳಿಂದ ಹೊರಗೆ ಬಂದು ಅಸಹಾಯಕ ರೋಗಿಗಳ ಪರ ಕೆಲಸ ಮಾಡಬೇಕು. ಇಲ್ಲದಿದ್ದರೆ, ಇಲ್ಲಿ ಸಾವಿನ ಸಂಖ್ಯೆ ಹೆಚ್ಚಿದಂತೆ, ಲಾಕ್‌ಡೌನ್ ಕಾರಣಕ್ಕೆ ಆರ್ಥಿಕ ವ್ಯವಸ್ಥೆ ಕುಸಿದಂತೆ ವರ್ಗ ಸಂಘರ್ಷ ಸಂಭವಿಸಲಿದೆ. ಮುಂದೆ ಕೋವಿಡ್ ಸಾವು ನೋಡಿದ ಕುಟಂಬಗಳ ಜನರು ಆಸ್ಪತ್ರೆಗಳ ಮೇಲೆ ಕಲ್ಲು ತೂರಬಹುದು, ವೈದ್ಯರ ಮೇಲೆ ಹಲ್ಲೆ ಮಾಡಬಹುದು. ಆಹಾರ ಧಾನ್ಯ ಪಡೆಯಲು ದಂಗೆ ಏಳಬಹುದು… ಅಸಹಾಯಕ ಸ್ಥಿತಿಯಲ್ಲಿ ಜನ ಇನ್ನೇನು ಮಾಡುತ್ತಾರೆ? ಇದು ತೀರಾ ಬಿಕ್ಕಟ್ಟಿನ ಸಮಯ” ಎಂದು ಆತಂಕ ವ್ಯಕ್ತಪಡಿಸಿದರು.

ಡಾ. ಬಿ.ಎನ್ ಪಾಟೀಲ್ ಮತ್ತು ಅವರ ಪತ್ನಿ ಡಾ. ಪದ್ಮಾ ಪಾಟೀಲ್

“ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆ ಇದನ್ನೆಲ್ಲ ತಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನೋವಾಗುತ್ತಿದೆ, ನಮ್ಮ ಜನರಿಗೆ ನಾವು ಹೆಲ್ಪ್ ಮಾಡೋಕೂ ಒದ್ದಾಡ್ತಾ ಇದ್ದಿವಲ್ಲ” ಎಂದು ಹೆಸರು ಹೇಳಲಿಚ್ಚಿಸದ ಧಾರವಾಡ ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಹೇಳಿದ ಮಾತಿದು.

ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಯಾವುದು ಕೋವಿಡ್ ಸಾವು ಎಂದು ನಿರ್ಧರಿಸುವ ಮಾನದಂಡದ ವ್ಯಾಖ್ಯಾನವೇ ಇಲ್ಲ. ಹೀಗಾಗಿ ದಾಖಲೆಗಳಲ್ಲಿ ಕೋವಿಡ್ ಸಾವಿನ ಸಂಖ್ಯೆ ಕಡಿಮೆ ಕಾಣುತ್ತಿದೆ. ಮೆಡಿಕಲ್ ಎಮರ್ಜೆಸಿ ಲಾಗೂ ಮಾಡಿ ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳಬೇಕು’ ಎಂದರು.

ಗ್ರಾಮೀಣ ಹಿನ್ನೆಲೆಯ, 10ನೆ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ, ಈಗ ಗ್ರಾಮೀಣ ವಲಯದಲ್ಲೇ ಕೆಲಸ ಮಾಡುತ್ತಿರುವ ಈ ಇಬ್ಬರು ಯುವ ವೈದ್ಯರ ಆಕ್ರೋಶ, ಕಾಳಜಿ ಸರ್ಕಾರಕ್ಕೆ ಅರ್ಥವಾಗುತ್ತದೆಯೇ?

ಮೊನ್ನೆ ಡಾ. ಪಾಟೀಲ್ ಮತ್ತು ಅವರ ಪತ್ನಿ ಡಾ. ಪದ್ಮಾ ತಮ್ಮ ಅನ್ನದಾನೀಶ್ವರ ಆಸ್ಪತ್ರೆ ಮತ್ತು ಬಸವೇಶ್ವರ ಬ್ಯಾಂಕ್ (ಇದು ಸಿಂಧನೂರಿನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ನೇತೃತ್ವದ ಬ್ಯಾಂಕ್) ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಗೆ 100 ಜಂಬೋ ಸಿಲಿಂಡರ್ ವಿತರಿಸಿ, ಮಾಧ್ಯಮಗಳ ಎದುರು ಸರ್ಕಾರಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಡಾ. ಪದ್ಮಾ ಪಾಟೀಲ್ ಅವರನ್ನು ಮಾತಾಡಿಸಿದಾಗ, ‘ನಾನು ಹಳ್ಳಿ ಹಿನ್ನೆಲೆಯಿಂದಲೇ ಬಂದವಳು. ರಾಜಕೀಯ ಹಿನ್ನಲೆಯ ಕುಟುಂಬ ನಮ್ಮದು. ಈಗಿನ ಸಂದರ್ಭ ಹೇಗಿದೆ ಎಂದರೆ ಎಲ್ಲರೂ ಸಮರೋಪಾದಿಯಲ್ಲಿ ಕೆಲಸ ಮಾಡಲೇಬೇಕು. ನಮ್ಮ ಜೀವಗಳನ್ನು ರಕ್ಷಿಸಿಕೊಳ್ಳುತ್ತಲೇ ಅಸಹಾಯಕ ಜನಸಾಮಾನ್ಯರ ಜೀವಗಳನ್ನೂ ರಕ್ಷಿಸಬೇಕು. ರೊಕ್ಕ ಗಳಿಸಿದೋ ಆಮೇಲೆ ಇದ್ದೇ ಇರುತ್ತೆ. ಸರ್ಕಾರ ನಮ್ಮೆಲ್ಲ ವೈದ್ಯ ಸಿಬ್ಬಂದಿಯನ್ನು ದುಡಿಸಿಕೊಳ್ಳಲಿ’ ಎಂದರು.

ಕೇಂದ್ರ ಸರ್ಕಾರ, ಮೋದಿ ಸೇರಿದಂತೆ ನಮ್ಮ ಯಡಿಯೂರಪ್ಪ, ಸುಧಾಕರ್ ಈ ವಿಷಯ ಗಮನಿಸಲಿ. ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ, ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಸಾಧಿಸಿ ಎಂಬುದು ವೈದ್ಯರ ಅಭಿಪ್ರಾಯ ಕೂಡ ಆಗಿದೆ ಎಂಬುದನ್ನು ಅರಿತುಕೊಳ್ಳಲಿ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ ವೈಫಲ್ಯ: ನರೇಂದ್ರ ಮೋದಿ ಜನಪ್ರಿಯತೆ ದಿಢೀರ್ ಕುಸಿತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...