Homeಮುಖಪುಟರಾಷ್ಟ್ರೀಯ ಬಿಕ್ಕಟ್ಟೆಂದು ಘೋಷಿಸಿ ಬಿಡಗಾಸೂ ನೀಡಿಲ್ಲ: ಡಿ.ಕೆ.ಶಿವಕುಮಾರ್‌

ರಾಷ್ಟ್ರೀಯ ಬಿಕ್ಕಟ್ಟೆಂದು ಘೋಷಿಸಿ ಬಿಡಗಾಸೂ ನೀಡಿಲ್ಲ: ಡಿ.ಕೆ.ಶಿವಕುಮಾರ್‌

- Advertisement -

ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯಾತ್ಮಕವಾಗಿ ‘ಒಂದು ಪ್ರಶ್ನೆ’ ವಿಡಿಯೊ ಸರಣಿ ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮೂರನೇ ಕಂತನ್ನು ಬಿಡುಗಡೆ ಮಾಡಿದ್ದು, ‘ಕೋವಿಡ್‌ ಪರಿಹಾರ’ ಕುರಿತು ಪ್ರಸ್ತಾಪಿಸಿದ್ದಾರೆ.

“ನಾವು ರಾಜಕಾರಣಿಗಳು ಪ್ರಜ್ಞಾವಂತರನ್ನು ಗೌರವಿಸುತ್ತೇವೆ. ಪ್ರಜ್ಞಾವಂತರಿಗೆ ಈ ವಾರ ಕೇಳುವ ಪ್ರಶ್ನೆ, ಕೋವಿಡ್‌ನಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸಿದ್ದಾರೆ, ನೊಂದಿದ್ದಾರೆ, ಆದರೆ ಸರ್ಕಾರ ಪರಿಹಾರ ನೀಡದೆ ಇರುವುದು ಸರಿನಾ? ಇಲ್ಲವಾ?” ಎಂದು ಅವರು ಕೇಳಿದ್ದಾರೆ.

“ಮಳೆ ಹೆಚ್ಚಾದಾಗ, ಭೂಕಂಪವಾದಾಗ ಯಾವುದೇ ಸಂದರ್ಭಗಳಲ್ಲಿ ಸರ್ಕಾರ ಪರಿಹಾರಗಳನ್ನು ಘೋಷಣೆ ಮಾಡಿದೆ. ಕೋವಿಡ್‌ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಸರ್ಕಾರ ಬಿಡುಗಾಸು ಪರಿಹಾರ ನೀಡಿಲ್ಲ. ಕೋವಿಡ್‌ನಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ. ಸರ್ಕಾರವೇ ನಂಬರ್‌ ಬಿಡುಗಡೆ ಮಾಡಿದೆ. ಒಬ್ಬರಿಗೂ ಪರಿಹಾರ ನೀಡಿಲ್ಲ” ಎಂದು ಟೀಕಿಸಿದ್ದಾರೆ.

“ಆಯುಷ್ಮಾನ್‌ ಭಾರತ್‌ ಎಂದು ಮಾಡಿದ್ದಾರೆ. ಇಲ್ಲಿ ಸತ್ತವರಿಗೂ ಹಣವಿಲ್ಲ, ಸತ್ತ ಕುಟುಂಬಕ್ಕೂ ಪರಿಹಾರವಿಲ್ಲ, ಆಸ್ಪತ್ರೆ ಸೇರಿದವರಿಗೂ ಪರಿಹಾರವಿಲ್ಲ, ಕೆಲಸ ಕಳೆದುಕೊಂಡವರಿಗೂ ಪರಿಹಾರವಿಲ್ಲ. ಇದು ಸರಿನಾ ಎಂಬ ವಿಚಾರವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮ ಸಂಕಟಗಳನ್ನು ನಿಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನೊಂದಿಗೆ ಹಂಚಿಕೊಳ್ಳಿ” ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಿರುದ್ಯೋಗ ದಿನ ಆಚರಣೆ ಜತೆಗೆ ಪದವಿ ಸರ್ಟಿಫಿಕೇಟ್‌ ಪಿಎಂಗೆ ರವಾನಿಸಿ: ಡಿ.ಕೆ.ಶಿವಕುಮಾರ್‌

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗೂಡಾಚರ್ಚೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ

0
ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳಿಗಾಗಿ ಮಾಡಿಕೊಂಡ 2-ಬಿಲಿಯನ್ ಡಾಲರ್‌‌ ಪ್ಯಾಕೇಜ್‌ನ ಭಾಗವಾಗಿ 2017ರಲ್ಲಿ ಭಾರತ ಸರ್ಕಾರ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನೂ ಖರೀದಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ. ಫೆಡರಲ್ ಬ್ಯೂರೋ...
Wordpress Social Share Plugin powered by Ultimatelysocial