ಪ್ರಚಲಿತ ವಿದ್ಯಮಾನಗಳಿಗೆ ಪ್ರತಿಕ್ರಿಯಾತ್ಮಕವಾಗಿ ‘ಒಂದು ಪ್ರಶ್ನೆ’ ವಿಡಿಯೊ ಸರಣಿ ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೂರನೇ ಕಂತನ್ನು ಬಿಡುಗಡೆ ಮಾಡಿದ್ದು, ‘ಕೋವಿಡ್ ಪರಿಹಾರ’ ಕುರಿತು ಪ್ರಸ್ತಾಪಿಸಿದ್ದಾರೆ.
“ನಾವು ರಾಜಕಾರಣಿಗಳು ಪ್ರಜ್ಞಾವಂತರನ್ನು ಗೌರವಿಸುತ್ತೇವೆ. ಪ್ರಜ್ಞಾವಂತರಿಗೆ ಈ ವಾರ ಕೇಳುವ ಪ್ರಶ್ನೆ, ಕೋವಿಡ್‌ನಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸಿದ್ದಾರೆ, ನೊಂದಿದ್ದಾರೆ, ಆದರೆ ಸರ್ಕಾರ ಪರಿಹಾರ ನೀಡದೆ ಇರುವುದು ಸರಿನಾ? ಇಲ್ಲವಾ?” ಎಂದು ಅವರು ಕೇಳಿದ್ದಾರೆ.
‘ಒಂದು ಪ್ರಶ್ನೆ’ ಮೂರನೇ ವಿಡಿಯೊ: ‘ಕೋವಿಡ್ ಪರಿಹಾರ’ ಕುರಿತು ಡಿ.ಕೆ.ಶಿವಕುಮಾರ್ ಪ್ರಸ್ತಾಪ@DKShivakumar @INCKarnataka @CMofKarnataka #OnduPrashne #DKShivakumar pic.twitter.com/WD29CjmBKa
— Naanu Gauri (@naanugauri) September 19, 2021
“ಮಳೆ ಹೆಚ್ಚಾದಾಗ, ಭೂಕಂಪವಾದಾಗ ಯಾವುದೇ ಸಂದರ್ಭಗಳಲ್ಲಿ ಸರ್ಕಾರ ಪರಿಹಾರಗಳನ್ನು ಘೋಷಣೆ ಮಾಡಿದೆ. ಕೋವಿಡ್ ಬಿಕ್ಕಟ್ಟನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ, ಸರ್ಕಾರ ಬಿಡುಗಾಸು ಪರಿಹಾರ ನೀಡಿಲ್ಲ. ಕೋವಿಡ್‌ನಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ. ಸರ್ಕಾರವೇ ನಂಬರ್ ಬಿಡುಗಡೆ ಮಾಡಿದೆ. ಒಬ್ಬರಿಗೂ ಪರಿಹಾರ ನೀಡಿಲ್ಲ” ಎಂದು ಟೀಕಿಸಿದ್ದಾರೆ.
“ಆಯುಷ್ಮಾನ್ ಭಾರತ್ ಎಂದು ಮಾಡಿದ್ದಾರೆ. ಇಲ್ಲಿ ಸತ್ತವರಿಗೂ ಹಣವಿಲ್ಲ, ಸತ್ತ ಕುಟುಂಬಕ್ಕೂ ಪರಿಹಾರವಿಲ್ಲ, ಆಸ್ಪತ್ರೆ ಸೇರಿದವರಿಗೂ ಪರಿಹಾರವಿಲ್ಲ, ಕೆಲಸ ಕಳೆದುಕೊಂಡವರಿಗೂ ಪರಿಹಾರವಿಲ್ಲ. ಇದು ಸರಿನಾ ಎಂಬ ವಿಚಾರವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮ್ಮ ಸಂಕಟಗಳನ್ನು ನಿಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನೊಂದಿಗೆ ಹಂಚಿಕೊಳ್ಳಿ” ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನಿರುದ್ಯೋಗ ದಿನ ಆಚರಣೆ ಜತೆಗೆ ಪದವಿ ಸರ್ಟಿಫಿಕೇಟ್ ಪಿಎಂಗೆ ರವಾನಿಸಿ: ಡಿ.ಕೆ.ಶಿವಕುಮಾರ್