ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುವಂತೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಮುಖ್ಯಮಂತ್ರಿ ಡೇವಿಡ್ ಎ.ಬಿ. ಮಂಗಳವಾರ ತಮ್ಮ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಸಿಬಿಸಿ ನ್ಯೂಸ್ ವರದಿ ಮಾಡಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
ಉತ್ತರ ಅಮೆರಿಕಾದ ಹಲವಾರು ಪ್ರಾಂತ್ಯಗಳಲ್ಲಿ ಈ ಗುಂಪಿಗೆ ಸಂಬಂಧಿಸಿದ ಸುಲಿಗೆ ಪ್ರಕರಣಗಳನ್ನು ನಿಭಾಯಿಸುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ವರದಿಯಾಗಿದೆ. ದಕ್ಷಿಣ ಏಷ್ಯಾದ ವ್ಯಾಪಾರಿಗಳು ಎದುರಿಸುತ್ತಿರುವ ಅಪರಾಧಗಳನ್ನು ಪರಿಹರಿಸಲು ಸರ್ರೆಯಲ್ಲಿ ವಾರಾಂತ್ಯದಲ್ಲಿ ಸಾರ್ವಜನಿಕ ಸುರಕ್ಷತಾ ವೇದಿಕೆ ನಡೆದ ನಂತರ ಈ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಡೇವಿಗ್ ಒತ್ತಾಯಿಸಿದ್ದಾರೆ.
ದಕ್ಷಿಣ ಏಷ್ಯಾದ ಈ ವ್ಯಾಪಾರಿ ಸಮುದಾಯಕ್ಕೆ ಕೊಲೆ ಅಥವಾ ಹಿಂಸಾಚಾರದ ಬೆದರಿಕೆ ಹಾಕಿದ ನಂತರ ಸುಲಿಗೆ ಮಾಡಲಾಗುತ್ತಿದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ. ಬಿಷ್ಣೋಯ್ ಗ್ಯಾಂಗ್ ಅಂತಹ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.
ಪಂಜಾಬ್‌ನ ಗ್ಯಾಂಗ್‌ಸ್ಟರ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಕೇಂದ್ರ ಜೈಲಿನಲ್ಲಿದ್ದಾರೆ. ಅನೇಕ ಅಪರಾಧಗಳಿಗೆ ಸಂಬಂಧಿಸಿ ಅವರನ್ನು ಬಂಧನದಲ್ಲಿ ಇರಿಸಲಾಗಿದೆ. ಭಾರತ ಸರ್ಕಾರದ ಏಜೆಂಟರು ಉತ್ತರ ಅಮೆರಿಕಾದಲ್ಲಿ ಹಿಂಸಾಚಾರವನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಬಿಷ್ಣೋಯಿ ಗ್ಯಾಂಗ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಕೆನಡಾ ಸರ್ಕಾರ ಈ ಹಿಂದೆ ಆರೋಪ ಮಾಡಿವೆ.
“ಭಾರತದಲ್ಲಿ ಗ್ಯಾಂಗ್‌ಗಳು ನಮ್ಮ ಪ್ರಾಂತ್ಯದಲ್ಲಿ ಮತ್ತು ಇತರ ಪ್ರಾಂತ್ಯಗಳಲ್ಲಿ ವ್ಯವಹಾರ ಮಾಲೀಕರನ್ನು ಬೆದರಿಸಲು ಮತ್ತು ಸುಲಿಗೆ ಮಾಡಲು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪಗಳಿವೆ” ಎಂದು ಮುಖ್ಯಮಂತ್ರಿ ಡೇವಿಡ್ ಎಬಿ ಮಂಗಳವಾರ ವಿಕ್ಟೋರಿಯಾದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
“ಈ ಕೆಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಸ್ವಯಂ ಗುರುತಿಸಲ್ಪಟ್ಟ ಗ್ಯಾಂಗ್‌ಗಳಲ್ಲಿ ಒಂದಾದ ಲಾರೆನ್ಸ್ ಬಿಷ್ಣೋಯ್ ಗುಂಪನ್ನು ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಪಟ್ಟಿ ಮಾಡುವಂತೆ ಕೇಳಲು” ಪ್ರಧಾನಿ ಮಾರ್ಕ್ ಕಾರ್ನಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. ಗ್ಯಾಂಗ್‌ನ ಆಪಾದಿತ ಕಾರ್ಯಾಚರಣೆಗಳು ಬ್ರಿಟಿಷ್ ಕೊಲಂಬಿಯಾ, ಆಲ್ಬರ್ಟಾ ಮತ್ತು ಒಂಟಾರಿಯೊದಾದ್ಯಂತ ವಿಸ್ತರಿಸಿದೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಪಾತ್ರವಿದೆ ಎಂದು ಮುಂಬೈ ಪೊಲೀಸರು ಶಂಕಿಸಿದ್ದಾರೆ. ಮೇ 29, 2022 ರಂದು ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಬಿಷ್ಣೋಯ್ ವಿರುದ್ಧ ಆರೋಪ ಹೊರಿಸಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಶಾಸಕರ ಭತ್ಯೆ ತುರ್ತಾಗಿ ಹೆಚ್ಚಿಸುವ ಸರ್ಕಾರ, ಬಡ ಮಕ್ಕಳಿಗೆ ಶೂ ನೀಡಲು ಮೀನಮೇಷ ಎಣಿಸುತ್ತಿದೆ: ಎಐಡಿಎಸ್ಓ ಆಕ್ರೋಶ
ಶಾಸಕರ ಭತ್ಯೆ ತುರ್ತಾಗಿ ಹೆಚ್ಚಿಸುವ ಸರ್ಕಾರ, ಬಡ ಮಕ್ಕಳಿಗೆ ಶೂ ನೀಡಲು ಮೀನಮೇಷ ಎಣಿಸುತ್ತಿದೆ: ಎಐಡಿಎಸ್ಓ ಆಕ್ರೋಶ

