Homeಮುಖಪುಟರೈತ ಹೋರಾಟದ ಕಣದಲ್ಲಿ ದೀಪಾವಳಿ ಆಚರಣೆ ಹೀಗಿದೆ? ಫೋಟೊಗಳಲ್ಲಿ ನೋಡಿ

ರೈತ ಹೋರಾಟದ ಕಣದಲ್ಲಿ ದೀಪಾವಳಿ ಆಚರಣೆ ಹೀಗಿದೆ? ಫೋಟೊಗಳಲ್ಲಿ ನೋಡಿ

ಪಂಜಾಬಿ ಗಾಯಕ ಬಬ್ಬು ಮಾನ್ ದೀಪಾವಳಿ ಮತ್ತು ಬಂಡಿ ಚೋರ್ ದಿವಸ್ ಅನ್ನು ಪ್ರತಿಭಟನಾಕಾರರ ರೈತರೊಂದಿಗೆ ಆಚರಿಸಲು ಸಿಂಘು ಗಡಿಯನ್ನು ತಲುಪಿದ್ದಾರೆ.

- Advertisement -
- Advertisement -

ಇಂದು ನಾವು ದೀಪಾವಳಿ ಸಿಹಿ ತಿನಿಸುಗಳನ್ನು ಸವಿಯುವ ಮೊದಲು, ನಮಗೆಲ್ಲರಿಗೂ ಅನ್ನವನ್ನು ಬೆಳೆಯುವ ನಮ್ಮ ರೈತರ ಹಕ್ಕನ್ನು ರಕ್ಷಿಸುವುದಕ್ಕಾಗಿ ಐತಿಹಾಸಿಕ ರೈತ ಹೋರಾಟದ 650ಕ್ಕೂ ಹೆಚ್ಚು ಹುತಾತ್ಮರನ್ನು ಸ್ಮರಿಸಲು ದೀಪವನ್ನು ಬೆಳಗಿಸೋಣ ಎಂದು ಸಂಯುಕ್ತಿ ಕಿಸಾನ್ ಮೋರ್ಚಾ ಕರೆ ನೀಡಿದೆ.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ರೈತ ಹೋರಾಟ 11 ತಿಂಗಳುಗಳನ್ನು ಪೂರೈಸಿ ತನ್ನ ಮೊದಲ ದೀಪಾವಳಿಯನ್ನು ಆಚರಿಸುತ್ತಿದೆ. ಸಂಕ್ರಾತಿ, ಯುಗಾದಿ, ದಸರಾ, ವಿಜಯದಶಮಿ ಆಚರಿಸಿರುವ ರೈತರು ತನ್ನ ಮೊದಲ ವರ್ಷದ ಹೊತ್ತಿನಲ್ಲಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ.

ನಮ್ಮ ರೈತರು, ಕೂಲಿ ಕಾರ್ಮಿಕರು ಮತ್ತು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವವರಿಗೆ ಈ ದೀಪಾವಳಿಯಂದು ಒಂದು ದೀಪವನ್ನು ಬೆಳಗಿಸೋಣ ಎಂದು ಟ್ರ್ಯಾಕ್ಟರ್ ಟು ಟ್ವಿಟರ್ ಟ್ವೀಟ್ ಮಾಡಿದೆ.

ಪಂಜಾಬಿ ಗಾಯಕ ಬಬ್ಬು ಮಾನ್ ದೀಪಾವಳಿ ಮತ್ತು ಬಂಡಿ ಚೋರ್ ದಿವಸ್ ಅನ್ನು ಪ್ರತಿಭಟನಾಕಾರರ ರೈತರೊಂದಿಗೆ ಆಚರಿಸಲು ಸಿಂಘು ಗಡಿಯನ್ನು ತಲುಪಿದ್ದಾರೆ.
ಪ್ರಭಾವಿಯಾಗಿರುವ ಪಂಜಾಬಿ ಸಂಗೀತ ಉದ್ಯಮವು ತಮ್ಮ ಜೀವನದ ಕಠಿಣ ಹೋರಾಟದಲ್ಲಿ ಹೋರಾಡುತ್ತಿರುವ ನಮ್ಮ ರೈತರ ಪರವಾಗಿ ನಿಲ್ಲುವ ಅಗತ್ಯವಿದೆ ಎಂದು ಅದು ಹೇಳಿದೆ.

ರೈತರ ದೀಪಾವಳಿ ಬೆಂಬಲಿಸಿ ಹಲವಾರು ಜನ ಟ್ವೀಟ್ ಮಾಡಿದ್ದು ಅವುಗಳು ಇಲ್ಲಿವೆ.


ಇದನ್ನೂ ಓದಿ: ನವೆಂಬರ್ 26ರವರೆಗೆ ಸಮಯ ಕೊಡುತ್ತೇವೆ: ರೈತ ಮುಖಂಡ ರಾಕೇಶ್ ಟಿಕಾಯತ್ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...