ಹಲವಾರು ರಕ್ಷಣಾ ಸಾಮಗ್ರಿಗಳ ಖರೀದಿ ಯೋಜನೆಗಳಲ್ಲಿ ವಿಳಂಬ ಮತ್ತು ಸೈನಿಕ ವೇದಿಕೆಗಳ ಪೂರೈಕೆ ವೇಳಾಪಟ್ಟಿಯನ್ನು ಪಾಲಿಸದಿರುವ ಬಗ್ಗೆ ಭಾರತೀಯ ವಾಯುಸೇನೆಯ ಮುಖ್ಯಸ್ಥ ಅಮರ್ ಪ್ರೀತ್ ಸಿಂಗ್ ಗುರುವಾರ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ರಕ್ಷಣಾ ಖರೀದಿಯಲ್ಲಿ ವಿಳಂಬ
ಭಾರತೀಯ ಕೈಗಾರಿಕಾ ಒಕ್ಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮರ್ ಪ್ರೀತ್ ಸಿಂಗ್, ಸಮಯಸೂಚಿಗಳನ್ನು ಪಾಲಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಅದಾಗ್ಯೂ, ಅವರು ಯಾವ ಯೋಜನೆಗಳನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
“ನನಗೆ ಗೊತ್ತಿರುವ ಹಾಗೆ, ಯಾವುದೇ ಯೋಜನೆಯೂ ಸಮಯಕ್ಕೆ ಮುಗಿದಿಲ್ಲ” ಎಂದು ಅವರು ಹೇಳಿದ್ದು, ಆದರೆ ಸೈನ್ಯವು “ತಪ್ಪು ಮಾಡಿದವರನ್ನು ತಪ್ಪು ಮಾಡಿದವರು ಎಂದು ಬಹಿರಂಗವಾಗಿ ಹೇಳದಿರಲು ಆದ್ಯತೆ ನೀಡಿದೆ” ಎಂದು ಅವರು ತಿಳಿಸಿದ್ದಾರೆ.
ಇದು ಪರಿಶೀಲಿಸಬೇಕಾದ ವಿಷಯ ಎಂದು ಹೇಳಿದ ಅವರು, “ಸಾಧಿಸಲಾಗದದ್ದನ್ನು ನಾವು ಏಕೆ ಭರವಸೆ ನೀಡಬೇಕು?” ಎಂದು ಹೇಳಿದ್ದಾರೆ.
“ಒಪ್ಪಂದಕ್ಕೆ ಸಹಿ ಹಾಕುವಾಗ, ಕೆಲವೊಮ್ಮೆ, ಅದು ಆಗುವುದಿಲ್ಲ ಎಂದು ನಮಗೆ ಖಚಿತ ಗೊತ್ತಿರುತ್ತದೆ. ಆದರೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಮತ್ತು ಅದರ ನಂತರ ಏನು ಮಾಡಬಹುದು ಎಂದು ನೋಡುತ್ತೇವೆ… ನಿಸ್ಸಂಶಯವಾಗಿ ನಂತರ ಪ್ರಕ್ರಿಯೆಯು ದುರ್ಬಲಗೊಳ್ಳುತ್ತದೆ.” ಎಂದು ಅವರು ಹೇಳಿದ್ದಾರೆ.
ವಾಯು ಶಕ್ತಿ ಇಲ್ಲದೆ ಯಾವುದೇ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಲಾಗುವುದಿಲ್ಲ ಎಂದು ಅಮರ್ ಪ್ರೀತ್ ಸಿಂಗ್ ಹೇಳಿದ್ದು, ಆಪರೇಷನ್ ಸಿಂಧೂರ ಅದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ವಾಯು ಸೇನೆಯ ವಿಷಯದಲ್ಲಿ ನಮ್ಮ ಗಮನವು, ನಮಗೆ ಸಾಮರ್ಥ್ಯವಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಭಾರತದಲ್ಲಿ ಉತ್ಪಾದನೆಯ ಬಗ್ಗೆ ಮಾತ್ರ ಮಾತನಾಡಲು ಸಾಧ್ಯವಿಲ್ಲ, ನಾವು ಭಾರತದಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಪ್ರಾರಂಭಿಸಬೇಕಾಗಿದೆ.” ಎಂದು ಅವರು ಹೇಳಿದ್ದಾರೆ.
“ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಆತ್ಮನಿರ್ಭರ್ತ [ಸ್ವಾವಲಂಬನೆ] ಒಂದೇ ಪರಿಹಾರ ಎಂದು ನಮಗೆ ಅರಿತುಕೊಂಡಿದ್ದೇವೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಸಶಸ್ತ್ರ ಪಡೆಗಳಿಗೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ ನಮಗೆ ಏನು ಬೇಕು ಎಂಬುದರ ಸ್ಪಷ್ಟ ಕಲ್ಪನೆಯನ್ನು ನೀಡಿದೆ” ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಿಂದ 83 ತೇಜಸ್ ಎಂಕೆ 1ಎ ಫೈಟರ್ ಜೆಟ್‌ಗಳ ವಿತರಣೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಅಮರ್ ಪ್ರೀತ್ ಸಿಂಗ್ ಅವರ ಹೇಳಿಕೆಗಳು ಬಂದಿವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಲಘು ಯುದ್ಧ ವಿಮಾನದ ಒಪ್ಪಂದಕ್ಕೆ 2021 ರಲ್ಲಿ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯೊಂದಿಗೆ ಸಹಿ ಹಾಕಲಾಗಿತ್ತು.
ವಾಯುಪಡೆಯು 70 HTT-40 ಮೂಲ ತರಬೇತಿ ವಿಮಾನಗಳ ವಿತರಣೆಗಾಗಿ HAL ಜೊತೆ ಒಪ್ಪಂದಕ್ಕೆ ಸಹಿ ಹಾಕಿತ್ತು. ವಿಮಾನದ ಸೇರ್ಪಡೆ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಅದು ವಿಳಂಬವಾಗಿತ್ತು. ರಕ್ಷಣಾ ಖರೀದಿಯಲ್ಲಿ ವಿಳಂಬ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೇರಳದ 104 ಶಾಲೆಗಳನ್ನು ‘ಮಾದಕ ವಸ್ತು ತಾಣ’ಗಳೆಂದು ಗುರುತಿಸಿದ ಅಬಕಾರಿ ಇಲಾಖೆ; ವರದಿ
ಕೇರಳದ 104 ಶಾಲೆಗಳನ್ನು ‘ಮಾದಕ ವಸ್ತು ತಾಣ’ಗಳೆಂದು ಗುರುತಿಸಿದ ಅಬಕಾರಿ ಇಲಾಖೆ; ವರದಿ

