ಸಾಮಾಜಿಕ ಜಾಲತಾಣಗಳು ಹೊಸದನ್ನು ಕಲಿಯಲು, ಹೆಚ್ಚು ತಿಳಿದುಕೊಳ್ಳಲು, ಬೇಸರ ನಿವಾರಿಸಲು ಬಹಳಷ್ಟು ಸಹಾಯ ಮಾಡಿವೆ. ಆದರೆ ಕೆಲವರಿಗೆ ಇವು ಸಂಕಷ್ಟಗಳನ್ನು ಸಹ ತಂದಿವೆ. ಫೇಸ್‌ಬುಕ್ ನಲ್ಲಿ ಎಂದೋ, ಯಾವುದೋ ಮನಸ್ಥಿತಿಯಲ್ಲಿ ಹಾಕಿದ ಪೋಸ್ಟ್‌ಗಳು ಈಗ ಮತ್ತೆ ಕಾಣಿಸಿಕೊಂಡು ಕೆಲವರಿಗೆ ಮುಜುಗರ ಉಂಟು ಮಾಡುತ್ತಿರುವುದು ಹೌದು. ಹತ್ತು ವರ್ಷದ ಹಿಂದೆ ಹಾಕಿದ ಯಾವುದೋ ಫೋಟೊಗೆ ಯಾರಾದರೂ ಲೈಕ್ ಕಮೆಂಟ್ ಮಾಡಿದರೆ ಸಾಕು, ಅಥವಾ ಮೆಮೋರಿಸ್ ರೂಪದಲ್ಲಿ ಅದು ಮತ್ತೆ ಮೇಲೆ ಬಂದು ಕಾಣಿಸಿಕೊಳ್ಳುತ್ತದೆ. ಇದು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಕಷ್ಟವಾಗುತ್ತಿರಬಹುದು.
ಅಂತಹ ಸಮಸ್ಯೆಗೆ ಫೇಸ್‌ಬುಕ್ ಈಗ ಪರಿಹಾರ ನೀಡಿದೆ. ನಿಮ್ಮ ಮೊಬೈಲ್ ಫೇಸ್‌ಬುಕ್ ಆಪ್‌ನಲ್ಲಿ ಹಳೆಯ ಪೋಸ್ಟ್‌ಗಳನ್ನು ಒಟ್ಟಿಗೆ ಅಳಿಸುವ, ದಿನಾಂಕವಾರು ಅಳಿಸುವ ಅಥವಾ ವ್ಯಕ್ತಿವಾರು ಅಳಿಸುವ ಹೊಸ ಫ್ಯೂಚರ್ ಅನ್ನು ಫೇಸ್‌ಬುಕ್ ಬಿಡುಗಡೆ ಮಾಡಿದೆ.
“ಜನರು ತಮ್ಮ ಡೇಟಾವನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ನಾವು ನಂಬುತ್ತೇವೆ, ಮತ್ತು ಹೆಚ್ಚಿನ ಪಾರದರ್ಶಕತೆ ಮತ್ತು ನಿಯಂತ್ರಣಗಳನ್ನು ಒದಗಿಸುವ ಮೂಲಕ ಜನರ ಗೌಪ್ಯತೆಯನ್ನು ಗೌರವಿಸುವ ಹೊಸ ಮಾರ್ಗಗಳನ್ನು ನಾವು ಅಭಿವೃದ್ಧಿಪಡಿಸುತ್ತೇವೆ.” ಎಂದು ಫೇಸ್‌ಬುಕ್ ಹೇಳಿಕೊಂಡಿದೆ.
ಅಳಿಸುವುದು ಹೇಗೆ?
ನಿಮ್ಮ ಫೇಸ್‌ಬುಕ್‌ನಲ್ಲಿ ಪ್ರೈವೆಸಿ ಸೆಟ್ಟಿಂಗ್‌ನಲ್ಲಿ Activity Log ಒಪನ್ ಮಾಡಿ. ನಂತರ Manage Activity ಮೇಲೆ ಕ್ಲಿಕ್ ಮಾಡಿದರೆ ನೀವು ಫೇಸ್‌ಬುಕ್‌ನಲ್ಲಿ ಇದುವರೆಗೂ ಮಾಡಿದ ಚಟುವಟಿಕೆಗಳೆಲ್ಲವೂ ಗೋಚರಿಸುತ್ತವೆ. ಅವುಗಳಲ್ಲಿ ಬೇಡವಾದುದನ್ನು ಸೆಲೆಕ್ಟ್ ಮಾಡಿ ಡಿಲೀಟ್ ಮಾಡಬಹುದು.
ನಂತರ Filters ಮೇಲೆ ಕ್ಲಿಕ್ ಮಾಡಿದರೆ Categories ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಪೋಸ್ಟ್‌ಗಳು, ನೀವು ಟ್ಯಾಗ್ ಆಗಿರುವುದು, ನಿಮ್ಮ ಚಟುವಟಿಕೆಗಳು, ನಿಮ್ಮ ಗ್ರೂಪ್‌ಗಳು ಈ ರೀತಿ ತೆರೆದಕೊಳ್ಳುತ್ತದೆ. ನಿಮಗೆ ಬೇಡವಾಗಿದ್ದನ್ನು ಡಿಲೀಟ್ ಮಾಡಬಹುದು.
ಅದರ ಕೆಳಗಿನ Date ಮೇಲೆ ನೀವು ಕ್ಲಿಕ್ ಮಾಡಿದರೆ Start Date End Date ಇರುತ್ತದೆ. ಎಂದಿನಿಂದ ಎಂದಿನವರೆಗೆ ನಿಮಗೆ ಪೋಸ್ಟ್‌ಗಳು ಬೇಡ ಅದನ್ನು ನಮೂದಿಸಿ ಡಿಲಿಟ್ ಮಾಡಿದರೆ ಅಲ್ಲಿಗೆ ನಿಮ್ಮ ಅನಗತ್ಯ ಪೋಸ್ಟ್‌ಗಳು ಕಾಣೆಯಾಗುತ್ತವೆ.
ಇನ್ನು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ
Facebook का नया "MANAGE ACTIVITY" feature
Facebook के इस नए फीचर से Delete करें अपनी पुराने से पुरानी Photo, Video या Status, सिर्फ एक क्लिक से.
Posted by Tech Tak on Wednesday, June 3, 2020
ಟ್ವಿಟ್ಟರ್‌ನಲ್ಲಿ ಈ ಸಮಸ್ಯೆಗೆ ಬೇರೆ ಪರಿಹಾರ ಕಂಡುಕೊಂಡಿದೆ. ಬ್ರೆಜಿಲ್‌ನಲ್ಲಿ ಅಲ್ಪಕಾಲಿಕ ಟ್ವೀಟ್ಗಳನ್ನು ಕಳುಹಿಸುವ ಸಾಮರ್ಥ್ಯವನ್ನು “ಫ್ಲೀಟ್ಸ್” ಎಂದು ಕರೆಯಲಾಗುತ್ತದೆ – ಇದು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ.
ಫೇಸ್‌ಬುಕ್‌ನ ಅಂಗಸಂಸ್ಥೆಯಾದ ಇನ್‌ಸ್ಟಾಗ್ರಾಮ್ ನಲ್ಲಿನ ಪೋಸ್ಟ್‌ಗಳು ಯಾವಾಗಲೂ ಪೂರ್ವನಿಯೋಜಿತವಾಗಿರುತ್ತವೆ, ಅಂದರೆ ಸ್ವಲ್ಪ ಸಮಯದ ನಂತರ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತವೆ. 2017 ರಲ್ಲಿ ಕಂಪನಿಯು “ಆರ್ಕೈವ್” ವೈಶಿಷ್ಟ್ಯವನ್ನು ಪರಿಚಯಿಸಿತು, ಬಳಕೆದಾರರು ಸಾಕಷ್ಟು ಲೈಕ್‌ಗಳಿಲ್ಲದ ಚಿತ್ರಗಳನ್ನು ಅಳಿಸುವ ಪ್ರವೃತ್ತಿ ಹೆಚ್ಚುತ್ತಿದೆ.
ಇದನ್ನೂ ಓದಿ: ಮೂರೇ ವಾರಗಳಲ್ಲಿ ಟ್ವಿಟ್ಟರ್‌ನಲ್ಲಿ ಮೋದಿಯನ್ನು ಅನ್‌ಫಾಲೋ ಮಾಡಿದ ವೈಟ್‌ಹೌಸ್!


