ಎಎಪಿ ಸರ್ಕಾರದ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಎರಡು ದಿನಗಳ ಹಿಂದೆ ಕಲುಷಿತಗೊಂಡಿರುವ ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಚ್‌ದೇವ ಅವರಿಗೆ ಉಸಿರಾಟದ ತೊಂದರೆ ಹಾಗೂ ಚರ್ಮ ತುರಿಕೆ ಪ್ರಾರಂಭಗೊಂಡಿದ್ದರಿಂದ, ಅವರನ್ನು ಶನಿವಾರ (ಅ.26) ಬೆಳಗ್ಗೆ ಆರ್‌ಎಂಎಲ್ ನರ್ಸಿಂಗ್ ಹೋಮ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವರದಿಗಳು ಹೇಳಿವೆ.
ದೆಹಲಿ ಮಹಾನಗರದ ನಡುವೆ ಹರಿಯುವ ಯಮುನಾ ನದಿ ಕಳೆದ ಕೆಲ ವರ್ಷಗಳಿಂದ ಸಂಪೂರ್ಣ ಕಲುಷಿತಗೊಂಡಿದೆ. ಆಗಾಗ ನದಿಯ ನೀರು ಸಂಪೂರ್ಣ ವಿಷಕಾರಿ ನೊರೆಯಿಂದ ತುಂಬಿರುತ್ತದೆ. ಪ್ರಸ್ತುತ ನದಿಯ ನೀರು ನೊರೆ ಮರೆಯವಾಗಿದೆ.
ಅಕ್ಟೋಬರ್ 24ರಂದು ನಗರದೊಳಗೆ ಮತ್ತು ನದಿಯಲ್ಲಿ ವಿವಿಧ ರೀತಿಯ ಮಾಲಿನ್ಯಗಳು ಉಲ್ಬಣಗೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ ದೆಹಲಿಯ ಆಡಳಿತರೂಢ ಎಎಪಿ ಸರ್ಕಾರದ ವಿರುದ್ದ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಚ್‌ದೇವ ಅವರು ನದಿಯಲ್ಲಿ ಮುಳುಗೆದ್ದಿದ್ದರು.
मां यमुना जीवनदायिनी हैं । भारत की सबसे पवित्र नदियों में से एक हैं। परन्तु आज दिल्ली का कोई भी व्यक्ति यमुना के घाट पर पूजा नहीं कर सकता । छठ पर्व आ रहा है । हमारी माँ-बहनें पूजा कहां करेंगी ?
आज मैंने माँ यमुना जी के घाट पर डुबकी लगा कर एक दिल्ली वासी के तौर पर माँ यमुना से… pic.twitter.com/GasvllO0Vh
— Virendraa Sachdeva (@Virend_Sachdeva) October 24, 2024
ಯಮುನಾ ನದಿಯ ಶುದ್ಧೀಕರಣಕ್ಕೆ ಮೀಸಲಾಗಿರುವ ನಿಧಿಯನ್ನು ಎಎಪಿ ಸರ್ಕಾರ ಬಳಕೆ ಮಾಡುತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದರು. ಯಮುನಾ ನದಿ ಶುದ್ಧೀಕರಣಕ್ಕೆಂದು ಕೇಂದ್ರ ಸರ್ಕಾರ ಒದಗಿಸಿದ್ದ ರೂ. 8,500 ಕೋಟಿಯನ್ನು ಎಎಪಿ ಸರ್ಕಾರ ದುರಪಯೋಗಪಡಿಸಿಕೊಂಡಿದ್ದು, ಆ ಮೊತ್ತಕ್ಕೆ ಲೆಕ್ಕ ನೀಡಬೇಕು ಎಂದೂ ಅವರು ಆಗ್ರಹಿಸಿದ್ದರು.
ಸಚ್‌ದೇವ ಅವರು ಆಸ್ಪತ್ರೆ ಪಾಲಾಗಿರುವ ಕುರಿತು ಪ್ರಕಟಣೆ ಹೊರಡಿಸಿರುವ ದೆಹಲಿ ಬಿಜೆಪಿ , “ವಿರೇಂದ್ರ ಸಚ್‌ದೇವ ಅವರು ಗಂಭೀರ ಸ್ವರೂಪದ ಚರ್ಮ ತುರಿಕೆ ಅನುಭವಿಸುತ್ತಿದ್ದು, ಅವರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿದೆ. ಅವರಿಗೆ ಈ ಹಿಂದೆ ಚರ್ಮ ತುರಿಕೆ ಅಥವಾ ಉಸಿರಾಟದ ಸಮಸ್ಯೆ ಇರಲಿಲ್ಲ” ಎಂದು ತಿಳಿಸಿದೆ.
ಇದನ್ನೂ ಓದಿ : ಮಹಾರಾಷ್ಟ್ರ | ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಲು ಇಬ್ಬರು ಶಾಸಕರಿಗೆ ಕೋಟ್ಯಾಂತರ ರೂ. ಆಮಿಷ : ಕಾಂಗ್ರೆಸ್ ಆರೋಪ


