ದೆಹಲಿಯಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ನಡುವೆ ಬಿಜೆಪಿಯ ಮಹಿಳಾ ಪ್ರತಿಭಟನಾಕಾರರು ಚತ್ತರ್‌ಪುರದಲ್ಲಿರುವ ದೆಹಲಿ ಜಲ ಮಂಡಳಿ (ಡಿಜೆಬಿ) ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ನೀರಿನ ಸಮಸ್ಯೆ ಸಂಬಂಧ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ, ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾದಾಗ ದೆಹಲಿ ಜಲ ಮಂಡಳಿ ಕೋಟ್ಯಾಂತರ ರೂಪಾಯಿ ಲಾಭದಲ್ಲಿತ್ತು ಎಂದು ಹೇಳಿದ್ದಾರೆ.
They jailed Arvind Kejriwal and they even tried to kill him. Look at their HATRED.
BJP Goons destroying Delhi Jal Board Office; pic.twitter.com/VfaraaO44f
— Dr Ranjan (@AAPforNewIndia) June 16, 2024
“ಕೇಜ್ರಿವಾಲ್ ಅವರಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಡಿಜೆಬಿ ಅಧ್ಯಕ್ಷರಾಗಿ ಅಧಿಕಾರ ನೀಡಲಾಗಿದೆ. ಒಂದು ವರ್ಷಕ್ಕೂ ಹೆಚ್ಚಿನ ಆಡಿಟ್ ವರದಿ ಕಾಣೆಯಾಗಿದೆ. ಡಿಜೆಬಿ ಭಾರೀ ಸಾಲದಲ್ಲಿದೆ ಎಂಬುವುದು ವಿಚಿತ್ರ. ಎಎಪಿಯ ಎಲ್ಲಾ ಸಚಿವರು ದೆಹಲಿಯಲ್ಲಿ ನೀರು ಕದಿಯುತ್ತಿದ್ದಾರೆ, ಟ್ಯಾಂಕರ್ ಮಾಫಿಯಾ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ದಾಂಧಲೆ ಬೆನ್ನಲ್ಲೇ ನೀರಿನ ಪೈಪ್‌ಲೈನ್‌ಗಳನ್ನು ಕಾಪಾಡುವಂತೆ ಸಚಿವೆ ಅತಿಶಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಜಲ ಸಚಿವೆ ಅತಿಶಿ ಭಾನುವಾರ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರಿಗೆ ಪತ್ರ ಬರೆದಿದ್ದು, ಮುಂದಿನ 15 ದಿನಗಳವರೆಗೆ ಪ್ರಮುಖ ಪೈಪ್‌ಲೈನ್‌ಗಳಲ್ಲಿ ಗಸ್ತು ತಿರುಗುವಂತೆ, ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ವಿನಂತಿಸಿದ್ದಾರೆ.
“ಯಮುನಾ ನದಿಯಲ್ಲಿ ನೀರಿನ ಕೊರತೆಯಿಂದಾಗಿ, ನೀರಿನ ಉತ್ಪಾದನೆಯು ಸುಮಾರು 70 ಎಂಜಿಡಿಯಷ್ಟು ಕುಸಿದಿದೆ. ದೆಹಲಿಯ ಅನೇಕ ಭಾಗಗಳು ನೀರಿನ ಕೊರತೆಯನ್ನು ಅನುಭವಿಸುತ್ತಿವೆ. ಈ ಪರಿಸ್ಥಿತಿಯಲ್ಲಿ, ಪ್ರತಿ ಹನಿ ನೀರು ಅಮೂಲ್ಯವಾಗುತ್ತದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಮೇದಕ್ ಹಿಂಸಾಚಾರ: ಬಿಜೆಪಿ ಜಿಲ್ಲಾಧ್ಯಕ್ಷ ಸೇರಿ 9 ಮಂದಿಯ ಬಂಧನ


