ದೆಹಲಿ ಕಾರ್ ಸ್ಫೋಟಕ್ಕೂ ಮೊದಲು ಉಗ್ರ ಡಾ. ಉಮರ್-ಉನ್-ನಬಿ ಆತ್ಮಾಹುತಿ ಬಾಂಬ್ ದಾಳಿಯ ಬಗ್ಗೆ ಮಾತನಾಡಿದ್ದ ವಿಡಿಯೋವೊಂದು ಹೊರಬಿದ್ದಿದೆ.
ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 13 ಜನ ಸಾವನ್ನಪ್ಪಿದ ಒಂದು ವಾರದ ನಂತರ, ಬಾಂಬರ್ ಡಾ. ಉಮರ್ ಮೊಹಮ್ಮದ್ ಅಲಿಯಾಸ್ ಉಮರ್-ಉನ್-ನಬಿ ಸ್ವತಃ ಮಾತನಾಡಿದ ಮತ್ತು ದಿನಾಂಕವಿಲ್ಲದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ, ಭಯೋತ್ಪಾದಕ ಉಮರ್ ಆತ್ಮಹುತಿ ಬಾಂಬ್ ದಾಳಿಯನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದು ಹೇಳುತ್ತಾನೆ. ಜನರು ಮಾಡುವ ದೊಡ್ಡ ತಪ್ಪು ಎಂದರೆ ಬಾಂಬ್ ದಾಳಿ ಅಥವಾ ಆತ್ಮಹುತಿ ಬಾಂಬ್ ದಾಳಿಯ ಕಲ್ಪನೆ ನಿಜವಾಗಿಯೂ ಏನೆಂದು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದು ಎಂದು ಹೇಳುತ್ತಾನೆ. ಜೊತೆಗೆ ಆತ್ಮಾಹುತಿ ಬಾಂಬ್ ದಾಳಿಯನ್ನು ಹುತಾತ್ಮ ಕಾರ್ಯಾಚರಣೆ ಎಂದು ಕರೆದಿದ್ದಾರೆ.
ಈ ಬಗ್ಗೆ ವಿವರಿಸುತ್ತಾ ಆತ್ಮಾಹತ್ಯಾ ಬಾಂಬ್ ದಾಳಿಯನ್ನು ಬಹಳ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಆತ್ಮಹತ್ಯಾ ಬಾಂಬ್ ದಾಳಿ ಪರಿಕಲ್ಪನೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದ ಕಾರಣ ಆತ್ಮಹತ್ಯೆಗೆ ಇಸ್ಲಾಂನಲ್ಲಿ ವಿರೋಧವಿದೆ ಎನ್ನುತ್ತಾರೆ. ಆದರೆ ಇದು ಇಸ್ಲಾಂನಲ್ಲಿ ತಿಳಿದಿರುವ ಹುತಾತ್ಮ ಕಾರ್ಯಾಚರಣೆಯಾಗಿದೆ. ಈಗ, ಬಹು ವಿರೋಧಾಭಾಸಗಳಿವೆ; ಅದರ ವಿರುದ್ಧ ಹಲವಾರು ವಾದಗಳನ್ನು ತರಲಾಗಿದೆ” ಎಂದು ಯುವ ವೈದ್ಯ ವಿಡಿಯೋದಲ್ಲಿ ಹೇಳಿದ್ದಾನೆ.
“ಹುತಾತ್ಮತೆ” ಕಾರ್ಯಾಚರಣೆ ಎಂದರೆ ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಸ್ಥಳ ಮತ್ತು ಸಮಯದಲ್ಲಿ ತಾನು ಸಾಯುತ್ತೇನೆ ಎಂದು ಗೊತ್ತಿರುತ್ತದೆ. ಆದರೆ ಯಾರೂ ಯಾವಾಗ ಅಥವಾ ಎಲ್ಲಿ ಸಾಯುತ್ತಾರೆ ಎಂಬುದನ್ನು ನಿಖರವಾಗಿ ಊಹಿಸಲು ಸಾಧ್ಯವಿಲ್ಲ ಮತ್ತು ಅದು ಯಾವಾಗ ಬೇಕಾದರೂ ಸಂಭವಿಸುತ್ತದೆ ಎಂದು ಉಮರ್ ಹೇಳುತ್ತಾನೆ. ಅಲ್ಲದೆ “ಸಾವಿಗೆ ಭಯಪಡಬೇಡಿ” ಎಂದು ಸಹ ವೈದ್ಯ ಹೇಳುತ್ತಾನೆ.
ಇಸ್ಲಾಂನಲ್ಲಿ ಆತ್ಮಹತ್ಯೆಯನ್ನು ನಿಷೇಧಿಸಲಾಗಿದೆ. ಆದರೆ ಆತ್ಮಹತ್ಯಾ ಬಾಂಬ್ ದಾಳಿಯನ್ನು “ಹುತಾತ್ಮತೆ”ಯ ಕೃತ್ಯವೆಂದು ಉಮರ್ ವಿಡಿಯೋದಲ್ಲಿ ಸಮರ್ಥಿಸುತ್ತಿರುವಂತೆ ತೋರುತ್ತದೆ.
ಈ ವಿಡಿಯೋದಲ್ಲಿ, ಉಮರ್ ಇಂಗ್ಲಿಷ್‌ನಲ್ಲಿ ಮಾತನಾಡಿದ್ದು, ಸಾಕಷ್ಟು ಸ್ಪಷ್ಟವಾಗಿ ಹೇಳುವುದರಿಂದ ಉಮರ್ ಆತ್ಮಹತ್ಯಾ ಬಾಂಬ್ ದಾಳಿ ಮತ್ತು “ಹುತಾತ್ಮತೆ” ಯಂತಹ ವಿಷಯಗಳ ಬಗ್ಗೆ ಆಳವಾಗಿ ಯೋಚಿಸಿದ್ದನೆಂದು ತಿಳಿಯುತ್ತದೆ.ದಲ್ಲಿ
ಅಲ್ಲದೆ ಆಥ ಸಂಪೂರ್ಣವಾಗಿ ಮೂಲಭೂತವಾದಿಯಾಗಿದ್ದನೆಂಬುದನ್ನು ಸೂಚಿಸುತ್ತದೆ. ವಿಡಿಯೋದಲ್ಲಿ ಶಾಂತ, ಸಂಯಮದ ವ್ಯಕ್ತಿಯಂತೆ ಕಾಣಿಸುಕೊಂಡಿರುವ ಉಮರ್ ನಬಿ, ಆ ಮೂಲಕ ಘೋರ ಕೃತ್ಯವನ್ನು ಸಮರ್ಥಿಸಿಕೊಳ್ಳುವುದನ್ನು ತೋರಿಸುತ್ತದೆ.


