ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಇನ್ನೆರೆಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಭಾನುವಾರ ಮಧ್ಯಾಹ್ನ ಘೋಷಿಸಿದ್ದಾರೆ. ದೆಹಲಿ ಅಬಕಾರಿ ಪ್ರಕರಣದಲ್ಲಿ ಜಾಮೀನು ಪಡೆದು ಆರು ತಿಂಗಳ ನಂತರ ತಿಹಾರ್ ಜೈಲಿನಿಂದ ಹೊರಬಂದು ನಿರ್ಧಾರ ಪ್ರಕಟಿಸಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವಾಗ ಅವರು ತಮ್ಮ ನಿರ್ಧಾರ ಅವರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಮ್ ಆದ್ಮಿ ಪಕ್ಷದ ಭವಿಷ್ಯ ಈಗ ಸಾರ್ವಜನಿಕರ ಕೈಯಲ್ಲಿದೆ ಎಂದ ಅವರು, ಫೆಬ್ರವರಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ನವೆಂಬರ್‌ನಲ್ಲಿಯೇ ನಡೆಸಬೇಕೆಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ. “ತಾನು ಯಾವುದೇ ಸ್ಥಾನವನ್ನು ಹೊಂದಿರುವುದಿಲ್ಲ ಮತ್ತು ಹೊಸ ಜನಾದೇಶದ ನಂತರ ಮಾತ್ರ ತಾನು ಸರ್ಕಾರದ ಭಾಗವಾಗಲಿದ್ದೇನೆ. ಜನರು ‘ಪ್ರಾಮಾಣಿಕತೆಯ ಪ್ರಮಾಣಪತ್ರ’ ನೀಡುವವರೆಗೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ” ಎಂದು ಅವರು ಶಪಥ ಮಾಡಿದ್ದಾರೆ. Arvind Kejriwal
ಇದನ್ನೂಓದಿ: ‘ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ’: ಬಿಜೆಪಿಗೆ ಸಿದ್ದರಾಮಯ್ಯ
“ಜೈಲಿನಿಂದ ಹೊರ ಬಂದ ನಂತರ ಅಗ್ನಿಪರೀಕ್ಷೆಗೆ ಒಳಗಾಗಲು ನಾನು ಬಯಸುತ್ತೇನೆ. ನಾವು ಪ್ರಾಮಾಣಿಕರು ಎಂದು ಜನರು ಹೇಳಿದಾಗ ಮಾತ್ರ ನಾನು ಮುಖ್ಯಮಂತ್ರಿ ಮತ್ತು ಸಿಸೋಡಿಯಾ ಅವರು ಉಪ ಮುಖ್ಯಮಂತ್ರಿಯಾಗುತ್ತಾರೆ” ಎಂದು ಅವರು ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ನೂತನ ಮುಖ್ಯಮಂತ್ರಿಯನ್ನು ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ತಮ್ಮ ಭಾಷಣದಲ್ಲಿ ಅವರು ಕೇಂದ್ರ ಸರ್ಕಾರವು ಬ್ರಿಟಿಷ್ ವಸಾಹತುಶಾಹಿಗಿಂತ ಹೆಚ್ಚು ಸರ್ವಾಧಿಕಾರಿಯಾಗಿದೆ ಎಂದು ಆರೋಪಿಸಿದ್ದು, ಕೇಂದ್ರ ಸರ್ಕಾರ ರೂಪಿಸಿರುವ ಷಡ್ಯಂತ್ರಗಳು ಅವರ ‘ಬಂಡೆ ಕಲ್ಲಿನಂತಹ ಸಂಕಲ್ಪ’ವನ್ನು ಮುರಿಯುವುದಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರಕ್ಕಾಗಿ ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಕೇಜ್ರಿವಾಲ್ ಪ್ರತಿಜ್ಞೆ ಮಾಡಿದ್ದಾರೆ.
ವಿಡಿಯೊ ನೋಡಿ: ಚಕ್ರವರ್ತಿ ಸೂಲಿಬೆಲೆ ಪ್ರತಾಪ್ ಸಿಂಹ ಜಗಳವಾಡ್ತಿರೋದು ಏಕೆ? ಫುಲ್ ಎಪಿಸೋಡ್ Sulibele versus Pratap Simha


