Homeಮುಖಪುಟದಿಲ್ಲಿಯಲ್ಲೀಗ ಉಚಿತ ಇಂಟರ್ನೆಟ್‌: ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ ಎಂದ ಕೇಜ್ರಿವಾಲ್

ದಿಲ್ಲಿಯಲ್ಲೀಗ ಉಚಿತ ಇಂಟರ್ನೆಟ್‌: ಕೊಟ್ಟ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ ಎಂದ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನೀಡಿದ 70  ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. 

- Advertisement -
- Advertisement -

ಉಚಿತ ವಿದ್ಯುತ್, ನೀರು, ಬಸ್, ಸಿಸಿಟಿವಿ, ಈಗ ಉಚಿತ ವೈಫೈ …. ಹೀಗೆ 2015ರ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ್ದ ಪ್ರಣಾಳಿಕೆಗಳಲ್ಲಿನ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

2015 ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ 70 ಭರವಸೆಗಳನ್ನು ನೀಡಿದ್ದೆವು. ಅಧಿಕಾರಕ್ಕೆ ಬಂದ ನಂತರ ಹಂತ ಹಂತವಾಗಿ ಎಲ್ಲವನ್ನು ಈಡೇರಿಸಿದ್ದೇವೆ ಈಗ ಫ್ರಿ ವೈಫೈ ಕೊಡುವುದು ಕೊನೆಯದಾಗಿದೆ. ಆ ಮೂಲಕ ಪೂರ್ಣ ಉಚಿತ ವೈಫೈ ಪಡೆದ ಜಗತ್ತಿನ ಮೊದಲ ನಗರ ದೆಹಲಿಯಾಗಲಿದೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಯಾವ ಭರವಸೆಗಳನ್ನು ನೀಡಿದ್ದರು ಎಂಬುದನ್ನು ರಾಜಕಾರಣಿಗಳಿರಲಿ ಜನರೇ ಮರೆತುಬಿಡುತ್ತಿದ್ದಾರೆ. ಅದೇ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನೀಡಿದ 70  ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಈ ಸಮಯದಲ್ಲಿ ಕೇಜ್ರಿವಾಲ್, ತಮ್ಮ ಸರ್ಕಾರವು ತನ್ನ ಪ್ರಣಾಳಿಕೆಯ ಕೊನೆಯ ಚುನಾವಣಾ ಭರವಸೆಯಾದ ದೆಹಲಿಯ ಎಲ್ಲರಿಗೂ ಉಚಿತ ಇಂಟರ್‌ನೆಟ್‌ ನೀಡುವುದು ಸಹ ಈಡೇರಿಸಿದೆ ಮತ್ತು ಅವರ ಎಲ್ಲಾ ಭರವಸೆಗಳನ್ನು ಈಡೇರಿಸಿದ ಮೊದಲ ಸರ್ಕಾರ ತಮ್ಮದಾಗಿದೆ ಎಂದು ಹೇಳಿದ್ದಾರೆ.

ಇದನ್ನು ಪತ್ರಿಕಾಗೊಷ್ಟಿಯಲ್ಲಿ ಘೋಷಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಇಂಟರ್ನೆಟ್ ಇಂದು ಮೂಲಭೂತ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.

ಪಾಂಚ್‌ಸಾಲ್‌ ಕೇಜ್ರಿವಾಲ್‌ ಜೊತೆಗೆ ಪಾನಿ ಮಾಫ್‌, ಬಿಜಿಲಿ ಆಫ್‌ ಎಂಬ ಘೋಷಣೆಯನ್ನು ಸಹ ಚುನಾವಣಾ ಪೂರ್ವದಲ್ಲಿ ಆಮ್‌ ಆದ್ಮಿ ಸರ್ಕಾರ ಘೋಷಿಸಿತ್ತು. ಈಗ ಅದರಂತೆ ನಡೆದುಕೊಂಡಿದೆ. ಪಾನಿ ಮಾಫ್‌ ಎಂಬ ಘೋಷಣೆಯಂತೆ ದೆಹಲಿ ಸರ್ಕಾರವು ಪ್ರತಿ ಮನೆಗೆ 20 ಕಿಲೋಲಿಟರ್ (20,000 ಲೀಟರ್) ಉಚಿತ ನೀರನ್ನು ಜಲ ಮಂಡಳಿಯ ಮೀಟರ್ ಮೂಲಕ ಒದಗಿಸುತ್ತಿದೆ.

ಬಿಜಿಲಿ ಆಫ್‌ ವಿಚಾರಕ್ಕೆ ಬಂದರೆ 200 ಯೂನಿಟ್‌ವರೆಗೆ ದೆಹಲಿಯ ಪ್ರತಿಮನೆಗೆ ಉಚಿತ್‌ ವಿದ್ಯುತ್‌ ಒದಗಿಸುತ್ತಿದೆ. 200 ಯೂನಿಟ್‌ ಗೂ ಹೆಚ್ಚು ಬಳಕೆದಾರರಿಗೆ ಮಾತ್ರ ಶುಲ್ಕ ವಿಧಿಸುತ್ತಿದೆ. ಸುಮಾರು 35 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆದಿವೆ ಎಂದು ವಿದ್ಯುತ್ ಸರಬರಾಜು ಕಂಪನಿಗಳಾದ ಬಿಎಸ್‌ಇಎಸ್ ಮತ್ತು ಟಾಟಾ ಪವರ್-ಡಿಡಿಎಲ್ ದತ್ತಾಂಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ದೆಹಲಿಯ 14 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್‌ ಕೊಟ್ಟ ಕೇಜ್ರಿವಾಲ್‌ ಸರ್ಕಾರ!!

ಐದು ವರ್ಷಗಳ ಅವಧಿಯಲ್ಲಿ ದೆಹಲಿಗೆ 5,000 ಹೊಸ ಬಸ್‌ಗಳನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ‌ಆದರೆ ಈ ವಿಷಯವು ಟೆಂಡರ್‌ನಲ್ಲಿ ಸಿಲುಕಿಕೊಳ್ಳುತ್ತಲೇ ಇತ್ತು. ಬಸ್‌ಗಳ ನಿರ್ವಹಣೆಯ ಜವಾಬ್ದಾರಿಯನ್ನು ಕಂಪನಿಗಳು ವಹಿಸಿಕೊಳ್ಳಬೇಕು ಎಂದು ಸರ್ಕಾರ ವಾದಿಸಿತು. ಅದೇ ಸಮಯದಲ್ಲಿ ದೆಹಲಿ ಸರ್ಕಾರವು ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬ ಕಂಪನಿಗಳ ಬೇಡಿಕೆ ಇತ್ತು. ಈ ಘರ್ಷಣೆಯಿಂದಾಗಿ ದೆಹಲಿಗೆ ಹೊಸ ಬಸ್‌ಗಳನ್ನು ತರಲು ವಿಳಂಬವಾಯಿತು. ಹಾಗಾಗಿ ಇದುವರೆಗೆ ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ತರಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆಗೆ ಜಗನ್‌ ಸರ್ಕಾರ ಒಪ್ಪಿಗೆ

ದೆಹಲಿಯಲ್ಲಿ ಅಪರಾಧಗಳ ತಡೆಗಟ್ಟುವಿಕೆಗಾಗಿ, ಸಾರ್ವಜನಿಕ ಸ್ಥಳಗಳು ಮತ್ತು ಬಸ್‌ಗಳಲ್ಲಿ ಮೊದಲ ಹಂತದಲ್ಲಿ 1,40,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈಗ ಎರಡನೇ ಹಂತದಲ್ಲಿ 140,000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಯೋಜನೆ ಪ್ರಗತಿಯಲ್ಲಿದೆ.

ದೆಹಲಿಯ ಮೊಹಲ್ಲಾ ಕ್ಲಿನಿಕ್‌ಗಳು ಉಚಿತ ವೈದ್ಯಕೀಯ ಸೇವೆ ನೀಡುವುದರಲ್ಲಿ ಖ್ಯಾತಿ ಗಳಿಸಿವೆ. ಹಾಗೆಯೇ ಸರ್ಕಾರಿ ಶಾಲೆಗಳಿಗೆ ಹೈಟೆಕ್‌ ಸ್ಪರ್ಶ ನೀಡಿದ್ದರಿಂದ ಅವುಗಳು ಮಿಂಚುವುದರ ಜೊತೆಗೆ ಹ್ಯಾಪಿನೆಸ್‌ ಪಠ್ಯಕ್ರಮ ಎಲ್ಲವೂ ದೆಹಲಿ ಸರ್ಕಾರಕ್ಕೆ ಕ್ರೆಡಿಟ್‌ ತಂದುಕೊಟ್ಟಿವೆ. ಇವು ಫಲಿತಾಂಶಗಳಲ್ಲಿಯೂ ಸಕರಾತ್ಮಕ ಬದಲಾವಣೆ ತಂದಿವೆ.

ಈಗ ಉಚಿತ ಇಂಟರ್ನೆಟ್‌ ನೀಡಲು ಕೇಜ್ರಿವಾಲ್ ಸರ್ಕಾರ ಮೊದಲ ಹಂತದಲ್ಲಿ 11 ಸಾವಿರ ವೈ-ಫೈ ಹಾಟ್ ಸ್ಪಾಟ್‌ಗಳನ್ನು ಸ್ಥಾಪಿಸಲಿದೆ. ಈ ಯೋಜನೆಗೆ 100 ಕೋಟಿ ರೂ ಖರ್ಚಾಗಲಿದ್ದು ಇದರಿಂದಾಗಿ 22 ಲಕ್ಷ ಜನರಿಗೆ ಏಕಕಾಲದಲ್ಲಿ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತದೆ.

ಡಿಸೆಂಬರ್ 16 ರಿಂದ ಉಚಿತ ವೈ-ಫೈ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಆರಂಭದಲ್ಲಿ 100 ವೈ-ಫೈ ಹಾಟ್ ಸ್ಪಾಟ್‌ಗಳನ್ನು ಸ್ಥಾಪಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ ಅವುಗಳ  ಸಂಖ್ಯೆ 11 ಸಾವಿರ ತಲುಪಲಿದೆ ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...