ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳಂತೆ ಸೋಗು ಹಾಕಿ ದೆಹಲಿಯ ವ್ಯಕ್ತಿಯೊಬ್ಬರಿಂದ 5 ಕೋಟಿ ರೂಪಾಯಿ ಸುಲಿಗೆಗೆ ಯತ್ನಿಸಿರುವ ಘಟನೆ ದೆಹಲಿಯ ಚತ್ತರ್‌ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 7 ಜನರ ತಂಡ ಇಡಿ ಅಧಿಕಾರಿಗಳಂತೆ ವ್ಯಕ್ತಿಯ ಮನೆಗೆ ದಾಳಿ ಮಾಡಿದ್ದಾಗಿ ಹೇಳಿದ್ದರು. ಆದಾಗ್ಯೂ, ಸಂತ್ರಸ್ತ ವ್ಯಕ್ತಿಯ ವಕೀಲ ಅಧಿಕಾರಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ದೆಹಲಿ
ಅಶೋಕ ಅವೆನ್ಯೂ, ಡಿಎಲ್‌ಎಫ್ ಫಾರ್ಮ್ಸ್‌ನಲ್ಲಿರುವ ನಿವಾಸದಲ್ಲಿ ಇಡಿ ಅಧಿಕಾರಿಗಳ ಸೋಗು ಹಾಕಿದ್ದ ವ್ಯಕ್ತಿಗಳ ಗುಂಪು ಸುಳ್ಳು ಇಡಿ ಹುಡುಕಾಟ ನಡೆಸುತ್ತಿದೆ ಎಂದು ಅಕ್ಟೋಬರ್ 22 ರಂದು ನಮಗೆ ಮಾಹಿತಿ ಸಿಕ್ಕಿತು. ಇಡಿ ದಾಳಿಯ ನೆಪದಲ್ಲಿ ಮನೆ ಮಾಲೀಕರನ್ನು ಹೌಜ್ ಖಾಸ್‌ನಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಕರೆದೊಯ್ದು ಆತನ ಬ್ಯಾಂಕ್ ಖಾತೆಯಿಂದ 5 ಕೋಟಿ ರೂ. ಲಪಟಾಯಿಸಲು ಪ್ರಯತ್ನಿಸಿದ್ದರು ಎಂದು ಇಡಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ತಕ್ಷಣವೇ ಇಡಿ ತಂಡವನ್ನು ಬ್ಯಾಂಕ್‌ಗೆ ಕಳುಹಿಸಲಾಗಿದ್ದು, ಸ್ಥಳೀಯ ಪೊಲೀಸರಿಗೂ ತಿಳಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಸಹಾಯ ಮಾಡಿದರು. ಅದಕ್ಕಿಂತ ಮುಂದೆ ಬ್ಯಾಂಕ್ ತಲುಪಿದ್ದ ಸಂತ್ರಸ್ತ ವ್ಯಕ್ತಿಯ ವಕೀಲ, ವಂಚಕರ ಗುರುತಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಅಷ್ಟರಲ್ಲಿ ಅಪಾಯ ಅರಿತ ಅವರು ಬ್ಯಾಂಕ್‌ನಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದಾಳಿಯ ವೇಳೆ ಇಡಿ ಅಧಿಕಾರಿಗಳು ಎಂದು ಹೇಳಿಕೊಂಡ ಏಳು ವ್ಯಕ್ತಿಗಳು ಎರಡು ಕಾರುಗಳಲ್ಲಿ ಹಿಂದಿನ ರಾತ್ರಿ ಅವರ ಮನೆಗೆ ಬಂದಿದ್ದರು ಎಂದು ಸಂತ್ರಸ್ತ ವ್ಯಕ್ತಿ ಹೇಳಿದ್ದಾರೆ. ಅವರಲ್ಲಿ ಕೆಲವರು ತಮ್ಮ ಗುರುತನ್ನು ಮರೆಮಾಚಲು ಮುಖವಾಡಗಳನ್ನು ಧರಿಸಿದ್ದರು. ಆದರೆ ಮೂವರು ಮುಖವಾಡಗಳಿಲ್ಲದೆ ಸಂವಾದ ನಡೆಸಿದ್ದರು. ಈ ವೇಳೆ ಅವರು ಸಂತ್ರಸ್ತ ವ್ಯಕ್ತಿಯು ಇತ್ತಿಚೆಗೆ ನಡೆಸಿದ್ದ ಬ್ಯಾಂಕ್ ವ್ಯವಹಾರಗಳನ್ನು ಪ್ರಶ್ನಿದ್ದರು ಎಂದು ಅವರು ಹೇಳಿದ್ದಾರೆ.
ವಂಚಕರು ಅವರ ಕೆಲವು ಹಳೆಯ ಚೆಕ್‌ಗಳನ್ನು ಮುಂದಿರಿಸಿ, ದೊಡ್ಡ ಮೊತ್ತದ ಹಣ ನೀಡಲು ಒಪ್ಪದಿದ್ದರೆ ಬಂಧಿಸುವ ಬೆದರಿಕೆ ಹಾಕಿದ್ದರು. ಆಗ ಸಂತ್ರಸ್ತ ವ್ಯಕ್ತಿ ಮರುದಿನ ಬೆಳಿಗ್ಗೆ ಬ್ಯಾಂಕ್‌ನಿಂದ ಹಣ ಪಡೆದು ನೀಡುವುದಾಗಿ ಹೇಳಿದ್ದು, ಆಗ ನಕಲಿ ಅಧಿಕಾರಿಗಳು ರಾತ್ರಿಯಿಡೀ ಅವರ ಮನೆಯಲ್ಲಿಯೇ ಕಳೆದಿದ್ದರು. ದೆಹಲಿ
ಸಂತ್ರಸ್ತ ವ್ಯಕ್ತಿಯ ಮನೆಯ ಗೇಟ್‌ಗಳಿಗೆ ಬೀಗ ಹಾಕಿದ್ದರಿಂದ ದುಷ್ಕರ್ಮಿಗಳು ತಮ್ಮ ಕಾರುಗಳನ್ನು ಅವರ ನಿವಾಸದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ ಪೊಲೀಸರು ಸಂತ್ರಸ್ತ ವ್ಯಕ್ತಿಯ ಹೇಳಿಕೆಯನ್ನು ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ. ಅವರು ಬಿಟ್ಟು ಹೋಗಿರುವ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಜಾರ್ಖಂಡ್ | ಸಿಎಂ ವಿರುದ್ಧ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲದೆ ಪಕ್ಷದೊಳಗೆಯೆ 5 ಕೋಟಿ ರೂ. ನೀಡಲು ಮುಂದಾದ ಬಿಜೆಪಿ!


