ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಗೂಂಡಾಗಿರಿ’ ನಡೆಸುತ್ತಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾನುವಾರ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಫೆಬ್ರವರಿ 5 ರ ಚುನಾವಣೆಯಲ್ಲಿ ಎಎಪಿ “ನಿರ್ಣಾಯಕ ಗೆಲುವಿನ”ತ್ತ ಸಾಗುತ್ತಿದೆ, ಇದು ಬಿಜೆಪಿ ನಾಯಕರನ್ನು, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು “ಗೊಂದಲ ಮತ್ತು ಹತಾಶೆಗೆ” ತಳ್ಳಿದೆ ಎಂದು ಹೇಳಿದ್ದಾರೆ.
“ಎಎಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಿದೆ ಮತ್ತು ಅಮಿತ್ ಶಾ ಗೊಂದಲಕ್ಕೊಳಗಾಗಿದ್ದಾರೆ. ಸೋಲನ್ನು ಅನುಭವಿಸುವ ಕಾರಣ ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ” ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಎಎಪಿ ಸ್ವಯಂಸೇವಕರು ಮತ್ತು ಬೆಂಬಲಿಗರನ್ನು ಬೆದರಿಸಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಮ್ಮ ನಾಯಕರು ಮತ್ತು ಬೆಂಬಲಿಗರಿಗೆ ಬಿಜೆಪಿ ಸೇರುವಂತೆ ಬೆದರಿಕೆ ಹಾಕಲಾಗುತ್ತಿದೆ, ಇಲ್ಲವೆಂದರೆ ಬಂಧನ ಮತ್ತು ದಾಳಿಗಳನ್ನು ಎದುರಿಸಲು ಸಿದ್ದರಾಗಿ ಎಚ್ಚರಿಸುತ್ತಿದ್ದಾರೆ. ಆದರೆ ನಾವು ಭಯಪಡುವುದಿಲ್ಲ. ದೆಹಲಿಯು ಅಂತಹ ಬೆದರಿಕೆ ತಂತ್ರಗಳನ್ನು ಸಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ, ಕೇಜ್ರಿವಾಲ್ ಅವರು ‘AmitShahKiGoondagardi’ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಎಕ್ಸ್‌ನಲ್ಲಿ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
बीजेपी बुरी तरह से हार रही है। अमित शाह जी बुरी तरह से बौखला गए हैं। अब वो दिल्ली के लोगों पर सीधे-सीधे हमले करवा रहे हैं। जगह-जगह लोगों को खुले आम पीटा जा रहा है। पुलिस को ऊपर से आदेश है कि कुछ नहीं करना। मजबूरीवश पुलिस खड़े होकर जनता पर खुले आम हो रही हिंसा को देखती रहती है।… pic.twitter.com/Qo6DhgszHL
— Arvind Kejriwal (@ArvindKejriwal) February 2, 2025
ಈ ಹ್ಯಾಶ್ ಟ್ಯಾಗ್ ಮುಖಾಂತರ ದಾಳಿ, ಬೆದರಿಕೆ ಅಥವಾ ಬೆದರಿಕೆಗೆ ಒಳಗಾದ ಅನುಭವಗಳನ್ನು ಹಂಚಿಕೊಳ್ಳಲು ಅವರು ಜನರನ್ನು ಒತ್ತಾಯಿಸಿದ್ದಾರೆ.
“ಬಿಜೆಪಿಗೆ ದೆಹಲಿಯ ಬಗ್ಗೆ ಯಾವುದೇ ದೃಷ್ಟಿಕೋನವಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಅಭಿವೃದ್ಧಿ ಕಾರ್ಯಸೂಚಿ ಇಲ್ಲ. ಅವರ ಬಳಿ ಇರುವುದು ಗೂಂಡಾಗಿರಿ ಮಾತ್ರ. ಅವರು ಭಯದ ಮೂಲಕ ಗೆಲ್ಲಲು ಬಯಸುತ್ತಾರೆಯೆ ಹೊತರು ಮತಗಳ ಮೂಲಕ ಅಲ್ಲ” ಎಂದು ಕೇಜ್ರಿವಾಲ್ ಹೇಳಿದ್ದಾರೆ. ನಗರದ ಸುರಕ್ಷತೆ ಮತ್ತು ಪ್ರಜಾಪ್ರಭುತ್ವ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ವಿರುದ್ಧ ಒಗ್ಗೂಡುವಂತೆ ದೆಹಲಿಯ ಜನರನ್ನು ಒತ್ತಾಯಿಸಿದ್ದಾರೆ.
ಅತ್ಯಂತ ಮಹತ್ವದ ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5 ರಂದು ನಡೆಯಲಿದ್ದು, ಫಲಿತಾಂಶಗಳು ಫೆಬ್ರವರಿ 8 ರಂದು ಹೊರಬೀಳಲಿವೆ. ಎಎಪಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಗುರಿಯನ್ನು ಹೊಂದಿದ್ದರೆ, ಬಿಜೆಪಿ 25 ವರ್ಷಗಳಿಗೂ ಹೆಚ್ಚು ಕಾಲದ ನಂತರ ರಾಷ್ಟ್ರ ರಾಜಧಾನಿಯನ್ನು ಮರಳಿ ಪಡೆಯಲು ಹೋರಾಟ ನಡೆಸುತ್ತಿದೆ.


