ಯಮುನಾ ನದಿ ಸ್ವಚ್ಛ ಮಾಡುವುದು ದೆಹಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಕೈಯ್ಯಲ್ಲಿ ಇದ್ದರೂ, ಅವರು ಈ ಹಿಂದೆ ಈ ಕೆಲಸವನ್ನು ಬಿಜೆಪಿಗೆ ಚುನಾವಣೆಯಲ್ಲಿ ಸಹಾಯ ಮಾಡುವ ಸಲುವಾಗಿ ಮಾಡಲಿಲ್ಲ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಸೋಮವಾರ ಪ್ರತಿಪಾದಿಸಿದ್ದಾರೆ. ಬಿಜೆಪಿಗಾಗಿ ದೆಹಲಿ ಗವರ್ನರ್
ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕೆಲವು ದಿನಗಳ ಮೊದಲು, ಮೂರು ವರ್ಷಗಳಲ್ಲಿ ನದಿಯನ್ನು ಭಾರೀ ಮಾಲಿನ್ಯದಿಂದ ಮುಕ್ತಗೊಳಿಸುವ ನಾಲ್ಕು-ಹಂತದ ತಂತ್ರದ ಆಧಾರದ ಮೇಲೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕೆಲಸ ಭಾನುವಾರ ಪ್ರಾರಂಭವಾಯಿತು. ಈ ವರದಿಯನ್ನು ಸಾಕೇತ್ ಗೋಖಲೆ ಅವರು ಹೇಳಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಟ್ವಿಟರ್‌ನಲ್ಲಿ ಸುದ್ದಿ ಸಂಸ್ಥೆ ಎಎನ್‌ಐಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸಾಕೇತ್ ಗೋಖಲೆ, “ದೆಹಲಿ ಸರ್ಕಾರ ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಆದರೆ ಲೆಫ್ಟಿನೆಂಟ್ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಾರೆ. ಈ ಅಧಿಕಾರ ಯಾವಾಗನಿಂದಲೂ ಅವರ ಕೈಯಲ್ಲಿತ್ತು ಎಂದು ಇದರ ಅರ್ಥ” ಎಂದು ಹೇಳಿದ್ದಾರೆ.
ಅವರು ಈಗ ಇಷ್ಟೆಲ್ಲಾ ಮಾಡುವಾಗ, ಆಗ ಇದನ್ನೆಲ್ಲ ಮಾಡಲಿಲ್ಲ ಮತ್ತು ದೆಹಲಿ ಸರ್ಕಾರವನ್ನು ಹಾಗೆ ಮಾಡದಂತೆ ತಡೆಯುತ್ತಿದ್ದರು. ಯಾಕೆಂದರೆ ಅವರು ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಹಾಯ ಮಾಡಲು ಮಾತ್ರ ಹಾಗೆ ಮಾಡಿದ್ದರು ಎಂದು ಸಾಕೇತ್ ಅವರು ಆರೋಪಿಸಿದ್ದಾರೆ. ಬಿಜೆಪಿಗಾಗಿ ದೆಹಲಿ ಗವರ್ನರ್
ಅಷ್ಟೆ ಅಲ್ಲದೆ, ನಿನ್ನೆ ರಾತ್ರಿ, ಈ ವ್ಯಕ್ತಿ ದೆಹಲಿಯ ಕಾಲ್ತುಳಿತದಲ್ಲಿ ಜನರು ಸತ್ತಿದ್ದಾರೆ ಎಂದು ಮರೆಮಾಡಲು ತನ್ನ ಟ್ವೀಟ್ ಅನ್ನು ಎಡಿಟ್ ಮಾಡಿದ್ದಾರೆ. ಈ ನಾಚಿಕೆಯಿಲ್ಲದ, ಜನರಿಂದ ಆಯ್ಕೆಯಾಗದ ಬಿಜೆಪಿ ಕಾರ್ಯಕರ್ತ ತನ್ನ ಪಕ್ಷ ಮತ್ತು ತನ್ನ ಯಜಮಾನ ಮೋದಿಗಾಗಿ ಕೆಲಸ ಮಾಡಲು ಸಾಂವಿಧಾನಿಕ ಸ್ಥಾನವನ್ನು ಬಳಸಿದ್ದಾರೆ ಎಂದು ಸಂಸದ ಸಾಕೇತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯ ಅಧಿಕಾರಿಗಳು ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಕೆಲಸವು ಕಸ ತೆಗೆಯುವ ಯಂತ್ರಗಳು, ಕಳೆ ಕೊಯ್ಲು ಯಂತ್ರಗಳು ಮತ್ತು ಡ್ರೆಡ್ಜರ್‌ನೊಂದಿಗೆ ಪ್ರಾರಂಭವಾಗಿದೆ ಎಂದು ಭಾನುವಾರ ಹೇಳಿದರು.
ಫೆಬ್ರವರಿ 8 ರಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿಯ ವಿಜಯೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಲಿನ್ಯ ಮುಕ್ತ ಯಮುನಾ ನದಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದ್ದರು.
ಇದನ್ನೂಓದಿ: ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆದರೆ ತಪ್ಪೇನಿಲ್ಲ: ಸಚಿವ ಶಿವಾನಂದ ಪಾಟೀಲ್
ಮುಂದಿನ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆದರೆ ತಪ್ಪೇನಿಲ್ಲ: ಸಚಿವ ಶಿವಾನಂದ ಪಾಟೀಲ್


