ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷದಲ್ಲಿನ ನಾಯಕತ್ವದ ಕಿತ್ತಾಟ ಸದ್ಯಕ್ಕೆ ಕೊನೆಯಾಗುವಂತೆ ಕಾಣುತ್ತಿಲ್ಲ. ಕೇಂದ್ರ ಸಚಿವ ಪಶುಪತಿ ಪಾರಸ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ನಡುವಿನ ಕಚ್ಚಾಟ ಈಗ ನ್ಯಾಯಾಲಯದ ಅಂಗಳಕ್ಕೆ ಕಾಲಿಟ್ಟಿದೆ. ದೆಹಲಿ ಹೈಕೋರ್ಟ್‌ನಲ್ಲಿ ಚಿರಾಗ್ ಪಾಸ್ವಾನ್ ಅವರಿಗೆ ಹಿನ್ನಡೆಯಾಗಿದ್ದು ಪಶುಪತಿ ಪಾರಸ್ ಅವರನ್ನು ಎಲ್‌ಜೆಪಿ ನಾಯಕ ಎಂಬ ಸ್ಪೀಕರ್ ತೀರ್ಮಾನವನ್ನು ಕೋರ್ಟ್ ಎತ್ತಿಹಿಡಿದಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪಶುಪತಿ ಪಾರಸ್ ಅವರನ್ನು ಎಲ್‌ಜೆಪಿ ನಾಯಕ ಎಂದು ಮಾನ್ಯ ಮಾಡಿದ್ದನ್ನು ಪ್ರಶ್ನಿಸಿ ರಾಮ್ ಚಿರಾಗ್ ಪಾಸ್ವಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಚಿರಾಗ್ ಪಾಸ್ವಾನ್ ಅವರ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸ್ಪೀಕರ್ ಓಂ ಬಿರ್ಲಾ ತೀರ್ಮಾನಕ್ಕೆ ತಡೆ ನೀಡಲು ನಿರಾಕರಿಸಿದೆ. ಆ ಮೂಲಕ ಎಲ್‌ಜೆಪಿ ಮುಖ್ಯಸ್ಥ ಪಟ್ಟಕ್ಕೆ ಏರುವ ಚಿರಾಗ್ ಪಾಸ್ವಾನ್ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ: ನಿತೀಶ್ ಕುಮಾರ್‌ರವರ JDU ಯಾವಾಗ ಬೇಕಾದರೂ ಇಬ್ಭಾಗವಾಗಬಹುದು: ಚಿರಾಗ್ ಪಾಸ್ವಾನ್
ಪಶುಪತಿ ಪಾರಸ್ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿ ನೇಮಕಗೊಂಡಿದ್ದಾರೆ. ಹೈಕೋರ್ಟ್ ಆದೇಶ ಮತ್ತು ಕೇಂದ್ರ ಮಂತ್ರಿ ಮಂಡಲದ ಪುನರ್ರಚನೆಯ ನಂತರ ಚಿರಾಗ್ ಪಾಸ್ವಾನ್ ಅವರಿಗೆ ತೀವ್ರ ಹಿನ್ನಡೆಯಾಗಿದ್ದು ಸಚಿವ ಪಶುಪತಿ ಪಾರಸ್ ಕೈ ಮೇಲಾಗಿದೆ.
ಇತ್ತೀಚೆಗಷ್ಟೆ ಪಶುಪತಿ ಪಾರಸ್ ಇತರ ನಾಲ್ಕು ಎಂಪಿಗಳೊಂದಿಗೆ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯವೆದ್ದಿದರು ಮತ್ತು ಅವರನ್ನು ಪಕ್ಷದಿಂದ ಉಚ್ಛಾಟನೆಗೊಳಿಸಿದ್ದರು.
ಸ್ಪೀಕರ್ ಓಂ ಬಿರ್ಲಾ ಪಶುಪತಿ ಪಾರಸ್ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕ ಎಂದು ಗುರಿತಿಸಿರುವುದನ್ನು ಪ್ರಶ್ನಿಸಿ ಎಲ್‌ಜೆಪಿ ಇಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಪಾರಸ್ ಅವರನ್ನು ಕೇಂದ್ರ ಮಂತ್ರಿಮಂಡಳಕ್ಕೆ ಸೇರಿಸಿಕೊಂಡಿದ್ದನ್ನು ಪಕ್ಷ ಖಂಡಿಸುತ್ತದೆ ಎಂದು ಚಿರಾಗ್ ಪಾಸ್ವಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಮೌನದಿಂದ ನೋವಾಗುತ್ತಿದೆ: ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್


