ನವದೆಹಲಿಯಲ್ಲಿ ಜೂನ್ 1ರ ಶನಿವಾರ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಡೆಲ್ಲಿ ಟ್ರಾನ್ಸ್‍ಪೋರ್ಟ್ ಕಾರ್ಪೋರೇಷನ್ ಬಸ್‍ಗಳಲ್ಲಿ ಮತ್ತು ಡೆಲ್ಲಿ ಮೆಟ್ರೊದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆಯ ಕುರಿತು ಜೂನ್ 3 ರಂದು ಸಾರ್ವಜನಿಕವಾಗಿ ನಿರ್ಧಾರ ಪ್ರಕಟಿಸಲಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯ ಸಾರಿಗೆ ಸಚಿವರಾದ ಕೈಲಾಸ್ ಗೆಹ್ಲೊಟ್‍ರವರು ಈ ಕುರಿತು ಹಲವಾರು ಸಭೆಗಳನ್ನು ನಡೆಸಿ ಹಲವು ಆಯಾಮಗಳಲ್ಲಿ ಚರ್ಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ
ದೆಹಲಿಯ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಯಾವುದೇ ತೊಂದರೆಗಳಿದ್ದರೂ, ಡೆಲ್ಲಿ ಮೆಟ್ರೊ ದಲ್ಲಿ ಈ ನೀತಿ ಜಾರಿಗೆ ತರುವುದು ಕಷ್ಟ ಎನ್ನಲಾಗುತ್ತಿದೆ. ಏಕೆಂದರೆ ದೆಹಲಿ ಮೆಟ್ರೊಗೆ ದೆಹಲಿ ಸರ್ಕಾರ 50% ಅನುದಾನ ನೀಡಿದರೆ ಇನ್ನುಳಿದ 50% ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದ್ದು ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ವಿಚಾರಗಳಿಗೆ ತಿಕ್ಕಾಟವಿರುವುದರಿಂದ ಡೆಲ್ಲಿ ಮೆಟ್ರೊದಲ್ಲಿ ಉಚಿತ ಪ್ರಯಾಣ ನೀತಿ ಜಾರಿಯಾಗುವುದು ಅಷ್ಟು ಸುಲಭವಲ್ಲ ಎನ್ನುವುದು ದೆಹಲಿಯ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.
ಹಾಗೆಯೇ ದೆಹಲಿ ಸರ್ಕಾರದ ಜೊತೆ ಮಾತುಕತೆಯಿಲ್ಲದೇ ದೆಹಲಿ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರವು (ಡಿಇಆರ್‍ಸಿ) ಕಳೆದ ವರ್ಷ ಫಿಕ್ಸಡ್ ಚಾರ್ಜ್ ಅನ್ನು ಏರಿಕೆ ಮಾಡಿದೆ. ಈ ಕುರಿತು ದೆಹಲಿ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರಕ್ಕೆ ಏರಿಕೆಯನ್ನು ಇಳಿಸಿ ಹಳೆಯ ಮಾದರಿಯನ್ನು ಅಳವಡಿಸಬೇಕೆಂದು ಒತ್ತಾಯಿಸಿದ್ದೇವೆ. ಮುಂದಿನ ತಿಂಗಳು ಜಾರಿಗೆ ಬರುವ ಸಂಭವವಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.


