Homeಮುಖಪುಟದೆಹಲಿ ಗಲಭೆ: 16 ಆರ್‌ಎಸ್‌ಎಸ್ ಆರೋಪಿಗಳ ವಿರುದ್ಧ ದೆಹಲಿ ಪೊಲೀಸ್ ಚಾರ್ಜ್‌ಶೀಟ್

ದೆಹಲಿ ಗಲಭೆ: 16 ಆರ್‌ಎಸ್‌ಎಸ್ ಆರೋಪಿಗಳ ವಿರುದ್ಧ ದೆಹಲಿ ಪೊಲೀಸ್ ಚಾರ್ಜ್‌ಶೀಟ್

- Advertisement -
- Advertisement -

ಈಶಾನ್ಯ ದೆಹಲಿ ಗಲಭೆಯಲ್ಲಿ 48 ವರ್ಷದ ಪರ್ವೇಜ್ ಹತ್ಯೆಯ ಪ್ರಕರಣದಲ್ಲಿ, ದೆಹಲಿ ಪೊಲೀಸ್ ಅಪರಾಧ ಶಾಖೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) 16 ಸದಸ್ಯರ ವಿರುದ್ಧ ತಮ್ಮ ಚಾರ್ಜ್‌ಶೀಟ್ ಸಲ್ಲಿಸಿದ್ದು, ಮುಖ್ಯವಾಗಿ ಹತ್ತು ಸಾಕ್ಷಿಗಳ ಸಾಕ್ಷ್ಯಗಳನ್ನು ಅವಲಂಬಿಸಿದೆ. ಇವರು ಅಪರಾಧಕ್ಕೆ ಪ್ರತ್ಯಕ್ಷದರ್ಶಿಯಾಗಿದ್ದಾರೆ ಎನ್ನಲಾಗಿದೆ.

16 ಆರೋಪಿಗಳ ವಿರುದ್ಧ ಸೆಕ್ಷನ್ 302 (ಕೊಲೆ), 147 (ಗಲಭೆ), 148 (ಗಲಭೆ, ಶಸ್ತ್ರಸಜ್ಜಿತ ಆಯುಧದಿಂದ ಮಾರಣಾಂತಿಕ ಹಲ್ಲೆ), 149 (ಕಾನೂನುಬಾಹಿರ ಸಭೆ), 188 (ಸಾರ್ವಜನಿಕ ಸೇವಕರಿಂದ ಸರಿಯಾಗಿ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) 201 (ಕಣ್ಮರೆ, ಅಪರಾಧದ ಪುರಾವೆಗಳು, ಸುಳ್ಳು ಮಾಹಿತಿ ನೀಡುವುದು), ಭಾರತೀಯ ದಂಡ ಸಂಹಿತೆಯ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27 ನ್ನು ಚಾರ್ಜ್ ಶೀಟ್ ನಲ್ಲಿ ಹಾಕಲಾಗಿದೆ.

ಪರ್ವೇಜ್ ಆಲಂ ಹತ್ಯೆ: ಫೆಬ್ರವರಿ 25 ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಈ ಪ್ರಕರಣವು ಪರ್ವೇಜ್ ಅವರ ಸಾವಿನ ಬಗ್ಗೆ, ಅವರ ಮಗ ಸಾಹಿಲ್, ಈಶಾನ್ಯ ದೆಹಲಿಯ ಉತ್ತರ ಘೋಂಡಾ ಪ್ರದೇಶದಲ್ಲಿ ಫೆಬ್ರವರಿ 25 ರಂದು ಸಂಜೆ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದಿರುವುದಕ್ಕೆ ದೂರುದಾರ ಮತ್ತು ಪ್ರತ್ಯಕ್ಷದರ್ಶಿ. ಸಾಹಿಲ್ ತನ್ನ ತಂದೆಯ ಹಿಂದೆ ಇದ್ದನು, ಸಂಜೆ ಪ್ರಾರ್ಥನೆಗಾಗಿ ಸ್ಥಳೀಯ ಮಸೀದಿಗೆ ಹೋಗುವಾಗ, ಕೆಲವು ದೂರ ನಡೆದ ನಂತರ ಸುಶೀಲ್ ಕುಮಾರ್ ಅವರಿಗೆ ಗುಂಡು ಹಾರಿಸಿದ್ದನು.

ಗುಂಪನ್ನು ಮುನ್ನಡೆಸಿದ ಮತ್ತು ಸಾಹಿಲ್ ತಂದೆಯ ಮೇಲೆ ಗುಂಡು ಹಾರಿಸಿದ ಪ್ರಮುಖ ಆರೋಪಿ ಕುಮಾರ್. ಪರ್ವೇಜ್ ಒಂದೂವರೆ ಗಂಟೆಯ ನಂತರ ರಾತ್ರಿ 8:30 ರ ಹೊತ್ತಿಗೆ ಜಿಟಿಬಿ ಆಸ್ಪತ್ರೆಯಲ್ಲಿ ನಿಧನರಾದರು, ಆದರೆ ಈಶಾನ್ಯ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಗಲಭೆಗಳು ಮುಂದುವರೆದವು.

ಈ ಪ್ರಕರಣವನ್ನು ಮೂಲತಃ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಮಾರ್ಚ್ 4 ರಂದು ಅಪರಾಧ ಶಾಖೆ ಎಸ್‌ಐಟಿಗೆ ವರ್ಗಾಯಿಸಿತು. ಏಪ್ರಿಲ್ 9 ರಂದು 22 ಮಂದಿ ಆರೋಪಿಗಳನ್ನು ದಿನವಿಡೀ ವಿಚಾರಣೆ ನಡೆಸಲಾಯಿತು ಮತ್ತು ಸಾಹಿಲ್ ಅವರ ದೂರಿನ ಆಧಾರದ ಮೇಲೆ 16 ಜನ ಪುರುಷ ಆರೋಪಿಗಳನ್ನು ಬಂಧಿಸಲಾಯಿತು. ಬಂಧಿಸಲ್ಪಟ್ಟ ಎಲ್ಲ 16 ಮಂದಿ ಆರ್‌ಎಸ್‌ಎಸ್ ಮೂಲದವರು ಎಂದು ಕ್ವಿಂಟ್ ದೃಢಪಡಿಸಿದೆ. ಬಂಧಿತರ ಸಂಬಂಧಿಕರೊಂದಿಗೆ ಮಾತನಾಡುವುದರ ಮೂಲಕ ಮಾತ್ರವಲ್ಲದೆ ಆರ್‌ಎಸ್‌ಎಸ್ ಕಾರ್ಯಕರ್ತರ ಮೂರು ಪುಟಗಳ ಹೇಳಿಕೆಯೂ ಅದನ್ನು ದೃಢಪಡಿಸಿದೆ. ಹೇಳಿಕೆಯನ್ನು ಇಲ್ಲಿ ಓದಬಹುದು.

16 ಆರೋಪಿಗಳ ವಿರುದ್ಧ ಸಾಕ್ಷ್ಯ

ಆರಂಭಿಕ ಎಫ್‌ಐಆರ್ ಐಪಿಸಿಯ ಸೆಕ್ಷನ್ 302 (ಕೊಲೆ)ನ್ನು ಆರೋಪಿಗಳ ವಿರುದ್ಧದ ಆರೋಪವಾಗಿ ಮಾತ್ರ ಹೊಂದಿದ್ದರೆ, ತನಿಖೆಯ ಸಂದರ್ಭದಲ್ಲಿ ಇತರ ಸೆಕ್ಷನ್ ಗಳನ್ನು ಸೇರಿಸಲಾಗಿದೆ.

“ಏಪ್ರಿಲ್ 9 ರಂದು, ಕ್ರೈಂ ಬ್ರಾಂಚ್, ದ್ವಾರಕಾ ಕಚೇರಿ ಸಾಕ್ಷಿಗಳ ಹೇಳಿಕೆಗಳು, ಎಲೆಕ್ಟ್ರಾನಿಕ್ ಸಾಕ್ಷ್ಯಗಳು, ಸಂದರ್ಭಗಳು ಇತ್ಯಾದಿಗಳ ಆಧಾರದ ಮೇಲೆ 16 ಜನರನ್ನು ಬಂಧಿಸಲಾಯಿತು” ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. “ಉತ್ತಮ ಪ್ರಯತ್ನಗಳ” ಹೊರತಾಗಿಯೂ ಪೊಲೀಸರು ಇನ್ನೂ ಅಪರಾಧ ಸಂದರ್ಭದಲ್ಲಿ ಬಳಸಿದ ಆಯುಧವನ್ನು ಮರುಪಡೆಯಬೇಕಾಗಿದೆ.

ಮೂರು ಅನಾಮಧೇಯ ಸಾಕ್ಷಿಗಳು, ಮತ್ತು ಕಾಲ್ ಡಿಟೇಲ್ ರೆಕಾರ್ಡ್ಸ್ (ಸಿಡಿಆರ್) ಸೇರಿದಂತೆ ಹೇಳಿಕೆ ಸಾಕ್ಷಿಗಳು ಮತ್ತು ಪೊಲೀಸರ ಸಾಕ್ಷ್ಯಗಳಿಂದ ಬಹುಪಾಲು ಆರೋಪಿಗಳ ಪಾತ್ರಕ್ಕೆ ಸಾಕ್ಷಿಯಿದೆ ಎಂದು ಚಾರ್ಜ್ ಶೀಟ್ ನಿಂದ ತಿಳಿದುಬರುತ್ತದೆ.

ಸಾಹಿಲ್ ಅವರ ಹೇಳಿಕೆಯನ್ನು ಹೊರತುಪಡಿಸಿ, ಪೊಲೀಸರು ಇತರ ಹತ್ತು ಹೇಳಿಕೆಗಳನ್ನು ದಾಖಲಿಸಿದ್ದಾರೆ, ಅದರಲ್ಲಿ ಮೂವರು ಸಾರ್ವಜನಿಕ ಸಾಕ್ಷಿಗಳು. ಅವರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ.

ಅವರ ಹೇಳಿಕೆಯು ಹೀಗಿದೆ: “(ಫೆಬ್ರವರಿ 25 ರಂದು) ಸಂಜೆ 7 ರ ಸುಮಾರಿಗೆ, ನಾನು ಕೆಲವು ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಟಾಗ, ಗಲಭೆಕೋರರು ಬೀದಿ ಸಂಖ್ಯೆ 6 ರ ಸುತ್ತಲೂ ನಿಂತಿರುವುದನ್ನು ನೋಡಿದೆ. ಅವರ ಕೈಯಲ್ಲಿ ಕೋಲುಗಳು, ಕಬ್ಬಿಣದ ಸರಳುಗಳು ಮತ್ತು ಆಯುಧಗಳು ಇದ್ದವು. ಸುಶೀಲ್ ಕುಮಾರ್ ಕಡೆಗೆ ಸಾಗುತ್ತಿದ್ದರು. ಅವರ ಕೈಯಲ್ಲಿ ಶಾಟ್‌ಗನ್‌ನಂತೆ ಕಾಣುವಂತಹದ್ದು ಇತ್ತು.

ಅವರೊಂದಿಗೆ ಜೈಬೀರ್ ಸಿಂಗ್, ಪವನ್ ಕುಮಾರ್, ಅಮಿತ್, ಉತ್ತಮ್ ಚಂದ್ ಮಿಶ್ರಾ, ಹರಿ ಓಂ ಮಿಶ್ರಾ ಮತ್ತು ಸಂದೀಪ್ ಚಾವ್ಲಾ ಮತ್ತು ಇತರರು ಇದ್ದರು. ರಸ್ತೆ ಸಂಖ್ಯೆ 9 ಉತ್ತರ ಘೋಂಡಾ ಪವನ್ ಎಲೆಕ್ಟ್ರಾನಿಕ್ಸ್ ಅಂಗಡಿಯ ಬಳಿ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಸುಶೀಲ್ ಗುಂಡು ಹಾರಿಸಿದ್ದಾನೆ.

ಚಾರ್ಜ್ ಶೀಟ್‌ನಲ್ಲಿನ ಏಳು ಮಂದಿಯನ್ನು ಹೆಸರಿನಿಂದ ಮತ್ತು ಉಳಿದವರನ್ನು ಮುಖದಿಂದ, ಒಟ್ಟು ಎಲ್ಲಾ ಹದಿನಾರು ಆರೋಪಿಗಳನ್ನು ಸಹ ಗುರುತಿಸಿದ್ದಾರೆ.

ಸ್ಥಳೀಯರಾದ ರಿಜ್ವಾನ್, 16 ಆರೋಪಿಗಳಲ್ಲಿ ಎಂಟು ಮಂದಿಯನ್ನು ಹೆಸರಿಸಿದ್ದಾರೆ. ಆದಾಗ್ಯೂ, ಅವರು ಗಲಭೆಯನ್ನು ಮಾತ್ರ ನೋಡಿದ್ದಾರೆ ಎಂದು ಅವರು ಹೇಳುತ್ತಾರೆ. ನಂತರವೇ ಜನರ ಗುಂಪು ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ದೆಹಲಿ ಗಲಭೆ: ಕೊಲೆ ಆರೋಪದಲ್ಲಿ ಆರ್‌ಎಸ್‌ಎಸ್ ಸದಸ್ಯರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...