Homeಮುಖಪುಟದೆಹಲಿ, ಪಂಜಾಬ್ ರಾಜ್ಯಪಾಲರು ಸುಪ್ರೀಂ ಆದೇಶ ಓದಿಕೊಳ್ಳಲಿ: ಎಎಪಿ

ದೆಹಲಿ, ಪಂಜಾಬ್ ರಾಜ್ಯಪಾಲರು ಸುಪ್ರೀಂ ಆದೇಶ ಓದಿಕೊಳ್ಳಲಿ: ಎಎಪಿ

- Advertisement -
- Advertisement -

ರಾಜ್ಯಪಾಲರು ಯಾವುದೇ ಕ್ರಮ ಕೈಗೊಳ್ಳದೆ ಮಸೂದೆಗಳನ್ನು ಅನಿರ್ದಿಷ್ಟಾವಧಿಗೆ ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅದನ್ನು ಪಂಜಾಬ್ ರಾಜ್ಯಪಾಲರು ಹಾಗೂ ದೆಹಲಿ ರಾಜ್ಯಪಾಲರು ಓದಿಕೊಳ್ಳಲಿ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ರಾಘವ್ ಛಡ್ಡಾ ಶುಕ್ರವಾರ ಹೇಳಿದ್ದಾರೆ.

ಜೂನ್ 19 ಹಾಗೂ 20ರಂದು ನಡೆದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವ ಮಸೂದೆ ಬಗ್ಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕು. ಆದರೆ, ಕಾನೂನು ರಚಿಸುವ ಶಾಸನ ಸಭೆಗಳ ಪ್ರಕ್ರಿಯೆಯನ್ನು ವಿಫಲಗೊಳಿಸುವ ಅಧಿಕಾರವನ್ನು ಚಲಾಯಿಸಬಾರದು ಎಂದು ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೆ ಕೋರ್ಟ್ ಸೂಚಿಸಿದೆ.

ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಸರ್ಕಾರ ಅಧಿವೇಶನದಲ್ಲಿ ಅನುಮೋದಿಸಿದ್ದ ನಾಲ್ಕು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕುತ್ತಿಲ್ಲ ಎಂದು  ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಪೀಠ, ನವೆಂಬರ್ 10ರಂದು ನೀಡಿರುವ ಆದೇಶದಲ್ಲಿ ಈ ಮಾತು ಹೇಳಿದೆ. ಆದೇಶದ ಪ್ರತಿಯನ್ನು ಗುರುವಾರ (ನ.23ರಂದು) ರಾತ್ರಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಛಡ್ಡಾ, ”ಪಂಜಾಬ್ ರಾಜ್ಯಪಾಲರ ವಿರುದ್ಧ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಗೌರವಾನ್ವಿತ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ರಾಜ್ಯಪಾಲರು ರಾಜ್ಯಗಳ ಚುನಾಯಿತರಲ್ಲದ ಮುಖ್ಯಸ್ಥರಾಗಿದ್ದಾರೆ ಮತ್ತು ಅವರು ತಮಗಿರುವ ಅಧಿಕಾರವನ್ನು ಶಾಸಕಾಂಗಕ್ಕೆ ಅಡ್ಡಿಪಡಿಸಲು ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ” ಎಂದು ಬರೆದಿದ್ದಾರೆ.

”ಅದನ್ನು ಅರ್ಥಮಾಡಿಕೊಳ್ಳಲು ಪಂಜಾಬ್ ರಾಜ್ಯಪಾಲರು ಮತ್ತು ದೆಹಲಿ ರಾಜ್ಯಪಾಲರು ಆದೇಶದ ಪ್ರತಿಯನ್ನು ಬಹುಶಃ ಹಲವು ಸಲ ಓದಬೇಕಾಗುತ್ತದೆ. ಅಗತ್ಯಬಿದ್ದರೆ ನುರಿತ ವಕೀಲರ ನೆರವನ್ನೂ ಪಡೆಯಲಿ” ಎಂದು ತಿವಿದಿದ್ದಾರೆ.

ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರ ಹಾಗೂ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಪುರೋಹಿತ್ ಹಗೆ ಸಾಧಿಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.

ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ರಾಜ್ಯ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...

ಅಜಿತ್ ಪವಾರ್ ಸಾವು : ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ ಎಂದ ವಿಮಾನಯಾನ ಸಚಿವಾಲಯ

ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್...

ರಾಜಸ್ಥಾನ| ಮೊದಲ ಬಜೆಟ್‌ನಲ್ಲಿ ಪಕ್ಷವು ‘ಗಂಡು ಮಗುವಿಗೆ ಜನ್ಮ ನೀಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಮಂಡಿಸಿದ ಬಜೆಟ್‌ಗಳನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸಿದ ಬಳಿಕ ವಿಧಾನಸಭೆಯಲ್ಲಿ ವಿವಾದ ಭುಗಿಲೆದ್ದಿತು. ರಾಜ್ಯ ಬಜೆಟ್ ಮೇಲಿನ...

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಖ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ತಾರಿಖ್ ರೆಹಮಾನ್ ಅವರು ಮಂಗಳವಾರ (ಫೆ.17) ಪ್ರಮಾಣ ವಚನ ಸ್ವೀಕರಿಸಿದರು. ಪದಗ್ರಹಣ ಕಾರ್ಯಕ್ರಮವು ಸಂಪ್ರದಾಯದಂತೆ ಅಧ್ಯಕ್ಷೀಯ ಅರಮನೆಯಲ್ಲಿ ನಡೆಯುವ ಬದಲು, ಢಾಕಾದ ರಾಷ್ಟ್ರೀಯ...

ಮಹಾರಾಷ್ಟ್ರ| ಪರೀಕ್ಷೆಯ ಸಮಯದಲ್ಲಿ ಸಾಮೂಹಿಕ ನಕಲಿಗೆ ಬೆಂಬಲಿಸಿದ 5 ಜನ ಶಿಕ್ಷಕರ ಅಮಾನತು

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಂದ್ರವೊಂದರಲ್ಲಿ ನಡೆದ 12 ನೇ ತರಗತಿಯ ಹೆಚ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲು ಮಾಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಸಿಕ್ಕಿಬಿದ್ದ ಐದು ಶಿಕ್ಷಕರನ್ನು...

ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ಜಾಹೀರಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಮಂಗಳವಾರ (ಫೆ.17) ರದ್ದುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ. ಪ್ರಕರಣ ರದ್ದುಕೋರಿ...

‘ನಾವು ಎಐ ಯುಗದಲ್ಲಿದ್ದೇವೆ..’; ಸೋನಮ್ ವಾಂಗ್‌ಚುಕ್ ವೀಡಿಯೊ ಪ್ರತಿಗಳ ಅನುವಾದದ ಬಗ್ಗೆ ಸುಪ್ರೀಂ ಅಸಮಾಧಾನ

ಲಡಾಖ್ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ವಿರುದ್ಧ ಸಲ್ಲಿಸಿದ ವೀಡಿಯೊ ಪ್ರತಿಗಳ ಅನುವಾದದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರವನ್ನು ಪ್ರಶ್ನಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಕಾಲದಲ್ಲಿ ಅನುವಾದ ನಿಖರವಾಗಿರಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ...

ಬಜೆಟ್ ಅಧಿವೇಶನದಲ್ಲಿ ‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ದೌರ್ಜನ್ಯವನ್ನು ತಡೆಯುವ ಸಲುವಾಗಿ ತುರ್ತಾಗಿ 'ರೋಹಿತ್ ವೇಮುಲ ಕಾಯ್ದೆ'ಯನ್ನು ಜಾರಿಗೊಳಿಸಬೇಕು ಎಂದು 'ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ' ತಂಡ ರಾಜ್ಯ ಸರ್ಕಾರವನ್ನು ಆಗ್ರಹಿಸಿತು. ಮಂಗಳವಾರ (ಫೆ.17) ಬೆಂಗಳೂರಿನ ಪ್ರೆಸ್‌...

ಖಾಸಗಿ ಜಾಗದಲ್ಲಿ ನಮಾಝ್ ತಡೆದ ಅಧಿಕಾರಿಗಳು: ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಅಲಹಾಬಾದ್ ಹೈಕೋರ್ಟ್

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮೊಹಮ್ಮದ್‌ಗಂಜ್ ಗ್ರಾಮದ ಖಾಲಿ ಮನೆಯೊಂದರಲ್ಲಿ ಮುಸ್ಲಿಂ ಸಮುದಾಯದವರು ನಮಾಝ್ ಮಾಡುವುದನ್ನು ತಡೆದ ಜಿಲ್ಲಾಧಿಕಾರಿ ಅವಿನಾಶ್ ಸಿಂಗ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರಿಗೆ ಅಲಹಾಬಾದ್...

ರೂ. 80 ಸಾವಿರ ಕೋಟಿ ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ಎನ್‌ಜಿಟಿ ಹಸಿರು ನಿಶಾನೆ

ತೀವ್ರ ವಿರೋಧಗಳ ನಡುವೆಯೇ 80 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೋಮವಾರ (ಫೆ.16) ಹಸಿರು ನಿಶಾನೆ ತೋರಿದೆ. ಆರು ಸದಸ್ಯರ ಎನ್‌ಜಿಟಿಯ ವಿಶೇಷ...