Homeಮುಖಪುಟಮುಖ್ಯ ಕಾರ್ಯದರ್ಶಿ ನೇಮಕ ವಿಚಾರ: ದೆಹಲಿ ಸರ್ಕಾರ-ಲೆಫ್ಟಿನೆಂಟ್ ಗವರ್ನರ್ ಜಗಳದಲ್ಲಿ ಸುಪ್ರೀಂ ಮಧ್ಯಪ್ರವೇಶ

ಮುಖ್ಯ ಕಾರ್ಯದರ್ಶಿ ನೇಮಕ ವಿಚಾರ: ದೆಹಲಿ ಸರ್ಕಾರ-ಲೆಫ್ಟಿನೆಂಟ್ ಗವರ್ನರ್ ಜಗಳದಲ್ಲಿ ಸುಪ್ರೀಂ ಮಧ್ಯಪ್ರವೇಶ

- Advertisement -
- Advertisement -

ಹೊಸ ಮುಖ್ಯ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಡುವಿನ ಜಗಳದಲ್ಲಿ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ. ಮಂಗಳವಾರ ಕೇಂದ್ರ ಸರ್ಕಾರ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ನೀಡಲಿದ್ದು, ಆ ಬಗ್ಗೆ ಎರಡೂ ಕಡೆಯವರು ಸೌಹಾರ್ದಯುತವಾಗಿ ಚರ್ಚಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ದೆಹಲಿಯಲ್ಲಿ ಪ್ರಸ್ತುತ ಮುಖ್ಯ ಕಾರ್ಯದರ್ಶಿಯಾಗಿ ನರೇಶ್ ಕುಮಾರ್ ಇದ್ದಾರೆ, ಅವರು ಇದೇ ತಿಂಗಳು ನಿವೃತ್ತರಾಗುತ್ತಾರೆ ಹಾಗಾಗಿ ಹೊಸ ಅಧಿಕಾರಿಯನ್ನು ನೇಮಿಸಬೇಕು ಎಂದು ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರ ಹೇಳಿದೆ. ಆದರೆ ನರೇಶ್ ಕುಮಾರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವುದಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ. ಇದರ ವಿರುದ್ಧ ದೆಹಲಿ ಸರ್ಕಾರ ನ್ಯಾಯಾಲಯದ ಮೊರೆ ಹೋಗಿದೆ.

ಅಧಿಕಾರಶಾಹಿಗಳ ಹುದ್ದೆಯ ಮೇಲೆ ಕೇಂದ್ರ ನಿಯಂತ್ರಣ ಸಾಧಿಸುವ ವಿವಾದಾತ್ಮಕ ಸುಗ್ರೀವಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಈ ಸವಾಲು ಎದುರಾಗಿತ್ತು. ದೆಹಲಿ ಸರ್ಕಾರವು ತನ್ನನ್ನು ಸಂಪರ್ಕಿಸದೆ ಅಂತಹ ನೇಮಕಾತಿಗಳನ್ನು ಮಾಡಬಾರದು ಎಂದು ವಾದಿಸಿತ್ತು.

ಇಂದಿನ ವಿಚಾರಣೆಯಲ್ಲಿ, ದೆಹಲಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ”…ಯಾವಾಗಲೂ ದೆಹಲಿ ಸರ್ಕಾರವೇ ನೇಮಕ ಮಾಡುತ್ತಿತ್ತು. ಈಗ ಸಾರ್ವತ್ರಿಕ ಸುಗ್ರೀವಾಜ್ಞೆ ಇದೆ… ನಾನು ಆಕ್ಷೇಪಿಸುತ್ತಿರುವುದು ಲೆಫ್ಟಿನೆಂಟ್ ಗವರ್ನರ್‌ನ ಏಕಪಕ್ಷೀಯ ನಿರ್ಧಾರ” ಎಂದು ಹೇಳಿದರು.

ಇದಕ್ಕೆ ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಸೇವೆಗಳ ಮಸೂದೆಯನ್ನು ಉಲ್ಲೇಖಿಸಿ, ಕೇಂದ್ರ ಗೃಹ ಸಚಿವಾಲಯವು ಈ ನೇಮಕಾತಿಗಳನ್ನು ”ತಿದ್ದುಪಡಿಗೆ ಮುಂಚೆಯೇ” ಮಾಡಿದೆ ಎಂದು ಹೇಳಿದರು. ಆದಾಗ್ಯೂ, ಸಿಂಘ್ವಿ ಅವರು, ಸಚಿವಾಲಯವು ಮಂತ್ರಿ ಮಂಡಳಿಯ ಸಲಹೆಯ ಆಧಾರದ ಮೇಲೆ ನೇಮಕಾತಿಗಳನ್ನು ಮಾಡುತ್ತದೆ ಎಂದು ಹೇಳಿದರು.

”ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ಸಿಎಂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಏಕೆ ಭೇಟಿಯಾಗುವುದಿಲ್ಲ? ಒಟ್ಟಿಗೆ ಏಕೆ ತೀರ್ಮಾಣಗಳನ್ನು ತಗೆದುಕೊಳ್ಳುವುದಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಕೇಳಿತು. ಕಳೆದ ಬಾರಿ ಡಿಇಆರ್‌ಸಿ (ದೆಹಲಿ ವಿದ್ಯುತ್ ನಿಯಂತ್ರಣ ಆಯೋಗ) ಅಧ್ಯಕ್ಷರ ನೇಮಕಕ್ಕೆ ಅವರು ಎಂದಿಗೂ ಒಪ್ಪಲಿಲ್ಲ…” ಎಂದು ಪೀಠವು ಹೇಳಿತು.

ಗೌವರ್ನರ್ ಮತ್ತು ಕೇಂದ್ರವು ಹೆಸರುಗಳ ಫಲಕವನ್ನು ಏಕೆ ಪ್ರಸ್ತಾಪಿಸುವುದಿಲ್ಲ? ಅಂತಿಮ ಆಯ್ಕೆಯು ನೀವು ಮಾಡಿದ ಪ್ಯಾನೆಲ್‌ನಿಂದ ಆಗಿರುತ್ತದೆ. ನೀವು ಸಮಿತಿಯನ್ನು ಸೂಚಿಸುತ್ತೀರಿ. ನಂತರ ಅವರು (ದೆಹಲಿ ಸರ್ಕಾರ) ಒಂದು ಹೆಸರನ್ನು ತೆಗೆದುಕೊಳ್ಳುತ್ತಾರೆ” ಎಂದು ನ್ಯಾಯಮೂರ್ತಿ ಪ್ರಸ್ತಾಪಿಸಿದರು.

ಮೆಹ್ತಾ ಅವರು ಇದನ್ನು ಒಪ್ಪಿಕೊಂಡರು ಮತ್ತು ಅವರು ನಿರ್ದೇಶಿಸಿದಂತೆ ಶಾರ್ಟ್‌ಲಿಸ್ಟ್‌ನೊಂದಿಗೆ ಹಿಂತಿರುಗುವುದಾಗಿ ಹೇಳಿದರು.

ಇದನ್ನೂ ಓದಿ: ಅಕ್ರಮ ಆಸ್ತಿ ಪ್ರಕರಣ: ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ರಾಜ್ಯ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...