PC: India Today

ನಿನ್ನೆ ಸಂಜೆಯಿಂದ ಮುಂಬೈ ಮಹಾನಗರಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ನೀರಿನಿಂದ ತುಂಬಿಹೋಗಿವೆ. ಕೇಂದ್ರ ರೈಲ್ವೇ ಮತ್ತು ಸಬ್ ಅರ್ಬನ್ ರೈಲು ಸಂಚಾರಕ್ಕೂ ಮಳೆ ಅಡ್ಡಗಾಲು ಹಾಕ್ಕಿದ್ದು, ಹಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ, ಪಶ್ಚಿಮ ಉಪನಗರಗಳಲ್ಲಿ 280 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಭಾರತದ ಹವಾಮಾನ ಇಲಾಖೆ (IMD-India Meteorological Department) ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ನಗರದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಮೂರು ಅಂತಸ್ತಿನ ಕಟ್ಟಡ ಕುಸಿದು 10 ಮಂದಿ ಧಾರುಣ ಸಾವು

ನಗರದ ಭೆಂಡಿ ಬಜಾರ್, ಗೋಲ್ ಟೆಂಪಲ್, ನಾನಾ ಚೌಕ್, ಮುಂಬೈ ಸೆಂಟ್ರಲ್ ಜಂಕ್ಷನ್, ಬಾವ್ಲಾ ಕಾಂಪೌಂಡ್, ಜೆ.ಜೆ.ಜಂಕ್ಷನ್,ಹಿಂದ್ಮಾತಾ, ಕಾಲಾ ಚೌಕಿ, ಸರ್ತಿ ಬಾರ್, ವರ್ಲಿ ಸೀ ಫೇಸ್‌ಗಳಲ್ಲಿ ಮಳೆ ನೀರು ನುಗ್ಗಿದ್ದು, ನೀರು ಹೊರಹಾಕಲು ವಾರ್ಡ್‌ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಂಬೈ ಕಾಪೋರೇಷನ್ ಟ್ವೀಟ್ ಮಾಡಿದೆ.

ಮಳೆಯಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದು, ಜನ ಕಚೇರಿಗೆ ತೆರಳಲು ಆಗದ ಕಾರಣ ಮುಂಬೈನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೂ ರಜೆ ಘೋಷಿಸಲಾಗಿದೆ. ಜನರಿಗೆ ಅಗತ್ಯವಿದ್ದರೇ ಮಾತ್ರ ಮನೆಗಳಿಂದ ಹೊರ ಬರುವಂತೆ ಬೃಹತ್‌ಮುಂಬೈ ಕಾರ್ಪೊರೇಷನ್ ಮನವಿ ಮಾಡಿದೆ.

ಮಹಾಮಳೆಯಿಂದಾಗಿ ಮುಂಬೈನ ಚಾರಿಟಿ ಆಸ್ಪತ್ರೆ ನಾಯರ್‌‌‌‌ ಆಸ್ಪತ್ರೆ ನೀರಿನಿಂದ ತುಂಬಿದೆ. ಕೊರೊನಾ ರೋಗಿಗಳಿದ್ದ ಕೊವೀಡ್ ವಾರ್ಡ್‌‌ ಸಂಪೂರ್ಣ ಮಳೆ ನೀರಿನಿಂದ ತುಂಬಿದ್ದು ರೋಗಿಗಳ ಜೊತೆಗೆ ಆಸ್ಪತ್ರೆ ಸಿಬ್ಬಂದಿ ಕೂಡ ಪರದಾಡಿದ್ದಾರೆ.  ಕೊರೊನಾ ಸೋಂಕಿತರಲ್ಲಿ ಪ್ರಥಮ ಸ್ಥಾನದಲ್ಲಿರುವ ಮುಂಬೈನಲ್ಲಿ ಮಳೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹಳೆಯ ಕಟ್ಟಡಗಳು ಮತ್ತು ಸರಿಯಾಗಿ ನಿರ್ವಹಿಸದೆ ಇರುವ ಕಟ್ಟಡಗಳಿಂದ ಅಪಾಯದ ಸಾಧ್ಯತೆ ಇದೆ ಎಂದು ಹವಾಮಾನ ಕಚೇರಿ ಎಚ್ಚರಿಕೆ  ನೀಡಿದೆ. ಈ ವಾರದ ಆರಂಭದಲ್ಲಿ ಮುಂಬೈ ಬಳಿಯ ಭಿವಾಂಡಿಯಲ್ಲಿ ಕಟ್ಟಡ ಕುಸಿದು 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.


ಇದನ್ನೂ ಓದಿ: ಬೆಂಗಳೂರು ಸ್ಫೋಟ ಪ್ರಕರಣ: 12 ವರ್ಷಗಳ ನಂತರ ಆರೋಪಿ ಬಂಧನ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts