2020 ರ ಗಲಭೆಗಳ ಪಿತೂರಿ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪ್ರಸ್ತುತಪಡಿಸಿದ ಅವರ ವಾಟ್ಸಾಪ್ ಚಾಟ್‌ಗಳಲ್ಲಿ, ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಅಥವಾ ಹಿಂಸಾಚಾರದಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಸೂಚನೆಗಳು ಹೊಂದಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಶುಕ್ರವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೆಹಲಿ ಗಲಭೆ ಪ್ರಕರಣ
ಪ್ರಕರಣದಲ್ಲಿ ದೆಹಲಿ ಪೊಲೀಸ್ ವಿಶೇಷ ಸೆಲ್ ಉಲ್ಲೇಖಿಸಿರುವ ಚಾಟ್‌ಗಳಲ್ಲಿ “ಚಕ್ಕಾ ಜಾಮ್” ಅಥವಾ ರಸ್ತೆ ತಡೆಗಳು ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಮಾತ್ರ ಉಲ್ಲೇಖಿಸುತ್ತವೆಯೇ ಹೊರತು ಹಿಂಸಾಚಾರ ಅಥವಾ ಶಸ್ತ್ರಾಸ್ತ್ರಗಳ ಬಳಕೆಯನ್ನಲ್ಲ ಎಂದು ಹುಸೇನ್ ಅವರ ವಕೀಲ ರಾಜೀವ್ ಮೋಹನ್ ವಾದಿಸಿದ್ದಾರೆ. ದೆಹಲಿ ಗಲಭೆ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಚಕ್ಕಾ ಜಾಮ್ ಭಯೋತ್ಪಾದಕ ಕೃತ್ಯವಲ್ಲ… ದೆಹಲಿಯ ಪೊಲೀಸರ ಪ್ರಕಾರ ಜನರನ್ನು ಭೇಟಿಯಾಗುವುದು ಮತ್ತು ಪ್ರತಿಭಟಿಸುವುದು ಕೂಡ ಭಯೋತ್ಪಾದಕ ಚಟುವಟಿಕೆಯೇ?” ಮೋಹನ್ ನ್ಯಾಯಾಲಯಕ್ಕೆ ಕೇಳಿದ್ದಾರೆ. “ಭಾರತ ಸರ್ಕಾರ ಅಥವಾ ಅದರ ತನಿಖೆಗಳ ವಿರುದ್ಧ ನಾವು ಶಸ್ತ್ರಾಸ್ತ್ರಗಳನ್ನು ಎತ್ತಿಕೊಳ್ಳಬೇಕು ಎಂದು ವಾಟ್ಸಾಪ್ ಸಂದೇಶಗಳಲ್ಲಿ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೇಯ್ ಅವರ ನ್ಯಾಯಾಲಯವು ಪ್ರಕರಣದ ಆರೋಪಗಳನ್ನು ರೂಪಿಸುವ ಕುರಿತು ವಾದಗಳನ್ನು ಆಲಿಸುತ್ತಿತ್ತು.
2020ರ ಫೆಬ್ರವರಿಯಲ್ಲಿ, ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುವವರ ವಿರುದ್ಧ ಬಿಜೆಪಿ ಬೆಂಬಲಿಗರು ದಾಳಿ ಮಾಡಿದ್ದರು. ಇದು ಹಿಂಸಾಚಾರಕ್ಕೆ ತಿರುಗಿ, ಹಿಂಸಾಚಾರದಲ್ಲಿ 53 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದರೆ. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ.
ಇದರ ನಂತರ ದೆಹಲಿ ಪೊಲೀಸರು ಹಿಂಸಾಚಾರದ ಹಿಂದಿನ ಸಂಚಿನ ಬಗ್ಗೆ ತನಿಖೆ ನಡೆಸಲು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಭಯೋತ್ಪಾದನಾ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಈ ವೇಳೆ ಅವರು ತಾಹಿರ್ ಹುಸೇನ್ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಆರು ಆರೋಪಿಗಳು ಜಾಮೀನು ಪಡೆದಿದ್ದರೆ, 12 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಎಸಗಿದ ವೈಯಕ್ತಿಕ ಕೃತ್ಯಗಳಿಗೆ ಪೊಲೀಸರು ಈಗಾಗಲೇ ಎಫ್‌ಐಆರ್ ಮತ್ತು ಆರೋಪಪಟ್ಟಿ ದಾಖಲಿಸಿದ್ದಾರೆ ಎಂದು ಹುಸೇನ್ ಪರ ವಕೀಲರು ವಾದಿಸಿದ್ದಾರೆ. ಆರೋಪಿಗಳು ಸಶಸ್ತ್ರ ದಂಗೆ ಅಥವಾ ಗಲಭೆಯನ್ನು ಉತ್ತೇಜಿಸಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲದಿದ್ದರೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯನ್ನು ಪ್ರಕರಣಕ್ಕೆ ಅನ್ವಯಿಸಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಸೋದ್ಯಮ ಕುಸಿತ ಎಂದ ವ್ಯಕ್ತಿಯ ವಿರುದ್ಧ ಗೋವಾ ಅಧಿಕಾರಿಗಳು ದೂರು!
ಪ್ರವಾಸೋದ್ಯಮ ಕುಸಿತ ಎಂದ ವ್ಯಕ್ತಿಯ ವಿರುದ್ಧ ಗೋವಾ ಅಧಿಕಾರಿಗಳು ದೂರು!


