- Advertisement -
- Advertisement -
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋಲು ಅನಿರೀಕ್ಷಿತ ಅಲ್ಲ. ದೆಹಲಿ ಮತದಾರರು ಬಿಜೆಪಿ ವಿರೋಧಿ ಮತ ಹಂಚಿ ಹೋಗಬಾರದೆಂಬ ಲೆಕ್ಕಾಚಾರ ಮಾಡಿ ಒಂದು ಪಕ್ಷವನ್ನು ಬೆಂಬಲಿಸಿದಂತಿದೆ. ಈ ಕಾರ್ಯತಂತ್ರದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ನುಡಿದಂತೆ ನಡೆದಿರುವ ಆಮ್ ಆದ್ಮಿ ಪಕ್ಷವನ್ನು ಗೆಲ್ಲಿಸಿರುವ ದೆಹಲಿಯ ಪ್ರಜ್ಞಾವಂತ ಮತದಾರರ ಪ್ರಬುದ್ಧತೆ ದೇಶದ ಎಲ್ಲ ಮತದಾರರಿಗೆ ಪಾಠವಾದರೆ ಮಾತ್ರ ದೇಶದ ರಾಜಕೀಯ ಬದಲಾಗಬಹುದು ಎಂದು ಅವರು ಹೇಳಿದ್ದಾರೆ.
ದೆಹಲಿ ಚುನಾವಣೆಯನ್ನು ಗೆದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಅಭಿನಂದನೆಗಳು. ಅಭಿವೃದ್ಧಿ ಅಜೆಂಡಾದ ಜೊತೆಗೆ ಸಾಮಾಜಿಕ ಬದಲಾವಣೆಯ ಅಜೆಂಡಾದ ಬಗ್ಗೆಯೂ ಅವರ ಮನಸ್ಸು ಮುಕ್ತವಾಗಿರಲಿ ಎನ್ನುವುದು ನನ್ನ ನಮ್ರ ಸಲಹೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


