Homeಮುಖಪುಟ2020ರ ಜನವರಿ‌ಯಲ್ಲಿ ನಗರ ಪ್ರದೇಶದ ನಿರುದ್ಯೋಗ 9.7% ಕ್ಕೆ ತೀವ್ರ ಹೆಚ್ಚಳ: CMIE

2020ರ ಜನವರಿ‌ಯಲ್ಲಿ ನಗರ ಪ್ರದೇಶದ ನಿರುದ್ಯೋಗ 9.7% ಕ್ಕೆ ತೀವ್ರ ಹೆಚ್ಚಳ: CMIE

- Advertisement -
- Advertisement -

2019ರ ಡಿಸೆಂಬರ್‌ನಲ್ಲಿ 9% ದಾಖಲಾಗಿದ್ದ ನಗರದ ನಿರುದ್ಯೋಗ ಪ್ರಮಾಣವು 9.7% ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಬಿಡುಗಡೆಗೊಳಿಸಿದ ಮಾಹಿತಿಯು ತಿಳಿಸಿದೆ.

ಇದು ತೀವ್ರತರದ ಏರಿಕೆಯಾಗಿದೆ ಎಂದು CMIE ಹೇಳಿದೆ. ಜನವರಿ 2020ಕ್ಕೆ 12 ತಿಂಗಳುಗಳಲ್ಲಿ ಒಟ್ಟಾರೆ ಮಾಸಿಕ ನಿರುದ್ಯೋಗ ದರವು 7.4 ಪ್ರತಿಶತದಷ್ಟಿದೆ.

ಭಾರತದಲ್ಲಿ 2019ರ ಡಿಸೆಂಬರ್‌ನಲ್ಲಿ ನಿರುದ್ಯೋಗವೂ 7.6% ಇದ್ದು, 2020 ರ ಜನವರಿಯಲ್ಲಿ 7.16% ಇಳಿಕೆಯಾಗಿದೆ ಎಂದು ಸಹ ಅದು ಹೇಳಿದೆ.

CMIE ದ ಸಿಇಒ ಆದ ಮಹೇಶ್ ವ್ಯಾಸ್ ಅವರು ತಮ್ಮ ಬಿಸಿನೆಸ್ ಸ್ಟ್ಯಾಂಡರ್ಡ್ ಅಂಕಣದಲ್ಲಿ, “ನಿರುದ್ಯೋಗ ದರವು ಆಗಸ್ಟ್ ಮತ್ತು ಅಕ್ಟೋಬರ್ 2019 ರಲ್ಲಿ 8 ಪ್ರತಿಶತವನ್ನು ದಾಟಿದೆ. ಆದರೆ, ಇದು ಅಕ್ಟೋಬರ್‌ನಿಂದ ಸ್ಪಷ್ಟವಾಗಿ ಕಡಿಮೆಯಾಗಿ ದರವು ಶೇಕಡಾ 8 ಕ್ಕಿಂತಲೂ ಕಡಿಮೆಯಾಗಿದೆ ಎಂದು ತೋರುತ್ತದೆ, ಆದರೆ ಇದು ಶೇಕಡಾ 7 ಕ್ಕಿಂತ ಹೆಚ್ಚಾಗಿದೆ. ಸ್ಪಷ್ಟವಾಗಿ, ನಿರುದ್ಯೋಗ 12 ತಿಂಗಳ ಅವಧಿಯಲ್ಲಿ ದರ ಸುಮಾರು 7.4% ರಷ್ಟಿದ್ದರೂ, ಅದು 2017 ರ ಮಧ್ಯದಿಂದಲೂ ಹೆಚ್ಚಾಗುವುದನ್ನು ನಿಲ್ಲಿಸಿದೆ. ಹೊಸ ವಿದ್ಯಮಾನವು ನಿರುದ್ಯೋಗ ದರದಲ್ಲಿನ ತಿಂಗಳ-ತಿಂಗಳ ವ್ಯತ್ಯಾಸಗಳಲ್ಲಿ ಗಣನೀಯ ಹೆಚ್ಚಳವಾಗಿದೆ” ಎಂದಿದ್ದಾರೆ.

ಮುಖ್ಯಾಂಶಗಳು

ಗ್ರಾಮೀಣ ನಿರುದ್ಯೋಗ ದರವು 2019ರ ಅಕ್ಟೋಬರ್‌ನಲ್ಲಿ 8% ರಿಂದ 2019 ರ ಡಿಸೆಂಬರ್‌ನಲ್ಲಿ 6.9% ಕ್ಕೆ ಇಳಿದಿದೆ ಮತ್ತು 2020 ರ ಜನವರಿಯಲ್ಲಿ 6% ಕ್ಕೆ ಇಳಿದಿದೆ.

2019 ರ ಆಗಸ್ಟ್ ನಲ್ಲಿ  ನಗರ ನಿರುದ್ಯೋಗ 9.71% ಇತ್ತು , ಜನವರಿಯಲ್ಲಿ ಇದು ಮತ್ತೇ 9.7% ಆಗಿದೆ.

ನಿರುದ್ಯೋಗ ದರಗಳಲ್ಲಿ ಮಾಸಿಕ ವ್ಯತ್ಯಾಸಗಳಲ್ಲಿ ಹೆಚ್ಚಳ ಕಂಡುಬಂದಿದೆ, ಜೊತೆಗೆ ಗ್ರಾಮೀಣ ಮತ್ತು ನಗರ ನಿರುದ್ಯೋಗ ದರಗಳ ನಡುವಿನ ಅಂತರದಲ್ಲಿ ಹೆಚ್ಚಳವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read