Homeಮುಖಪುಟಅಭಿನಂದನೆಗಳ ಸುರಿಮಳೆಯಲ್ಲಿ ಮಿಂದೆದ್ದ ಆಪ್‌ ನಾಯಕ ಕೇಜ್ರಿವಾಲ್‌...

ಅಭಿನಂದನೆಗಳ ಸುರಿಮಳೆಯಲ್ಲಿ ಮಿಂದೆದ್ದ ಆಪ್‌ ನಾಯಕ ಕೇಜ್ರಿವಾಲ್‌…

- Advertisement -
- Advertisement -

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ಆಪ್‌ನ ಅರವಿಂದ್‌ ಕೇಜ್ರಿವಾಲ್‌ಗೆ ದೇಶಾದ್ಯಂತ ಹಲವು ಗಣ್ಯರು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ರಾಹುಲ್‌ ಗಾಂಧಿ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಪ್ರಶಂಸಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ: ದೆಹಲಿ ವಿಧಾನಸಭಾ ಚುನಾವಣೆಯ ಜಯಕ್ಕಾಗಿ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್‌ರವರಿಗೆ ಅಭಿನಂದನೆಗಳು. ದೆಹಲಿಯ ಜನರ ಆಕಾಂಕ್ಷೆಗಳನ್ನು ಈಡೇರಿಸಲಿ ಎಂದು ಹಾರೈಸುತ್ತೇನೆ.

ರಾಹುಲ್‌ ಗಾಂಧಿ: ದೆಹಲಿ ವಿಧಾನಸಭೆಯಲ್ಲಿ ಜಯಗಳಿಸಿದ ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್‌ರವರಿಗೆ ಶುಭಾಶಯಗಳು ಮತ್ತು ಅಭಿನಂದನೆಗಳು.

ಎಚ್‌.ಡಿ ದೇವೇಗೌಡ: ಈ ಗೆಲುವು “ಕೋಮು ಧ್ರುವೀಕರಣದ ಹತಾಶ ಕೃತ್ಯಗಳು ಸೀಮಿತ ಕರೆನ್ಸಿಯನ್ನು ಹೊಂದಿವೆ” ಎಂದು ಭಾರತದ ಉಳಿದ ಭಾಗಗಳಿಗೆ ಮತ್ತೊಮ್ಮೆ ಭರವಸೆ ನೀಡುತ್ತದೆ. ನೀವು ಈ ಗೆಲುವಿಗೆ ಸಮೃದ್ಧವಾಗಿ ಅರ್ಹರಾಗಿದ್ದೀರಿ. ಅಭಿವೃದ್ಧಿಯತ್ತ ನಿಮ್ಮ ಗಮನವು ಅಪಾರವಾಗಿದೆ ಎಂಬುದು ಭಾರತೀಯ ರಾಜಕಾರಣದಲ್ಲಿ ಗಮನಾರ್ಹವಾದ ಸಂಕೇತವಾಗಿದೆ.

ಮಮತಾ ಬ್ಯಾನರ್ಜಿ: ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಅಭಿವೃದ್ಧಿ ಮಾತ್ರ ಕೆಲಸ ಮಾಡುತ್ತದೆ, ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಅನ್ನು ತಿರಸ್ಕರಿಸಲಾಗುವುದು. ದೆಹಲಿ ಫಲಿತಾಂಶಗಳನ್ನು ನೋಡಿದರೆ ಆಮ್ ಆದ್ಮಿ ಪಕ್ಷವು ಮತ್ತೊಮ್ಮೆ ಬಹುಮತದೊಂದಿಗೆ ಗೆಲ್ಲುವುದು ಸ್ಪಷ್ಟವಾಗಿದೆ. ದ್ವೇಷದ ಮಾತು ಮತ್ತು ವಿಭಜಕ ರಾಜಕಾರಣ ಮಾಡುವವರಿಗಗೆ ಒಂದು ಮಾತು ಹೇಳಲು ಬಯಸುತ್ತೇನೆ. ಕೊಟ್ಟ ಭರವಸೆಗಳನ್ನು ಪೂರೈಸುವವರು ಮಾತ್ರ ಗೌರವಿಸಲ್ಪಡುತ್ತಾರೆ.

ನವೀನ್‌ ಪಟ್ನಾಯಕ್‌: ದೆಹಲಿ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅರವಿಂದ್‌ ಕೇಜ್ರಿವಾಲ್ ಮತ್ತು  ಆಮ್ ಆದ್ಮಿ ಪಾರ್ಟಿಗೆ ಅಭಿನಂದನೆಗಳು. ಅವರ ಯಶಸ್ವಿ ಅಧಿಕಾರಾವಧಿಗೆ ಶುಭಾಶಯಗಳು.

ಸಿದ್ದರಾಮಯ್ಯ: ದೆಹಲಿ ಚುನಾವಣೆಯನ್ನು ಗೆದ್ದ ಆಮ್ ಆದ್ಮಿ‌ ಪಕ್ಷದ ನಾಯಕ‌ ಅರವಿಂದ ಕೇಜ್ರಿವಾಲ್‌ ಅವರಿಗೆ ಅಭಿನಂದನೆಗಳು. ಅಭಿವೃದ್ಧಿ ಅಜೆಂಡಾದ ಜೊತೆಗೆ ಸಾಮಾಜಿಕ ಬದಲಾವಣೆಯ‌ ಅಜೆಂಡಾದ ಬಗ್ಗೆಯೂ‌ ಅವರ ಮನಸ್ಸು ಮುಕ್ತವಾಗಿರಲಿ ಎನ್ನುವುದು ನನ್ನ ನಮ್ರ ಸಲಹೆ.

ರಾಜನಾಥ್‌ ಸಿಂಗ್‌: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷವನ್ನು ನಾನು ಅಭಿನಂದಿಸುತ್ತೇನೆ.

ಅಲ್ಲದೇ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಾಂತರ ಜನ ಕೇಜ್ರಿವಾಲ್‌ ಮತ್ತು ಆಮ್‌ ಆದ್ಮಿ ಪಕ್ಷಕ್ಕೆ ಶುಭ ಹಾರೈಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...