Homeಮುಖಪುಟಪರ್ವೇಶ್ ದ್ವೇಷ ಭಾಷಣಕ್ಕೆ ತೀವ್ರ ಹಿನ್ನಡೆ : ಸಂಸದನ ಕ್ಷೇತ್ರದ ಎಲ್ಲಾ ಹತ್ತು ಸ್ಥಾನಗಳನ್ನು ಕಳೆದುಕೊಂಡ...

ಪರ್ವೇಶ್ ದ್ವೇಷ ಭಾಷಣಕ್ಕೆ ತೀವ್ರ ಹಿನ್ನಡೆ : ಸಂಸದನ ಕ್ಷೇತ್ರದ ಎಲ್ಲಾ ಹತ್ತು ಸ್ಥಾನಗಳನ್ನು ಕಳೆದುಕೊಂಡ ಬಿಜೆಪಿ

- Advertisement -
- Advertisement -

ತಮ್ಮ “ದ್ವೇಷ ಭಾಷಣಗಳಿಗಾಗಿ” ಚುನಾವಣಾ ಆಯೋಗದಿಂದ ಎರಡು ಬಾರಿ ನಿಷೇದಕ್ಕೊಳಪಟ್ಟಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ದ್ವೇಷ ಭಾಷಣಗಳು ಯಾವುದೇ ಫಲವನ್ನು ನೀಡಲಿಲ್ಲ. ಅಲ್ಲದೇ ಬಿಜೆಪಿ ತನ್ನ ಪಶ್ಚಿಮ ದೆಹಲಿ ಸಂಸದೀಯ ಕ್ಷೇತ್ರದ ಎಲ್ಲ ಹತ್ತು ಸ್ಥಾನಗಳನ್ನೂ ಸೋತುಕೊಂಡಿದೆ.

ಸಂಸದ ಪರ್ವೇಶ್ ವರ್ಮಾ ಅವರ ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಸ್ಥಾನಗಳಿಂದ ಬಿಜೆಪಿಯ ಪ್ರಮುಖ ಅಭ್ಯರ್ಥಿಗಳಾದ ತಾಜಿಂದರ್ ಬಗ್ಗಾ, ರಾಜೀವ್ ಬಬ್ಬರ್ ಮತ್ತು ಆಶಿಶ್ ಸೂದ್ ಅವರನ್ನು ಕಣಕ್ಕಿಳಿಸಿತ್ತು.

ಪರ್ವೇಶ್ ವರ್ಮ ಶಾಹೀನ್ ಬಾಗ್ ನ ಪ್ರತಿಭಟನಾಕಾರರನ್ನು “ಅತ್ಯಾಚಾರಿಗಳು ಮತ್ತು ಕೊಲೆಗಾರರು” ಎಂದು ಕರೆದಿದ್ದಕ್ಕೆ ತೀವ್ರವಾಗಿ ಟೀಕೆಗೊಳಪಟ್ಟಿದ್ದರು. ಅಲ್ಲದೆ ಮತದಾನದ ದಿನದಂದು ಶಾಹೀನ್ ಬಾಗ್ ಮತದಾರರನ್ನು ಸೂಚಿಸಿ ಅವರ ಟ್ವಿಟ್ಟರ್ ನಲ್ಲಿ ವೀಡಿಯೋ  ಪೋಸ್ಟೊಂದನ್ನು ಹಾಕಿ “ಶಾಹೀನ್ ಬಾಗ್ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತು ಎಎಪಿ ನೀಡಿದ್ದ ಬಿರಿಯಾನಿಯ ಸಾಲ ತೀರಿಸುತ್ತಿದ್ದಾರೆ. ರಾಷ್ಟ್ರವಾದಿ ಹಾಗೂ ದೇಶಭಕ್ತರಾದ ದೆಹಲಿಯ ಜನರೆ ನೀವೂ ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತು ರಾಷ್ಟ್ರೀಯವಾದಿ ಪಕ್ಷಕ್ಕೆ ಮತ ಚಲಾಯಿಸುವಂತೆ” ಜನರನ್ನು ಒತ್ತಾಯಿಸಿದ್ದರು. ವರ್ಮಾ ಅವರು ತನ್ನ ಹೆಚ್ಚಿನ ಸಮಯವನ್ನು ಪಶ್ಚಿಮ ದೆಹಲಿ ಕ್ಷೇತ್ರದ ಪ್ರಚಾರಕ್ಕಾಗಿ ಕಳೆದಿದ್ದರು.

ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ ಮಸೀದಿಗಳನ್ನು ನೆಲಸಮ ಮಾಡುವುದಾಗಿ ವಿಧಾನಸಭಾ ಚುನಾವಣೆಗೆ ಮುನ್ನ ವರ್ಮಾ ಭರವಸೆ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...