ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 34 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ನಂತರ ದುಷ್ಕರ್ಮಿಗಳು ಮಹಿಳೆಯನ್ನು ಅಲ್ಲಿನ ಸರಾಯ್ ಕಾಲೇ ಖಾನ್ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ದಾರಿಹೋಕರೊಬ್ಬರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿ ಹೇಳಿವೆ. ಅತ್ಯಾಚಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಸುದ್ದಿ ತಿಳಿದ ತಕ್ಷಣ ದೆಹಲಿ ಪೊಲೀಸರ ತಂಡವೊಂದು ಘಟನಾ ಸ್ಥಳಕ್ಕೆ ಧಾವಿಸಿ ಸಂತ್ರಸ್ತೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂಓದಿ: ಉತ್ತರ ಪ್ರದೇಶ | ಕೋಮು ಪ್ರಚೋದಕ ಘೋಷಣೆಗಳನ್ನು ಕೂಗಿ ರಸ್ತೆ ತಡೆ ಆರೋಪ : 1000 ಮಂದಿ ಅಪರಿಚಿತರ ವಿರುದ್ದ ಎಫ್‌ಐಆರ್
ಪ್ರಾಥಮಿಕ ತನಿಖೆಯ ಪ್ರಕಾರ, ಮಹಿಳೆಯ ಮೇಲೆ ಬೇರೆ ಯಾವುದೋ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಘಟನೆ ನಂತರ ಜನನಿಬಿಡ ಪ್ರದೇಶವಾದ ದೆಹಲಿಯ ಸರಾಯ್ ಕಾಲೇ ಖಾನ್ ಪ್ರದೇಶದಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿದೆ.
ಅತ್ಯಾಚಾರಕ್ಕೆ ಒಳಗಾದ 34 ವರ್ಷದ ಮಹಿಳೆ ಒಡಿಶಾ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ಹುಟ್ಟೂರು ತೊರೆದು ದೆಹಲಿಯಲ್ಲಿ ನೆಲೆಸಿದ್ದರು. “ಸಂತ್ರಸ್ತ ಮಹಿಳೆ ದೆಹಲಿಯ ಕಟ್ವಾರಿಯಾ ಸರಾಯ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಉಳಿದುಕೊಂಡಿದ್ದರು” ಎಂದು ಅಧಿಕಾರಿ ಹೇಳಿದ್ದಾರೆ. ದೆ ಅತ್ಯಾಚಾರ ಹಲಿ
ಕೆಲವು ವಿವಾದಗಳ ಕಾರಣ ಸಂತ್ರಸ್ತೆಯನ್ನು ಆಗಸ್ಟ್‌ನಲ್ಲಿ ಮೆನೆ ತೊರೆಯುವಂತೆ ಕೇಳಲಾಗಿತ್ತು. ಅದರ ನಂತರ ಹಲವಾರು ದಿನಗಳವರೆಗೆ ಮಹಿಳೆ ದೆಹಲಿಯ ಬೀದಿಗಳಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ಇದನ್ನೂಓದಿ: ಬಿಜೆಪಿ ಸರ್ಕಾರದಿಂದ ನಿರ್ಲಕ್ಷ್ಯ | ಕೊಳೆಯುತ್ತಿದೆ ವಿದ್ಯಾರ್ಥಿನಿಯರ 1,500 ಸ್ಕೂಟರ್‌ಗಳು
ಸಂತ್ರಸ್ತೆ ಪದವೀಧರರಾಗಿದ್ದು, ಈ ಹಿಂದೆ ಆಗ್ನೇಯ ದೆಹಲಿಯ ಜಮ್ರೂದ್‌ಪುರದಲ್ಲಿ ಮನೆಯೊಂದಕ್ಕೆ ನುಗ್ಗಲು ಪ್ರಯತ್ನಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಘಟನೆಯನ್ನು ಯಾವುದೇ ದೂರು ದಾಖಲಾಗಿಲ್ಲ. ಕಿಶನ್‌ಗಢದ ಎಟಿಎಂ ಬೂತ್‌ನಲ್ಲಿ ಮಹಿಳೆ ಒಂದು ರಾತ್ರಿ ಕಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಸಂತ್ರಸ್ತ ಮಹಿಳೆ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ಸಹಕರಿಸುತ್ತಿಲ್ಲ ದೆಹಲಿ ಪೊಲೀಸರು ಹೇಳಿದ್ದಾರೆ. “ನಾವು ಘಟನೆಯ ಬಗ್ಗೆ ಸಂತ್ರಸ್ತೆಯ ಪೋಷಕರಿಗೆ ತಿಳಿಸಿದ್ದೇವೆ ಮತ್ತು ಪ್ರಸ್ತುತ ಅವರನ್ನು ನಿಗಾದಲ್ಲಿ ಇರಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದ್ದು, ಅದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ತಾಂತ್ರಿಕ ಕಣ್ಗಾವಲು ಆಧರಿಸಿ ಆರೋಪಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊ ನೋಡಿ: ದೆಹಲಿಯಲ್ಲಿ ಸರ್ಕಾರದ ಜೋರು, ಹಳ್ಳಿಯಲ್ಲಿ ಕೂಳಿಲ್ಲದ ಗೋಳು – ಗೊಲ್ಲಹಳ್ಳಿ ಶಿವಪ್ರಸಾದ್‌ರವರ ಹಾಡು


