Homeಅಂಕಣಗಳುಕುಸಿಯುತ್ತಿರುವ ಲಿಬರಲ್ ಪ್ರಜಾಪ್ರಬುತ್ವ: ಬಿ. ಶ್ರೀಪಾದ್ ಭಟ್

ಕುಸಿಯುತ್ತಿರುವ ಲಿಬರಲ್ ಪ್ರಜಾಪ್ರಬುತ್ವ: ಬಿ. ಶ್ರೀಪಾದ್ ಭಟ್

- Advertisement -
| ಬಿ. ಶ್ರೀಪಾದ ಭಟ್ |
ಹಿರಿಯ ಪತ್ರಕರ್ತರಾದ ಪ್ರೇಮಶಂಕರ ಜಾ ಅವರು ‘2002ರ ಗೋದ್ರಾ ದುರಂತಕ್ಕೂ 2019ರ ಪುಲ್ವಮಾ ದುರಂತಕ್ಕೂ ಕ್ಷೋಬೆಗೊಳಿಸುವಂತಹ ಸಾಮ್ಯತೆಗಳಿವೆ’ ಎಂದು ಹೇಳಿದ್ದರು. ಇದು ಸತ್ಯ. ಫೆಬ್ರವರಿ 27, 2002ರಲ್ಲಿ ಗೋದ್ರಾ ರೈಲು ನಿಲ್ದಾಣದಲ್ಲಿ 59 ಅಮಾಯಕ ಹಿಂದೂಗಳು ಬೆಂಕಿ ದುರಂತದಲ್ಲಿ ಬೆಂದು ಹೋದರು. ಆದರೆ ಆ ನಂತರದ ಹತ್ಯಾಕಾಂಡದಲ್ಲಿ 1000 ಕ್ಕೂ ಹೆಚ್ಚು ಮುಸ್ಲಿಮರು ಹತ್ಯೆಯಾದರು ಮತ್ತು 2000ಕ್ಕೂ ಹೆಚ್ಚಿನ ಕುಟುಂಬಗಳು ನಿರಾಶ್ರಿತವಾದವು. ಆದರೆ ಗೋದ್ರಾ ದುರಂತಕ್ಕೂ ಮೊದಲು ಇಂಟೆಲಿಜೆನ್ಸ್ ಬ್ಯೂರೋ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರಿಗೆ 20 ಬಾರಿ ಈ ಗೋದ್ರಾ ಮಾದರಿಯ ದುರ್ಘಟನೆ ನಡೆಯುವ ಸಂಬವವಿದೆ, ‘ವಿಎಚ್‍ಪಿ, ಬಜರಂಗದಳ ಕಾರ್ಯಕರ್ತರು ಲಾಠಿ, ಖಡ್ಗಗಳೊಂದಿಗೆ ದಿನನಿತ್ಯ ಪೆರೇಡ್, ತಾಲೀಮು ನಡೆಸುತ್ತಿದ್ದಾರೆ’ ಎಂದು ಎಚ್ಚರಿಕೆಯ ಮುನ್ಸೂಚನೆ ನೀಡಿದ್ದರು. ಇದರ ಕುರಿತು ಜಾ ಅವರು ‘ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದರು. ಇನ್ನೂ ಹತ್ಯಾಕಾಂಡದ ಶವಗಳ ಸಂಸ್ಕಾರ ಪೂರ್ತಿಗೊಂಡಿರಲಿಲ್ಲ, ಆದರೆ ಮೋದಿ ಮಾರ್ಚ್ 2003ರ ಬದಲಿಗೆ ಜುಲೈ 2002ಕ್ಕೆ (ಅಂದರೆ ಒಂಬತ್ತು ತಿಂಗಳು ಮೊದಲು) ರಾಜ್ಯ ಚುನಾವಣೆ ನಡೆಸಬೇಕೆಂದು ಆಯೋಗಕ್ಕೆ ಕೇಳಿಕೊಂಡರು. ಆಯೋಗವೂ ಸಹ ಇದಕ್ಕೆ ಮಣಿದು ಡಿಸೆಂಬರ್ 2002ರಲ್ಲಿ ಗುಜರಾತ್ ರಾಜ್ಯದ ಚುನಾವಣೆ ಘೋಶಿಸಿತು’ ಎಂದು ಬರೆಯುತ್ತಾರೆ. ನಂತರ ನಡೆದದ್ದು ಇತಿಹಾಸ. 
14, ಫೆಬ್ರವರಿ 2019ರಂದು ಉಗ್ರರ ದಾಳಿಗೆ ಬಲಿಯಾಗಿ 49 ಸಿಆರ್‍ಪಿಎಫ್ ಯೋದರು ಹತರಾದರು. ಆದರೆ ಈ ದುರಂತ ನಡೆಯವುದಕ್ಕೂ 15 ದಿನಗಳಿಗೂ ಮೊದಲು ಇಂಟೆಲಿಜೆನ್ಸ್ ಬ್ಯೂರೋ ಕೇಂದ್ರ ಗೃಹ ಇಲಾಖೆಗೆ ಬಯೋತ್ಪಾದಕರ ದಾಳಿ ನಡೆಯುವ ಸಂಬವವಿದೆ ಎಂದು ಎಚ್ಚರಿಕೆ ನೀಡಿತ್ತು. ಕಾಶ್ಮೀರದ ಪೋಲೀಸರು ಈ ಕುರಿತು ಮುನ್ಸೂಚನೆ ನೀಡಿದ್ದರು. ಅಲ್ಲದೆ ಜೈಸ್ ಬಯೋತ್ಪಾದಕ ಸಂಘಟನೆ ಪುಲ್ವಾಮ ಘಟನೆಗೆ ಎರಡು ದಿನಕ್ಕೂ ಮೊದಲು ಅಫಘಾನಿಸ್ತಾನದಲ್ಲಿ ಟ್ರಕ್ ದಾಳಿ ಮೂಲಕ ನಡಸಿದ ಹತ್ಯಾಕಾಂಡದ ವಿಡಿಯೋ ಬಿಡುಗಡೆ ಮಾಡಿ ಬಾರತಕ್ಕೂ ಇದೆ ಗತಿ ಕಾದಿದೆ ಎಂದು ಕೊಚ್ಚಿಕೊಂಡಿತ್ತು. ಆದರೆ ಮೋದಿ ಸರಕಾರ ಇವೆಲ್ಲವನ್ನ ನಿರ್ಲಕ್ಷಿಸಿತು. ಬಹುಶಃ ಪ್ರದಾನಿ ಮೋದಿ ಈ ಪುಲ್ವಾಮ ದುರಂತದ ನಂತರ ಅದರಿಂದ ದೊರಕುವ ರಾಜಕೀಯ ಲಾಭದ ಲೆಕ್ಕಾಚಾರವನ್ನ ಮೊದಲೆ ಗ್ರಹಿಸಿದ್ದರು ಎನ್ನುವುದು ಖಾತರಿಯಾಗುತ್ತದೆ. ಏಕೆಂದರೆ 2002ರಲ್ಲಿ ಈ ತಂತ್ರವು ಫಲ ಕೊಟ್ಟಿತ್ತು. ನಂತರ ಅವರು ಅಲ್ಲಿನ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಈಗ ಹೆಣಗಳ ಮೇಲಿನ ರಾಜಕಾರಣವನ್ನು ರಾಶ್ಟ್ರ ಚುನಾವಣೆಗೂ ವಿಸ್ತರಿಸುತ್ತಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಪ್ರತಿ ಚುನಾವಣಾ ಬಾಶಣದಲ್ಲಿ ಪುಲ್ವಾಮ ಘಟನೆಯನ್ನ ಉಲ್ಲೇಖಿಸುತ್ತ ಆ ಮೂಲಕ ಹಿಂದೂ ಮತಾಂದತೆಯನ್ನ ಕೆರಳಿಸುತ್ತಿದ್ದಾರೆ. ಯೋದರ ಹೆಣಗಳ ಮೇಲೆ ಸಾದ್ಯವಾದಶ್ಟು ಮತಗಳನ್ನು ಗಳಿಸುವ ಹುನ್ನಾರದಲ್ಲಿದ್ದಾರೆ ಮತ್ತು ಇಡಿ ಬಿಜೆಪಿ ಪಕ್ಷವು ಈ ತಂತ್ರವನ್ನ ಅನುಸರಿಸುತ್ತಿದೆ.
ವರ್ತಮಾನದ ಪ್ರತಿಕ್ರಿಯೆ
ಇಂದು ಬಾರತದ ಪ್ರಜಾಪ್ರಬುತ್ವದ ಆರೋಗ್ಯ ಹೇಗಿದೆ? ಒಂದೆ ಮಾತಿನಲ್ಲಿ ಹೇಳಬೇಕೆಂದರೆ ಹದಗೆಡುತ್ತಿದೆ
ಫ್ರೊ. ಸ್ಟೆನ್ ವಿಡ್ಮಾಲಂ ಅವರು ಹೇಳಿದಂತೆ 2009-2014 ಕಾಲಘಟ್ಟದಲ್ಲಿಯೆ ಪ್ರಜಾಪ್ರಬುತ್ವದ ಕುಸಿತದ ಆರಂಬದ ಲಕ್ಷಣಗಳು ಶುರುವಾದವು. ಮೋದಿಯಂತಹ ನಿರಂಕುಶ ಮನಸ್ಥಿತಿಯ ರಾಜಕಾರಣಿಗೆ ಮತ್ತು ಆರೆಸ್ಸಸ್‍ನಂತಹ ಮತಾಂದ ಸಂಘಟನೆಗೆ ದೇಶವನ್ನ ದ್ವಂಸಗೊಳಿಸಲು ಆ 2009-14 ಕಾಲದ ಯುಪಿಎ2 ಆಡಳಿತ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತು.  ಪ್ರಜಾಪ್ರಬುತ್ವದ ವೈವಿದ್ಯತೆ (ವಿ-ಡೆಮ್)ನ ಯೋಜನೆಯ ಸಮೀಕ್ಷೆ 0-1 ಸೂಚ್ಯಂಕ ಕ್ರಮದಲ್ಲಿ 1947-2017ರ ವರೆಗಿನ ಎಪ್ಪತ್ತು ವರ್ಶಗಳ ಬಾರತದ ಲಿಬರಲ್ ಪ್ರಜಾಪ್ರಬುತ್ವದ ಕಥನವನ್ನ ವಿವರಿಸುತ್ತದೆ. (ಇದರ ವಿವರಗಳಿಗೆ 6/4/2019ರ ವೈರ್.ಇನ್ ಲೇಖನ ನೋಡಿ) ಮಾನವ ಹಕ್ಕುಗಳು, ಅಬಿವ್ಯಕ್ತಿ ಸ್ವಾತಂತ್ರ್ಯ, ಕಾನೂನು ಪಾಲನೆ, ನ್ಯಾಯಾಂಗದ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಸ್ವಾತಂತ್ರ್ಯ ಮತ್ತು ಚುನಾವಣಾ ಪ್ರಜಾಪ್ರಬುತ್ವಗಳ ವಲಯಗಳಲ್ಲಿ ಲಿಬರಲ್ ಪ್ರಜಾಪ್ರಬುತ್ವದ ಸೂಚ್ಯಂಕವು 50-60ರ ದಶಕಗಳಲ್ಲಿ 0.55 ಮಟ್ಟದಲ್ಲಿತ್ತು. ಆದರೆ 1977ರ ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ 0.28 ಮಟ್ಟಕ್ಕೆ ಕುಸಿಯಿತು. ಮರಳಿ 1990-2001ರ ಅವದಿಯಲ್ಲಿ 0.60 ಸೂಚ್ಯಂಕಕ್ಕೆ ಏರಿಕೆ ಕಂಡಿತು. ಆದರೆ 2107ರ ಹೊತ್ತಿಗೆ ಮರಳಿ 0.40 ಸೂಚ್ಯಂಕಕ್ಕೆ ಕುಸಿದಿದೆ. 2020ರ ವರೆಗೆ ಬಿಜೆಪಿಯ ಇದೇ ದಮನಕಾರಿ ದೋರಣೆ, ನೀತಿಗಳು ಮುಂದುವರೆದರೆ ಈ ಸೂಚ್ಯಂಕವು 0.20 ಮಟ್ಟಕ್ಕೆ ಕುಸಿಯುತ್ತದೆ. ಅಬಿವ್ಯಕ್ತಿ ಸ್ವಾತಂತ್ರ್ಯದ ಸೂಚ್ಯಂಕವು 2004ರಲ್ಲಿ 0.85 ಮಟ್ಟದಲ್ಲಿದ್ದರೆ 2017ರಲ್ಲಿ ಅದು 0.40 ಮಟ್ಟಕ್ಕೆ ಕುಸಿದಿದೆ. ಇದೇ ಆಡಳಿತ ಮುಂದುವರೆದರೆ 2020ರಲ್ಲಿ ಈ ಸೂಚ್ಯಂಕವು 0.2 ಮಟ್ಟಕ್ಕೆ  ಕುಸಿಯುತ್ತದೆ. 2004ರಲ್ಲಿ ದಾರ್ಮಿಕ ಸ್ವಾತಂತ್ರ್ಯದ ಸೂಚ್ಯಂಕವು 0.8 ಮಟ್ಟದಲ್ಲಿದ್ದರೆ 2017ಕ್ಕೆ 0.55 ಕ್ರಮಾಂಕಕ್ಕೆ ಕುಸಿದಿದೆ. ದಾರ್ಮಿಕ ಸಂಘಟನೆಗಳ ಪ್ರಾತಿನಿದ್ಯವನ್ನ ಕಾಪಾಡುವ ನಿಟ್ಟಿನಲ್ಲಿ 2004ರಲ್ಲಿ ಸೂಚ್ಯಂಕವು 0.9 ಮಟ್ಟದಲ್ಲಿದ್ದರೆ 2017ರ ಮೋದಿ ಆಡಳಿತದಲ್ಲಿ 0.65 ಸೂಚ್ಯಂಕಕ್ಕೆ ಕುಸಿದಿದೆ. ಈ ಎಲ್ಲ ಸಮೀಕ್ಷೆಗಳು ಕಳೆದ ಹತ್ತು ವರ್ಶಗಳಲ್ಲಿ ಪ್ರಜಾಪ್ರಬುತ್ವವು ಹಂತ ಹಂತವಾಗಿ ತನ್ನ ಆಸ್ತಿತ್ವವನ್ನ ಕಳೆದುಕೊಳ್ಳುತ್ತ ಬಂದಿರುವುದನ್ನ ಸೂಚಿಸುತ್ತವೆ. ಹಾಗಿದ್ದಲ್ಲಿ ಚುನಾವಣೆಯ ಸಂದರ್ಬದಲ್ಲಿ ಪ್ರಜೆಗಳು ತಮ್ಮ ಮತದಾನದ ಅಸ್ತ್ರವನ್ನ ಬಳಸಿ ದಮನಕಾರಿ ಸರಕಾರಕ್ಕೆ ಶಿಕ್ಷೆ ವಿದಿಸಬಲ್ಲರೆ? ಇದೆ ಇಂದಿನ ಅತ್ಯಂತ ಸಂಕೀರ್ಣವಾದ, ಬಿಕ್ಕಟ್ಟಿನ ಅಂಶವಾಗಿದೆ.
2002ರಲ್ಲಿ ಮುಸ್ಲಿಮರ ಹತ್ಯೆಯನ್ನ ಸಮರ್ಥಿಸಿಕೊಂಡ ಮನಸ್ಸುಗಳ ಸಂಖ್ಯೆ ಹದಿನೈದು ವರ್ಶಗಳ ನಂತರ ಹತ್ತು ಪಟ್ಟು ಹೆಚ್ಚಿದೆ. ಇಂದು ಆ ಮನಸ್ಸುಗಳು ಮೋದಿಯ ಪುನರಾಯ್ಕೆ ಬಯಸುತ್ತಿವೆ ಮತ್ತು ಮೋದಿಯ ಪರವಾಗಿ ತಳಸಮುದಾಯಗಳನ್ನು ಪ್ರಬಾವಗೊಳಿಸುತ್ತಿವೆ. ಇದರಲ್ಲಿ ಯಶಸ್ಸು ಗಳಿಸಿವೆಯೆ ಎಂಬುದನ್ನ ಪಲಿತಾಂಶಗಳು ಮಾತ್ರ ಹೇಳಬಲ್ಲವು. ಮಾದ್ಯಮಗಳ ವರದಿಗಳನ್ನು ನಂಬುವುದಾದರೆ ಪ್ರತಿ ಹತ್ತು ಜನರಲ್ಲಿ 8 ಜನರು ಮೋದಿ ಕಾರಣಕ್ಕೆ ದೇಶದ ಬದ್ರತೆ ಉಳಿದುಕೊಂಡಿದೆ ಎಂದು ನಂಬಿದ್ದಾರೆ. ನಂತರ ಮಾರ್ಚ 2019ರಲ್ಲಿ ನಡೆಸಿದ ಚುನಾವಣಪೂರ್ವ ಸಮೀಕ್ಷೆಗಳಲ್ಲಿಯೂ ಶೇಕಡಾ 10% ಪ್ರಮಾಣದ ಜನಸಂಖ್ಯೆ ಪುಲ್ವಾಮ ದುರಂತ ಮತ್ತು ನಂತರದ ಬಾಲಾಕೋಟ್ ದಾಳಿ ಚುನಾವಣೆಯಲ್ಲಿ ಮುಖ್ಯ ವಿಶಯ ಎಂದು ಅಬಿಪ್ರಾಯಪಟ್ಟಿದ್ದಾರೆ. ಶೇಕಡಾ 47% ಪ್ರಮಾಣದ ಜನತೆ ಮೋದಿಯ ಪುನರಾಯ್ಕೆ ಬಯಸಿದ್ದಾರೆ. ಈ ಸಮೀಕ್ಷೆಯ ಸತ್ಯಾಸತ್ಯತೆ ಮತ್ತು ವಿಶ್ವಾಸರ್ಹತೆಯನ್ನ ಖಚಿತಪಡಿಸಲು ಸಾದ್ಯವಿಲ್ಲ. ಕಳೆದ ಐದು ವರ್ಶಗಳಲ್ಲಿ ಗರಿಶ್ಟ ಮಟ್ಟದ ನಿರುದ್ಯೋಗ (ಶೇಕಡಾ 7%), ಅಸಮಾನ ಆದಾಯ ಅನುಪಾತ, ಅಸುಂತುಶ್ಟ ಮನಸ್ಥಿತಿಯುಳ್ಳ ದೇಶ, ಗಡಿಯಲ್ಲಿ ಪದೆ ಪದೆ ಕದನ ವಿರಾಮದ ಉಲ್ಲಂಘನೆ, ಗರಿಶ್ಟ ಮಟ್ಟದಲ್ಲಿ ಸೈನಿಕರ ಹತ್ಯೆ, ಗರಿಶ್ಟ ಮಟ್ಟದಲ್ಲಿ ಉಗ್ರವಾದದ ಸೆಳೆತಕ್ಕೆ ಒಳಗಾಗುತ್ತಿರುವ ಕಾಶ್ಮೀರಿ ಯುವಕರು, ಗರಿಶ್ಟ ಮಟ್ಟದ ದೊಂಬಿ ಹತ್ಯೆಗಳು, ಕುಸಿದ ಉತ್ಪಾದನೆ, ಕೃಶಿ ಬಿಕ್ಕಟ್ಟು, ಮತಾಂದತೆ, ದಲಿತರ ಮೇಲಿನ ದೌರ್ಜನ್ಯ, ರಫಲ್ ಹಗರಣ ಹೀಗೆ ಇನ್ನೂ ಅನೇಕ ವಿಫಲತೆಗಳ ಪಟ್ಟಿಯೆ ಇದೆ. ಆದರೆ ತಮ್ಮ ಬದುಕಿಗೆ ನೇರವಾಗಿ ಸಂಬಂದಿಸಿದ ಈ ಸಂಗತಿಗಳು ಜನರಿಗೆ ಏತಕ್ಕೆ ಮುಖ್ಯವಾಗುತ್ತಿಲ್ಲ? ಜನರ ಬದುಕಿನ ಈ ಸಮಸ್ಯೆಗಳು ಯಾಕೆ ಪ್ರಮುಖ ಚರ್ಚೆಯ ವಿಶಯವಾಗುತ್ತಿಲ್ಲ?  ಉದ್ಯೋಗ, ಬಡನಕ್ಕೆ ಸಂಬಂದಿಸಿದ ವಾಸ್ತವಾದ, ವೈಜ್ಞಾನಿಕ ದತ್ತಾಂಶಗಳನ್ನೆ ತನ್ನ ಅನುಕೂಲಕ್ಕೆ ತಕ್ರಕಂತೆ ತಿರುಚಿದ ಮೋದಿ ಸರಕಾರದ ವಿರುದ್ದ ಸಾಮಾಜಿಕವಾಗಿ ಸಣ್ಣ ಪ್ರತಿರೋದವೂ ಹುಟ್ಟಲಿಲ್ಲವೇಕೆ? ಇದು ಪ್ರತಿಯೊಬ್ಬ ಪ್ರಜ್ಞಾವಂತರನ್ನ ಕಾಡುತ್ತಿದೆ. ಮೋದಿ-ಆರೆಸ್ಸಸ್ ಬಯಸಿದಂತೆ ಬಾರತದ ಜನತೆ ಗುಜರಾತ್ ಜನರ ಮನಸ್ಥಿತಿಯತ್ತ ವಾಲಿದ್ದಾರೆ ಎಂದು ಇದು ಸಾಬೀತುಪಡಿಸುತ್ತದೆಯೆ? ಮೌಂಕ್ ಹೇಳಿದಂತೆ ಜನರು ವರ್ಸಸ್ ಪ್ರಜಾಪ್ರಬುತ್ವ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆಯೆ? ಕಳೆದ ಎಪ್ಪತ್ತು ವರ್ಶಗಳಲ್ಲಿ ಅತ್ಯಂತ ಜತನದಿಂದ, ಜವಬ್ದಾರಿಯಿಂದ ಕಟ್ಟಿದ ಪ್ರಜಾಪ್ರಬುತ್ವವನ್ನೆ ದುರ್ಬಲಗೊಳಿಸುತ್ತಿರುವ ಈಗಿನ ಚುನಾವಣ ವಿದ್ಯಾಮಾನಗಳು ಬವಿಶ್ಯದಲ್ಲಿ ಅರಾಜಕತೆ, ಫ್ಯಾಸಿಸಂ ಭಾರತದ ಮುನ್ಸೂಚನೆಯತಿಂವೆಯೆ? ಇಲ್ಲಿ ಮೋದಿ ಗೆದ್ದರೂ ಅಥವಾ ಸೋತರೂ ಗಮನಾರ್ಹ ಬದಲಾವಣೆಗಳು ಸದ್ಯಕ್ಕಂತೂ ಕಶ್ಟ ಎಂಬಂತೆ ಬೇಜವಬ್ದಾರಿಯಿಂದ ವರ್ತಿಸುತ್ತಿರುವ ವಿರೋದಪಕ್ಷಗಳು ಜನತೆಯಲ್ಲಿ ಸಿನಿಕತನ. ನಿರಾಶವಾದ ಮೂಡಿಸುತ್ತಿವೆಯೆ? ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಕಳೆದ ಕೆಲ ತಿಂಗಳುಗಳ ಹಿಂದೆ ಮೋದಿ ಸರಕಾರ “ಪೌರತ್ವ (ತಿದ್ದುಪಡಿ) ಮಸೂದೆ 2019”(ಎನ್‍ಆರ್‍ಸಿ)  ಅನ್ನು ಜಾರಿಗೆ ತರಲು ಹೊರಟಾಗ ಇಡೀ ಈಶಾನ್ಯ ರಾಜ್ಯಗಳಲ್ಲಿ ವಿರೋಧ ಬುಗಿಲೆದ್ದಿತು. ಅದರಲ್ಲೂ ಅಸ್ಸಾಂ ರಾಜ್ಯವು ಬಿಜೆಪಿ ಪಕ್ಷದ ಈ ಒಡೆದು ಆಳುವ ನೀತಿ ಮತ್ತು ಮತೀಯವಾದದ ಮೂಸದೆಯ ವಿರುದ್ದ ಹೋರಾಟವನ್ನೆ ಪ್ರಾರಂಬಿಸಿತು. ಅಸ್ಸಾಂ ಗಣ ಪರಿಶದ್ ಪಕ್ಸವು ಬಿಜೆಪಿ ಮೈತ್ರಿಯಿಂದ ಹೊರಬಂದಿತ್ತು. ಆದರೆ ಚುನಾವಣಾ ಘೋಶಿಸಿದ ನಂತರ ಇಡೀ ಚಿತ್ರಣವೆ ಬದಲಾಗಿದೆ. ಮತ್ತೆ ಬಿಜೆಪಿ ಹಾಗೂ ಎಜಿಪಿ ಮೈತ್ರಿ ಮಾಡಿಕೊಂಡಿವೆ. ಸಮೀಕ್ಷೆಗಳು ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ ಗರಿಶ್ಟ ಕ್ಷೇತ್ರಗಳನ್ನ ಗೆಲ್ಲಲಿದೆ ಎಂದು ಹೇಳುತ್ತಿವೆ. ಯಾಕೆ ಅಸ್ಸಾಂ ಜನತೆ ಮರಳಿ ಮರಳಿ ತಮ್ಮನ್ನ ದಮನ ಮಾಡುವವರನ್ನೆ ಅರಿಸುತ್ತಿದ್ದಾರೆ? ಇದು ದೇಶದ್ಯಾಂತ ಕಂಡುಬರುತ್ತಿರುವ ವಿದ್ಯಾಮಾನವೆನ್ನಬಹುದಾಗಿದೆ. ಇಲ್ಲಿನ ಸಬಲ್ಟ್ರಾನ್ ಅಸಹಾಯಕತೆ, ಆತಂಕ, ಅವಜ್ಞೆಯಿಂದ ತನ್ನ ಶೋಷಕನನ್ನೆ ಬೆಂಬಲಿಸುತ್ತಿದ್ದಾನೆ (ಈ ಅನುಮಾನಗಳು ಮತ್ತು ವಿಶ್ಲೇಶಣೆಗಳು ಮಾದ್ಯಮದ ಸಮೀಕ್ಷೆ ಮತ್ತು ವೈಯುಕ್ತಿಕ ಅನುಬವದಿಂದ ಮೂಡಿವೆ. ಇದು ಅರ್ದಸತ್ಯ ಮಾತ್ರ, ನಿಜದಲ್ಲಿ ಜನತೆಯ ಲೆಕ್ಕಾಚಾರಗಳೆ ಈ ಪ್ರಬುತ್ವಕ್ಕೆ ಪಾಠ ಕಲಿಸುವ ದಿಕ್ಕಿನಲ್ಲಿರಬಹುದು)
ಪ್ರಜೆಗಳು ಒಟ್ಟಾರೆ ರಾಜಕಾರಣದ ಬಗ್ಗೆ ಬ್ರಮನಿರಸನಗೊಂಡಿದ್ದಾರೆ. ಆವರು ಕುಪಿತರಾಗಿದ್ದಾರೆ, ಆಕ್ರೋಶಗೊಂಡಿದ್ದಾರೆ, ಅಸಹಾಯಕರಾಗಿದ್ದಾರೆ. ಆದರೆ ಆಡಳಿತ ವಿರೋದಿ ಮತ ಚಲಾಯಿಸುವ ಬದಲು ಮೇಲ್ನೋಟಕ್ಕೆ ಕಾಣುವಂತೆ ಮೋದಿಯ ಪುನರಾಯ್ಕೆ ಬಯಸುತ್ತಿದ್ದಾರೆ. ಒಂದು ಕಾಲದಲ್ಲಿ ಮಾದರಿಯಾಗಿದ್ದ ಬಾರತದ ಲಿಬರಲ್ ಪ್ರಜಾಪ್ರಬುತ್ವ ಇಂದು ರೋಗಗ್ರಸ್ಥವಾಗಿದೆ. ಮೋದಿ ಸರಕಾರದ ಜೀವವಿರೋದಿ, ದಮನಕಾರಿ ಆರ್ಥಿಕ, ಸಾಮಾಜಿಕ ನೀತಿಗಳು, ಆರೆಸ್ಸಸ್‍ನ ಮತೀಯವಾದದ ರಾಜಕಾರಣದ ಜೊತೆಗೆ ಕಾಂಗ್ರೆಸ್ ಒಳಗೊಂಡಂತೆ ವಿರೋದಪಕ್ಷಗಳ ಯಾವುದೆ ಕಾರ್ಯಯೋಜನೆಗಳಿಲ್ಲದ ಬೇಜವಬ್ದಾರಿ ವರ್ತನೆಗಳಿಂದಾಗಿ ಭಾರತದ ಪ್ರಜಾಪ್ರಬುತ್ವದ ಮೌಲ್ಯಗಳು ಕ್ಷೀಣಿಸುತ್ತಿವೆ. ಆದರೆ ಈ ಮೇಲಿನ ದೋಶಗಳು ಮತ್ತು ತಪ್ಪು ಹೆಜ್ಜೆಗಳನ್ನ ಸರಿಪಡಿಸುವುದರ ಬದಲಾಗಿ ಚುನಾವಣೆಯ ಗೆಲುವು-ಸೋಲುಗಳ ಮೂಲಕ ಪ್ರಜಾಪ್ರಬುತ್ವದ ಅರ್ಥವಂತಿಕೆಯನ್ನ ಮರುಸ್ಥಾಪಿಸಬಯಸುತ್ತಿದ್ದೇವೆ. ಜಾತಿ, ದರ್ಮದ, ಮತಾಂದತೆ, ಹಣದ ಥೈಲಿಯ ಆದಾರದ ಮೇಲೆ ನಿಮ್ಮ ಪ್ರತಿನಿದಿಯನ್ನ ಆಯ್ಕೆ ಮಾಡಿ ಎಂದು ಮತದಾರರ ಮೇಲೆ ಒತ್ತಡ ಹೇರಲಾಗುತ್ತಿದೆ ಮತ್ತು  ಇದೆ ಪ್ರಜಾಪ್ರಬುತ್ವದ ವೈಶಿಷ್ಟತೆ ಎಂದು ಬಣ್ಣಿಸಲಾಗುತ್ತಿದೆ.
ಮರೆಯುವ ಮುನ್ನ
ಅಂಬೇಡ್ಕರ್ ಅವರು ‘ಒಬ್ಬ ವ್ಯಕ್ತಿ, ಒಂದು ವೋಟು, ಒಂದು ಮೌಲ್ಯ’ ಪ್ರಜಾಪ್ರಬುತ್ವದ ತತ್ವ ಸಿದ್ದಾಂತವಾಗಿದೆ ಎಂದು ದೃಡವಾಗಿ ನಂಬಿದ್ದರು. ಪ್ರಜಾಪ್ರಬುತ್ವವು ವ್ಯಕ್ತಿಯೊಬ್ಬನ ಮನಸ್ಸಿನ ದೋರಣೆ ಮತ್ತು ಬದುಕಿನ ಫಿಲಾಸಫಿ. ಸಮಾನತೆ, ಸ್ವಾತಂತ್ರ್ಯ ಮತ್ತು ಬಂದುತ್ವವನ್ನು ಬೆಳೆಸಲು ಸಾಮಾಜಿಕ ಪ್ರಜಾಪ್ರಬುತ್ವವು ರೂಪುಗೊಳ್ಳಬೇಕು. ಸಮಾನತೆ ಇಲ್ಲದೆ ಕೇವಲ ಸ್ವಾತಂತ್ರ್ಯ ದೊರಕಿದರೆ ಅದು ಕೆಲ ವ್ಯಕ್ತಿಗಳ/ ವ್ಯಕ್ತಿಯ ಅದಿಕಾರಶಾಹಿ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಸಮಾನತೆ ಇದ್ದು ಸ್ವಾತಂತ್ರ್ಯವಿಲ್ಲದೆ ಹೋದರೆ ಅದು ವ್ಯಕ್ತಿಯೊಬ್ಬನ ಸ್ಪೂರ್ತಿ, ಬದ್ದತೆಯನ್ನು ಸಾಯಿಸುತ್ತದೆ. ಸಮಾನತೆ ಮತ್ತು ಸ್ವಾತಂತ್ರ್ಯ ಪ್ರಜಾಪ್ರಬುತ್ವದ ಆದಾರಸ್ತಂಬಗಳು, ಆದರೆ ಬಂದುತ್ವವಿಲ್ಲದೆ ಪ್ರಜಾಪ್ರಬುತ್ವ ಉಳಿಯುವುದಿಲ್ಲ, ಬಂದುತ್ವವು ಪ್ರಜಾಪ್ರಬುತ್ವದ ಬೇರು ಎಂದು ಅಂಬೇಡ್ಕರ್ ಅವರು ವಿವರಿಸಿದ್ದರು. ಮೋದಿ-ಆರೆಸ್ಸಸ್ ಸರಕಾರದ ದುರಾಡಳಿತ ಈ ಫ್ಯಾಸಿಸಂ ಪರಿಸ್ಥಿತಿಗೆ ಕಾರಣವಾದರೆ ಮತ್ತೊಂದೆಡೆ ಕಾಂಗ್ರೆಸ್ ಒಳಗೊಂಡಂತೆ ಇತರ ವಿರೋದಪಕ್ಷಗಳು ಪ್ರಜಾಪ್ರಬುತ್ವದ ಕಾವಲುಗಾರರಂತೆ ತಮ್ಮ ಜವಬ್ದಾರಿ ನಿರ್ವಹಿಸಲು ಸೋತಿವೆ. ಆದರೆ ದುರಂತವೆಂದರೆ ಈ ವಿರೋದ ಪಕ್ಷಗಳು ಫ್ಯಾಸಿಸಂ ಆಡಳಿತದ ವಿರುದ್ದ ನಮ್ಮ ಅನಿವಾರ್ಯ ಆಯ್ಕೆಗಳೂ ಆಗಿವೆ. ಈ ಎಲ್ಲ ಹಿನ್ನಲೆಯಲ್ಲಿ ಕೇವಲ ಚುನಾವಣಾ ರಾಜಕೀಯದ ಮೇಲೆ ಪ್ರಜಾಪ್ರಬುತ್ವವನ್ನ ಉಳಿಸಿಕೊಳ್ಳಲು ಹೆಣಗುವುದು ಬೆಟ್ಟಕ್ಕೆ ನೀರು ಹೊತ್ತಂತೆ. ಇಂದು ಈ ನಿಜದ ಸಮಾನತೆ, ಸ್ವಾತಂತ್ರ್ಯ, ಬಂದುತ್ವವನ್ನ ಕಟ್ಟಬೇಕಾದ ದೊಡ್ಡ ಜವಬ್ದಾರಿ ಇಲ್ಲಿನ ಜನಪರ ಚಳುವಳಿಗಳ ಹೆಗಲ ಮೇಲಿದೆ.
(ಓದುಗರಿಗೆ ಸೂಚನೆ: ಈ ಲೇಖನದ ನಿರೂಪಣೆ ಡಿ.ಎನ್ ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಖಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು ಫ್ರೂಫ್ ವ್ಯತ್ಯಾಸವೆಂದು ಬಗೆಯಬಾರದೆಂದು ಕೋರುತ್ತೇವೆ)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...

ತಿರುಪರನ್‌ಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸುವ ಆದೇಶ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್

ಮಧುರೈನ ತಿರುಪರನ್‌ಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠದ ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶವನ್ನು ವಿಭಾಗೀಯ ಪೀಠ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಜಿ. ಜಯಚಂದ್ರನ್...

ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಸೃಷ್ಟಿಸಿದ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಿವಂಗತ ಡಿ.ದೇವರಾಜ್ ಅರಸ್ ಅವರ ದಾಖಲೆಯನ್ನು (7 ವರ್ಷ 239 ದಿನಗಳು) ಸಿದ್ದರಾಮಯ್ಯ ಮುರಿದಿದ್ದಾರೆ.  ದೇವರಾಜು ಅರಸು ಮತ್ತು ಸಿದ್ದರಾಮಯ್ಯ ಅವರು ಸಾಮಾಜಿಕ...

ಅಜ್ಮೀರ್ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ತಡೆಯುವಂತೆ ಅರ್ಜಿ : ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಉರೂಸ್ ಪ್ರಯುಕ್ತ ಅಜ್ಮೀರ್‌ನ ಸೂಫಿ ಸಂತ ಖ್ವಾಜಾ ಮುಯೀನುದ್ದೀನ್ ಹಸನ್ ಚಿಸ್ತಿ ಅವರ ದರ್ಗಾಕ್ಕೆ ಪ್ರಧಾನಿ ಚಾದರ್ ಅರ್ಪಿಸುವುದನ್ನು ಮತ್ತು ದರ್ಗಾಕ್ಕೆ ಸರ್ಕಾರದ ವತಿಯಿಂದ ನೀಡಲಾಗುವ ಗೌರವಗಳನ್ನು ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು...