2019 ರಲ್ಲಿ ಯುನೈಟೆಡ್ ನೇಷನ್ಸ್ ನಡೆಸಿದ ಸಂತೋಷಬರಿತ ದೇಶಗಳ ಸಮೀಕ್ಷೆಯಲ್ಲಿ ಒಟ್ಟು 156 ಒಕ್ಕೂಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನಕ್ಕೆ ಕುಸಿದಿತ್ತು. ಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲದೇಶ, ನೇಪಾಳ ಇನ್ನಿತ್ಯಾದಿ ದೇಶಗಳಿಗಿಂತಲೂ ಕೆಳಗಿನ ಸ್ಥಾನ ಪಡೆದು ಅವಮಾನ ಅನುಭವಿಸಿತ್ತು. ಯಾವುದೇ ಒಂದು ದೇಶಕ್ಕೆ ಅಲ್ಲಿರುವ ಜನರ ನೆಮ್ಮದಿ ಹಾಗೂ ಸರ್ಕಾರದ ಆಡಳಿತವನ್ನಾಧರಿಸಿ ನಡೆಯುವ ಈ ಸಮೀಕ್ಷೆ ಬಹಳ ಮುಖ್ಯವಾಗಿರುತ್ತದೆ.
ಇದೀಗ ಅಷ್ಟೇ ಮುಖ್ಯವಾದ ದೇಶದ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿಯೂ ಭಾರತ ಕುಸಿತ ಕಂಡಿದೆ. ನಾಗರೀಕ ಸ್ವಾತಂತ್ರ್ಯಕ್ಕೆ ಅಡ್ಡಿ ಹಿನ್ನಲೆಯಲ್ಲಿ ಭಾರತ ಹತ್ತು ಸ್ಥಾನಗಳಿಂದ ಕೆಳೆದುಕೊಂಡು 51ನೇ ಸ್ಥಾನಕ್ಕೆ ಕುಸಿದಿದೆ ಎಂದು ಇಐಯು (ಎಕಾನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 2018ರಲ್ಲಿ 7.23 ಅಂಕಗಳನ್ನು ಗಳಿಸಿದ್ದ ಭಾರತ ಈ ಬಾರಿ 6.90 ಅಂಕವನ್ನು ಪಡೆದಿದೆ. ಭಾರತದ ಮಟ್ಟಿಗೆ ಇದು ಅತ್ಯಂತ ಕಡಿಮೆ ಅಂಕವಾಗಿದ್ದು ಐತಿಹಾಸಿಕವಾದ ಇಳಿಕೆ ಕಂಡಿದೆ ಎಂದು ವರದಿಗಳು ತಿಳಿಸಿವೆ. ಇತ್ತೇಚೆಗೆ ಭಾರತದಲ್ಲಿ ನಾಗರೀಕ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಗಳ ಪರಿಣಾಮವಾಗಿ ಈ ಕುಸಿತದ ಪ್ರಾಥಮಿಕ ಕಾರಣ ಎಂದು ವರದಿಗಳು ತಿಳಿಸಿವೆ.
ಮುಖ್ಯವಾದ 5 ಮಾನದಂಡಗಳ ಆಧಾರದ ಮೇಲೆ ಸೂಚ್ಯಂಕವು ನಿರ್ಧಾರಗೊಂಡಿದೆ, ಅವುಗಳು. 1. ಚುನಾವಣಾ ಪ್ರಕ್ರಿಯೆ ಹಾಗೂ ಬಹುತ್ವ 2. ಸರ್ಕಾರದ ಆಡಳಿತ ವೈಖರಿ, 3. ರಾಜಕೀಯ ಭಾಗವಹಿಸುವಿಕೆ, 4. ರಾಜಕೀಯ ಸಂಸ್ಕೃತಿ ಹಾಗೂ 5. ನಾಗರೀಕ ಸ್ವಾತಂತ್ರ್ಯ. ಸೂಚ್ಯಾಂಕದ ಅಂಕಗಳ ವಿಭಾಗದ ಅನುಸಾರ ಭಾರತದ 6.90 ಅಂಕವು ‘ದೋಷಪೂರಿತ ಪ್ರಜಾಪ್ರಭುತ್ವ’ದ ವಿಭಾಗದಲ್ಲಿ ದಾಖಲಾಗುತ್ತದೆ.
“ಕಳೆದ ವರ್ಷಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಅದರಲ್ಲೂ ವಿಶೇಷವಾಗಿ ವಾಯುವ್ಯ ಭಾಗದ ಕ್ಸಿನ್ಜಿಯಾಂಗ್ ನಲ್ಲಿ ನಡೆದ ತಾರತಮ್ಯ ತೀವ್ರಗೊಂಡಿದೆ ಹಾಗೂ ಸಾಮಾನ್ಯ ಜನರ ಮೇಲೆ ಡಿಜಿಟಲ್ ಕಣ್ಗಾವಲು ಕೂಡ 2019 ರಲ್ಲಿ ವೇಗವಾಗಿ ಮುಂದುವರೆದಿದೆ. ಇದು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಮತ್ತಷ್ಟು ನಿರ್ಬಂಧವನ್ನು ಹೇರುತ್ತದೆ” ಎಂದು ವರದಿ ತಿಳಿಸಿದೆ. ಇದರಿಂದಾಗಿ ಚೀನಾ ಕೇವಲ 2.26 ಅಂಕ ಪಡೆದು 153ನೇ ಸ್ಥಾನಕ್ಕೆ ಕುಸಿದಿದೆ.
ನೆರೆಯ ಪಾಕಿಸ್ತಾನ 108ನೇ ಸ್ಥಾನ, ಶ್ರೀಲಂಕಾ 69ನೇ ಸ್ಥಾನ ಹಾಗೂ ಬಾಂಗ್ಲದೇಶ 80ನೇ ಸ್ಥಾನ ಪಡೆದಿದೆ.
ಸಂತೋಷಭರಿತ ಸೂಚ್ಯಾಂಕದಲ್ಲಿ (ಹ್ಯಾಪಿನೆಸ್ ಇಂಡೆಕ್ಸ್) ಉನ್ನತ ಸ್ಥಾನ ಪಡೆದ ದೇಶಗಳೇ ಪ್ರಜಾಪ್ರಭುತ್ವ ಸೂಚ್ಯಾಂಕದ ಪಟ್ಟಿಯಲ್ಲಿಯೂ ಉನ್ನತ ಸ್ಥಾನಗಳು ಪಡೆದಿವೆ. ಕ್ರಮವಾಗಿ ನಾರ್ವೇ, ಐಸ್ಲ್ಯಾಂಡ್, ಸ್ವೀಡನ್, ನ್ಯೂಜಿಲ್ಯಾಂಡ್, ಫಿನ್ಲ್ಯಾಂಡ್, ಐರ್ಲ್ಯಾಂಡ್, ಡೆನ್ಮಾರ್ಕ್, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲ್ಯಾಂಡ್ ಟಾಪ್ ಟೆನ್ ದೇಶಗಳಾಗಿವೆ. ದಕ್ಷಿಣ ಕೋರಿಯಾ 167ನೇ ಸ್ಥಾನ ಪಡೆದು ಕೊನೆಯಲ್ಲಿದೆ



ಇದಕ್ಕೆಲ್ಲ ಕಾರಣರಾದವರು ಮೋದಿಯ ಮೇಕ್ ಇನ್ ಇಂಡಿಯಾ ಹೋಗಿ
ಹಳ್ಳಿ ಭಾಷೆಯಲ್ಲಿ ಹೇಳಿದರೆ ಮಕಾಡೆ ಮಲಗುವ ಇಂಡಿಯಾ ಆಗುತ್ತಿದೆ
ಸರ್ವ ಜನಾಂಗವನ್ನು ಒಂದೇ ಮಾರ್ಗವಾಗಿ ನೋಡದೆ ಜಾತಿ ಬೀಜ ಎನ್ನುವುದನ್ನು ಬಿತ್ತನೆ ಮಾಡಿ
ಕ್ರೂರ ಕಠೋರವಾದ ಆಡಳಿತಗಾರರು ಎಂದರೆ ಹಿಂದುತ್ವದಲ್ಲಿ ಹಿಂದುತ್ವ ಹೆಸರೇಳಿಕೊಂಡು ಭಾರತೀಯರ ಹಕ್ಕುಗಳನ್ನು ಕಗ್ಗೊಲೆ ಮಾಡಲು ಹೊರಟಿರುವ ಅತ್ಯಂತ ದುರ್ದೈವ ಮೋದಿ ಸರ್ಕಾರವಿದೆ ಎಂದರೆ ತಪ್ಪಾಗಲಾರದು