Homeಮುಖಪುಟಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಕುಸಿತ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಖಭಂಗ!

ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿ ಕುಸಿತ: ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಖಭಂಗ!

- Advertisement -
- Advertisement -

2019 ರಲ್ಲಿ  ಯುನೈಟೆಡ್ ನೇಷನ್ಸ್ ನಡೆಸಿದ ಸಂತೋಷಬರಿತ ದೇಶಗಳ ಸಮೀಕ್ಷೆಯಲ್ಲಿ ಒಟ್ಟು 156 ಒಕ್ಕೂಟ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 140ನೇ ಸ್ಥಾನಕ್ಕೆ ಕುಸಿದಿತ್ತು. ಪಕ್ಕದ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲದೇಶ, ನೇಪಾಳ ಇನ್ನಿತ್ಯಾದಿ ದೇಶಗಳಿಗಿಂತಲೂ ಕೆಳಗಿನ ಸ್ಥಾನ ಪಡೆದು ಅವಮಾನ ಅನುಭವಿಸಿತ್ತು. ಯಾವುದೇ ಒಂದು ದೇಶಕ್ಕೆ ಅಲ್ಲಿರುವ ಜನರ ನೆಮ್ಮದಿ ಹಾಗೂ ಸರ್ಕಾರದ ಆಡಳಿತವನ್ನಾಧರಿಸಿ ನಡೆಯುವ ಈ ಸಮೀಕ್ಷೆ ಬಹಳ ಮುಖ್ಯವಾಗಿರುತ್ತದೆ.

ಇದೀಗ ಅಷ್ಟೇ ಮುಖ್ಯವಾದ ದೇಶದ ಪ್ರಜಾಪ್ರಭುತ್ವದ ಸೂಚ್ಯಂಕದಲ್ಲಿಯೂ ಭಾರತ ಕುಸಿತ ಕಂಡಿದೆ. ನಾಗರೀಕ ಸ್ವಾತಂತ್ರ್ಯಕ್ಕೆ ಅಡ್ಡಿ ಹಿನ್ನಲೆಯಲ್ಲಿ ಭಾರತ ಹತ್ತು ಸ್ಥಾನಗಳಿಂದ ಕೆಳೆದುಕೊಂಡು 51ನೇ ಸ್ಥಾನಕ್ಕೆ ಕುಸಿದಿದೆ ಎಂದು ಇಐಯು (ಎಕಾನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್) ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. 2018ರಲ್ಲಿ 7.23 ಅಂಕಗಳನ್ನು ಗಳಿಸಿದ್ದ ಭಾರತ ಈ ಬಾರಿ 6.90 ಅಂಕವನ್ನು ಪಡೆದಿದೆ. ಭಾರತದ ಮಟ್ಟಿಗೆ ಇದು ಅತ್ಯಂತ ಕಡಿಮೆ ಅಂಕವಾಗಿದ್ದು ಐತಿಹಾಸಿಕವಾದ ಇಳಿಕೆ ಕಂಡಿದೆ ಎಂದು ವರದಿಗಳು ತಿಳಿಸಿವೆ. ಇತ್ತೇಚೆಗೆ ಭಾರತದಲ್ಲಿ ನಾಗರೀಕ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿಗಳ ಪರಿಣಾಮವಾಗಿ ಈ ಕುಸಿತದ ಪ್ರಾಥಮಿಕ ಕಾರಣ ಎಂದು ವರದಿಗಳು ತಿಳಿಸಿವೆ.

ಮುಖ್ಯವಾದ 5 ಮಾನದಂಡಗಳ ಆಧಾರದ ಮೇಲೆ ಸೂಚ್ಯಂಕವು ನಿರ್ಧಾರಗೊಂಡಿದೆ, ಅವುಗಳು. 1. ಚುನಾವಣಾ ಪ್ರಕ್ರಿಯೆ ಹಾಗೂ ಬಹುತ್ವ 2. ಸರ್ಕಾರದ ಆಡಳಿತ ವೈಖರಿ, 3. ರಾಜಕೀಯ ಭಾಗವಹಿಸುವಿಕೆ, 4. ರಾಜಕೀಯ ಸಂಸ್ಕೃತಿ ಹಾಗೂ 5. ನಾಗರೀಕ ಸ್ವಾತಂತ್ರ್ಯ. ಸೂಚ್ಯಾಂಕದ ಅಂಕಗಳ ವಿಭಾಗದ ಅನುಸಾರ ಭಾರತದ 6.90 ಅಂಕವು ‘ದೋಷಪೂರಿತ ಪ್ರಜಾಪ್ರಭುತ್ವ’ದ ವಿಭಾಗದಲ್ಲಿ ದಾಖಲಾಗುತ್ತದೆ.

“ಕಳೆದ ವರ್ಷಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಅದರಲ್ಲೂ ವಿಶೇಷವಾಗಿ ವಾಯುವ್ಯ ಭಾಗದ ಕ್ಸಿನ್ಜಿಯಾಂಗ್ ನಲ್ಲಿ ನಡೆದ ತಾರತಮ್ಯ ತೀವ್ರಗೊಂಡಿದೆ ಹಾಗೂ ಸಾಮಾನ್ಯ ಜನರ ಮೇಲೆ ಡಿಜಿಟಲ್ ಕಣ್ಗಾವಲು ಕೂಡ 2019 ರಲ್ಲಿ ವೇಗವಾಗಿ ಮುಂದುವರೆದಿದೆ. ಇದು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಮತ್ತಷ್ಟು ನಿರ್ಬಂಧವನ್ನು ಹೇರುತ್ತದೆ” ಎಂದು ವರದಿ ತಿಳಿಸಿದೆ. ಇದರಿಂದಾಗಿ ಚೀನಾ ಕೇವಲ 2.26 ಅಂಕ ಪಡೆದು 153ನೇ ಸ್ಥಾನಕ್ಕೆ ಕುಸಿದಿದೆ.

ನೆರೆಯ ಪಾಕಿಸ್ತಾನ 108ನೇ ಸ್ಥಾನ, ಶ್ರೀಲಂಕಾ 69ನೇ ಸ್ಥಾನ ಹಾಗೂ ಬಾಂಗ್ಲದೇಶ 80ನೇ ಸ್ಥಾನ ಪಡೆದಿದೆ.

ಸಂತೋಷಭರಿತ ಸೂಚ್ಯಾಂಕದಲ್ಲಿ (ಹ್ಯಾಪಿನೆಸ್ ಇಂಡೆಕ್ಸ್) ಉನ್ನತ ಸ್ಥಾನ ಪಡೆದ ದೇಶಗಳೇ ಪ್ರಜಾಪ್ರಭುತ್ವ ಸೂಚ್ಯಾಂಕದ ಪಟ್ಟಿಯಲ್ಲಿಯೂ ಉನ್ನತ ಸ್ಥಾನಗಳು ಪಡೆದಿವೆ. ಕ್ರಮವಾಗಿ ನಾರ್ವೇ, ಐಸ್ಲ್ಯಾಂಡ್, ಸ್ವೀಡನ್, ನ್ಯೂಜಿಲ್ಯಾಂಡ್, ಫಿನ್ಲ್ಯಾಂಡ್, ಐರ್ಲ್ಯಾಂಡ್, ಡೆನ್ಮಾರ್ಕ್, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲ್ಯಾಂಡ್ ಟಾಪ್ ಟೆನ್ ದೇಶಗಳಾಗಿವೆ. ದಕ್ಷಿಣ ಕೋರಿಯಾ 167ನೇ ಸ್ಥಾನ ಪಡೆದು ಕೊನೆಯಲ್ಲಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಇದಕ್ಕೆಲ್ಲ ಕಾರಣರಾದವರು ಮೋದಿಯ ಮೇಕ್ ಇನ್ ಇಂಡಿಯಾ ಹೋಗಿ
    ಹಳ್ಳಿ ಭಾಷೆಯಲ್ಲಿ ಹೇಳಿದರೆ ಮಕಾಡೆ ಮಲಗುವ ಇಂಡಿಯಾ ಆಗುತ್ತಿದೆ
    ಸರ್ವ ಜನಾಂಗವನ್ನು ಒಂದೇ ಮಾರ್ಗವಾಗಿ ನೋಡದೆ ಜಾತಿ ಬೀಜ ಎನ್ನುವುದನ್ನು ಬಿತ್ತನೆ ಮಾಡಿ
    ಕ್ರೂರ ಕಠೋರವಾದ ಆಡಳಿತಗಾರರು ಎಂದರೆ ಹಿಂದುತ್ವದಲ್ಲಿ ಹಿಂದುತ್ವ ಹೆಸರೇಳಿಕೊಂಡು ಭಾರತೀಯರ ಹಕ್ಕುಗಳನ್ನು ಕಗ್ಗೊಲೆ ಮಾಡಲು ಹೊರಟಿರುವ ಅತ್ಯಂತ ದುರ್ದೈವ ಮೋದಿ ಸರ್ಕಾರವಿದೆ ಎಂದರೆ ತಪ್ಪಾಗಲಾರದು

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ರಾಜಧಾನಿ ಢಾಕಾದಲ್ಲಿ ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಶುಕ್ರವಾರ ಬೆಳಗಿನ ಜಾವ ಹಿಂಸಾಚಾರ ಭುಗಿಲೆದ್ದಿದೆ. ಹತ್ಯೆ ಯತ್ನದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ ಹಾದಿ, ಸಿಂಗಾಪುರದ ಆಸ್ಪತ್ರೆಯಲ್ಲಿ...

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರದಿಂದ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...