ಸ್ಥಳೀಯ ಕಾನೂನುಗಳನ್ನು ಪಾಲಿಸುವ ನೆಪದಲ್ಲಿ ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ರಾಜ್ಯದಲ್ಲಿ ಅಪಾರ್ಟ್‌ಮೆಂಟ್ ಸಹಕಾರಿ ಸಂಘವನ್ನು ರಚಿಸುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅಪಾರ್ಟ್‌ಮೆಂಟ್ ಸಹಕಾರಿ ಸಂಘ ಆರೋಪ ಮಾಡಿದೆ.
ಶನಿವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪರಶುರಾಮ್, ಸಹಕಾರಿ ಸಂಘಗಳನ್ನು ರಚಿಸಿಕೊಳ್ಳುವುದು ಪ್ರಜೆಗಳ ಮೂಲಭೂತ ಹಕ್ಕಾಗಿದೆ. ಈ ಹಕ್ಕಿನ ಅಡಿಯಲ್ಲಿ ಅಪಾರ್ಟ್‌ಮೆಂಟ್ ಸಮೂಹದ ನಿರ್ವಹಣೆಗಾಗಿ ಅಪಾರ್ಟ್‌ಮೆಂಟ್ ಮಾಲಕರು ನಗರದಲ್ಲಿ ಸುಮಾರು 50 ಅಪಾರ್ಟ್‌ಮೆಂಟ್ ಮಾಲಕರ ಕೋ-ಆಪರೇಟಿವ್ ಸೊಸೈಟಿಗಳನ್ನು ಕಾನೂನು ಬದ್ದವಾಗಿ ನೋಂದಾಯಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ, ಈ ಸಹಕಾರಿ ಸಂಘಗಳಿಗೆ ಅಪಾರ್ಟ್‌ಮೆಂಟ್ ಸಮೂಹದ ಮೂಲ ಭೂಮಿ, ಕಾಮನ್ ಸ್ಪೇಸ್ ಹಾಗೂ ಕಾಮನ್ ಅಮೆನಿಟಿಗಳನ್ನು ಹಸ್ತಾಂತರಿಸುವ ಅನಿವಾರ್ಯತೆ ಬಿಲ್ಡರ್‌ಗಳಿಗೆ ಉಂಟಾಗಿರುವುದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅಪಾರ್ಟ್‌ಮೆಂಟ್ ಮಾಲಕರ ಕೋ- ಆಪರೇಟಿವ್ ಸೊಸೈಟಿಗಳನ್ನು ಅಮಾನ್ಯ ಮಾಡುವ ಆದೇಶ ನೀಡಿದೆ. ಈ ಆದೇಶವು ಸಂವಿಧಾನದತ್ತ ಮೂಲಭೂತ ಹಕ್ಕಿಗೆ ಚ್ಯುತಿತರುವುದಷ್ಟೇ ಅಲ್ಲದೆ, ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಲ್ಡರ್‌ಗಳು ಅಪಾರ್ಟ್‌ಮೆಂಟ್ ಮಾಲಕರಿಗೆ ಭೂಮಿಯ ದಾಖಲೆಗಳನ್ನು ಸರಿಯಾಗಿ ಹಸ್ತಾಂತರಿಸದೇ, ಭೂಮಿಯನ್ನು ಉಳಿಸಿಕೊಳ್ಳಲು ಬಯಸುವ ಅನೇಕ ಮಾಲಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ರಾಜ್ಯ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಿ ಮಧ್ಯಮ ವರ್ಗದ ಜನರ ಹಕ್ಕನ್ನು ಕಾಪಾಡಬೇಕು. ಅಪಾರ್ಟ್‌ಮೆಂಟ್ ಭೂಮಿಗಳನ್ನು ಮಾಲಕರಲ್ಲದ ಬಿಲ್ಡರ್‌ಗಳು ಅಡವಿಡುವ ವ್ಯವಸ್ಥೆಯನ್ನು ನಿಲ್ಲಿಸಬೇಕು ಮತ್ತು ಭೂಮಿಯ ಮಾಲಕತ್ವದ ಹಕ್ಕನ್ನು ಅಪಾರ್ಟ್‌ಮೆಂಟ್ ಮಾಲಕರಿಗೆ ಉಳಿಸಿಕೊಡಬೇಕು ಎಂದು ಪರಶುರಾಮ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಪಾದ, ಖಜಾಂಚಿ ರಮ್ಯಾ ರಾವ್, ಕಾರ್ಯದರ್ಶಿ ವಿದ್ಯಾಧರ ದುರ್ಗೇಕರ್, ಗಂಗಾಧರ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚನ್ನರಾಯಪಟ್ಟಣ ರೈತ ಹೋರಾಟ ಬೆಂಬಲಿಸಿ ಸಾಹಿತಿ, ಚಿಂತಕರಿಂದ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ



In Many Cities, registrar doesn’t accept application for registering new society. Some officials say registration of co-op housing society has been cancelled due to societies do not follow the rules and officials from co-op housing society Registrar don’t want monitor the activities of a co-op housing society activities………