Homeಮುಖಪುಟರಾಹುಲ್‌ ಗಾಂಧಿ ವಿರುದ್ದ ಅವಹೇಳನಕಾರಿ ಪದ ಬಳಕೆ: ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ‘ಟೈಮ್ಸ್‌ ನೌ’...

ರಾಹುಲ್‌ ಗಾಂಧಿ ವಿರುದ್ದ ಅವಹೇಳನಕಾರಿ ಪದ ಬಳಕೆ: ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ‘ಟೈಮ್ಸ್‌ ನೌ’ ಪತ್ರಕರ್ತೆ

- Advertisement -
- Advertisement -

‘ಟೈಮ್ಸ್‌ ನೌ’ ಸುದ್ದಿ ವಾಹಿನಿ ಪತ್ರಕರ್ತೆ ನವಿಕಾ ಕುಮಾರ್ ಅವರು, ಮಂಗಳವಾರದಂದು ತಮ್ಮ ಚಾನೆಲ್‌ನಲ್ಲಿ ಪ್ಯಾನಲ್ ಡಿಬೇಟ್ ನಡೆಸುತ್ತಿದ್ದ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ದ ಅವಹೇಳಕಾರಿ ಪದಬಳಸಿದ್ದರು. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ.

ಪತ್ರಕರ್ತೆಯ ಭಾಷಾ ಬಳಕೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ವಿಡಿಯೊ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನವಿಕಾ ಅವರು ತಮ್ಮ ಭಾಷಾ ಬಳಕೆಯ ಬಗ್ಗೆ ಕ್ಷಮೆ ಕೇಳಬೇಕು ಮತ್ತು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತವಾಗಿದ್ದು, #KachraNavika ಹ್ಯಾಶ್ ಟ್ಯಾಗ್ ಟ್ರೆಂಡಿಗ್ ಆಗಿತ್ತು. ಜೊತೆಗೆ, ಟೈಮ್ಸ್‌ ನೌ ವಾಹಿನಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ವಾಹಿನಿಯ ಕಚೇರಿಯ ಹೊರಗೆ ಪ್ರತಿಭಟನೆ ಕೂಡಾ ನಡೆಸಿದ್ದಾರೆ.

ಇದನ್ನೂ ಓದಿ: ಮೋದಿ ಮುಂದೆಯೆ ಭಾರತೀಯ ಮಾಧ್ಯಮಗಳ ಬಗ್ಗೆ ಬಿಡೆನ್ ವ್ಯಂಗ್ಯ?

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ, ನವಿಕಾ ಕುಮಾರ್ ಅವರು ಸೆಪ್ಟೆಂಬರ್ 28 ರ ರಾತ್ರಿ ಪ್ಯಾನಲ್ ಡಿಬೇಟ್‌ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಅದರಲ್ಲಿಅವರು ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾ “ಬ್ಲಡಿ …” ಎಂಬ ಪದವನ್ನು ಬಳಸಿದ್ದರು.

ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೊಶ ವ್ಯಕ್ತವಾಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ #KachraNavika ಮತ್ತು #TimesNowApologiseNow ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಪ್ರತಿಭಟನೆ ಕೂಡಾ ದಾಖಲಾಗಿತ್ತು. ಇದು ಟ್ರೆಂಡ್ ಆಗುತ್ತಿದ್ದಂತೆ ನವಿಕಾ ಕುಮಾರ್‌ ಟೈಮ್ಸ್‌ ನೌ ಅಧೀಕೃತ ಟ್ವಿಟರ್‌ ಖಾತೆಯಿಂದ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಭಾರತ್ ಬಂದ್ ಕುರಿತು ವರದಿ; ಮಾಧ್ಯಮಗಳಿಗೆ ನೈತಿಕ ಜವಾಬ್ದಾರಿ ಇಲ್ಲವೇ?

“ನಿನ್ನೆಯ ನನ್ನ ಕಾರ್ಯಕ್ರಮದಲ್ಲಿ ನಾನೊಂದು ತಪ್ಪು ಮಾಡಿದ್ದು, ಅಸಂವಿಧಾನಿಕ ಪದವನ್ನು ಬಳಸಿದ್ದೇನೆ. ಅದಕ್ಕಾಗಿ ನಾನು ಕಾರ್ಯಕ್ರಮದ ಸಮಯದಲ್ಲೆ ಕ್ಷಮೆಯಾಚಿಸಿದ್ದೇನೆ ಮತ್ತು ಅದನ್ನು ನಾನು ಬಳಸಬಾರದಿತ್ತು. ನಾನು ಸಾವಿರಾರು ಆಂಕರಿಂಗ್ ಮಾಡಿದ್ದೇನೆ, ಆದರೆ ಈ ಹಿಂದೆ ಇಂತಹ ತಪ್ಪು ಮಾಡಿಲ್ಲ. ಆದರೆ ನಿನ್ನೆ ತಪ್ಪು ಆಗಿದೆ. ತಪ್ಪು ನಡೆದಿದೆ, ಆದರೆ ಅದು ಉದ್ದೇಶಪೂರ್ವಕವಲ್ಲ. ನಾನು ಬಳಸಿದ ಪದವು ರಾಜಕೀಯ ಸ್ಥಿತಿಯ ಬಗ್ಗೆ ಹೊರತು ಮತ್ತು ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಅಲ್ಲ. ನಡೆದಿರುವ ತಪ್ಪಿಗಾಗಿ ಕ್ಷಮೆ ಕೇಳುವುದು ಕೆಟ್ಟ ವಿಷಯವೇನಲ್ಲ, ಹಾಗಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ. ನನ್ನ ಉದ್ದೇಶ ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸುವುದಲ್ಲ. ಹಾಗಾಗಿ ನಾನು ಕ್ಷಮೆ ಯಾಚನೆ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

ನಿನ್ನೆ ರಾತ್ರಿ ಕೂಡ ನವಿಕಾ ಕುಮಾರ್ ಟ್ವಿಟ್ಟರ್‌ನಲ್ಲಿ ತಮ್ಮ ಭಾಷೆಗಳಿಗೆ ಕ್ಷಮೆ ಕೋರಿದ್ದರು.

ಇದನ್ನೂ ಓದಿ: ಸರ್ಕಾರದ ಮುಂದಿನ ಗುರಿ ಮಾಧ್ಯಮಗಳು, ನೀವು ಉಳಿಯಬೇಕಿದ್ದರೇ ನಮ್ಮ ಜೊತೆಯಾಗಿ: ರಾಕೇಶ್ ಟಿಕಾಯತ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...