Homeಕರ್ನಾಟಕಅಪ್ಪು ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರ್‌ಎಸ್‌ಎಸ್ ಕಾರ್ಯಕರ್ತೆ: ಕಿಡಿಕಾರಿದ ಕನ್ನಡಿಗರು

ಅಪ್ಪು ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರ್‌ಎಸ್‌ಎಸ್ ಕಾರ್ಯಕರ್ತೆ: ಕಿಡಿಕಾರಿದ ಕನ್ನಡಿಗರು

ಟ್ವಿಟರ್‌ನಲ್ಲಿ ನರೇಂದ್ರ ಮೋದಿಯವರು ಫಾಲೋ ಮಾಡುವ ಜ್ಯೋತಿ ಸುಪರ್ಣ ಟ್ವಿಟರ್‌ ಖಾತೆಯಿಂದ ರಾಜ್‌ಕುಮಾರ್ ಕುಟುಂಬವನ್ನು ಗುರಿಯಾಗಿಸಿಕೊಂಡು ಹಗುರವಾಗಿ ಮಾತನಾಡಲಾಗಿದೆ.

- Advertisement -
- Advertisement -

ತಮ್ಮ ಸರಳ ನಡೆ ನುಡಿಗಳ ಮೂಲಕ ಕರ್ನಾಟಕದ ಮನೆಮಾತಾಗಿದ್ದ ಪ್ರತಿಭಾನ್ವಿತ ನಟ ಪುನೀತ್‌ ರಾಜ್‌ಕುಮಾರ್‌ರವರು ನಮ್ಮನ್ನಗಲಿ ಒಂದು ವರ್ಷವಾಗಿದೆ. ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವ ಸೂಚಿಸಲಾಗಿದೆ. ಅಪ್ಪು ತಮ್ಮ ಪ್ರಕೃತಿ ಪ್ರೀತಿಯನ್ನು ದಾಖಲಿಸಿರುವ ‘ಗಂಧದಗುಡಿ’ ಸಾಕ್ಷ್ಯಚಿತ್ರವೂ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ. ಅವರ ಕುರಿತು ಯಾರಾದರೂ ಹಗುರವಾಗಿ ಮಾತನಾಡುವುದನ್ನು ಕನ್ನಡಿಗರು ಊಹಿಸುವುದೂ ಇಲ್ಲ. ಈ ಹೊತ್ತಿನಲ್ಲಿ ಜ್ಯೋತಿ ಸುಪರ್ಣ ಚಿಂಚೋಳಿ ಎಂಬ ಆರ್‌ಎಸ್‌ಎಸ್‌ ಕಾರ್ಯಕರ್ತೆಯೊಬ್ಬರು ಟ್ವಿಟರ್‌ನಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ರವರಿಗೆ ಅಪಮಾನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಟ್ವಿಟರ್‌ನಲ್ಲಿ ನರೇಂದ್ರ ಮೋದಿಯವರು ಫಾಲೋ ಮಾಡುವ ಜ್ಯೋತಿ ಸುಪರ್ಣ ಟ್ವಿಟರ್‌ ಖಾತೆಯಿಂದ ರಾಜ್‌ಕುಮಾರ್ ಕುಟುಂಬವನ್ನು ಗುರಿಯಾಗಿಸಿಕೊಂಡು ಹಗುರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವುದರ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ.

ಜ್ಯೋತಿ ಸುಪರ್ಣ ಚಿಂಚೋಳಿ

“ಕರ್ನಾಟಕದಲ್ಲಿ ರಾಜ್‌ಕುಮಾರ್‌ ವಂಶದ ಕುಡಿಗಳು ದೇವರುಗಳಾಗಿದ್ದಾರೆ. ಬಾಲಿವುಡ್‌ನಲ್ಲಿ ಕರಣ್ ಜೋಹರ್ ಇದ್ದಂತೆ. ಸ್ಯಾಂಡಲ್‌ವುಡ್‌ನಲ್ಲಿ ಯಾರಾದರೂ ಉಳಿದುಕೊಳ್ಳಬೇಕಿದ್ದರೆ ಅವರಿಗೆ ಸಲಾಂ ಹೊಡೆಯಲೇಬೇಕಿದೆ. ರಿಷಬ್ ಶೆಟ್ಟಿ ಕೂಡ ಕಾಂತಾರ ಚಿತ್ರದಲ್ಲಿ ನಟಿಸುವಂತೆ ದಿವಂಗತ ಪುನೀತ್‌ ರಾಜ್‌ ಕುಮಾರ್‌ರವರಿಗೆ ಆಹ್ವಾನ ನೀಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರಾಮಾಣಿಕವಾಗಿ ಹೇಳಿ ಪುನೀತ್ ರಾಜ್‌ಕುಮಾರ್ ಆ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರೆ? ರಿಷಬ್‌ ಶೆಟ್ಟಿಯವರಿಗೆ ಭೂತ ಮತ್ತು ದೈವ ಆರಾಧನೆಯ ಸಂಸ್ಕೃತಿಯಲ್ಲಿ ಆಳವಾದ ಬೇರುಗಳಿದ್ದ ಕಾರಣದಿಂದಲೇ ಅವರು ಕಾಂತಾರ ಚಿತ್ರದಲ್ಲಿ ಪರಿಣಾಮಕಾರಿಯಾಗಿ ದೈವಿಕ ಪ್ರದರ್ಶನ ನೀಡಲು ಸಾಧ್ಯವಾಯಿತು” ಎಂದು ಜ್ಯೋತಿ ಸುಪರ್ಣ ಟ್ವೀಟ್ ಮಾಡಿದ್ದಾರೆ.

ಮುಂದುವರಿದು “ಪುನೀತ್ ರಾಜ್‌ ಕುಮಾರ್‌ ಮರಣ ಹೊಂದಿದುರ ಬಗ್ಗೆ ನನಗೂ ಬೇಸರವಿದೆ. ಆದರೆ ವಾಸ್ತವದಲ್ಲಿ ರಿಷಬ್ ಶೆಟ್ಟಿಯಂತಹ ಪ್ರತಿಭಾವಂತ ನಟ/ನಿರ್ದೇಶಕ/ಬರಹಗಾರ ಸ್ಯಾಂಡಲ್‌ವುಡ್‌ನಲ್ಲಿ ದಶಕಗಳ ಕಾಲ ಹೋರಾಡಬೇಕಿದೆ. ಅವರು ಒಂದು ದಶಕದ ಹಿಂದೆಯೇ ಸ್ಯಾಂಡಲ್‌ವುಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ನಾವು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಬಹುದಿತ್ತು” ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತೆ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಒಟ್ಟಾರೆಯಾಗಿ ಈ ಟ್ವೀಟ್‌ನಲ್ಲಿ ರಿಷಬ್ ಶೆಟ್ಟಿಯನ್ನು ಹೊಗಳುತ್ತಲೇ ಅವರು ಇಷ್ಟು ದಿನ ಬೆಳಯದಿರಲು ರಾಜ್ ಕುಟುಂಬವೇ ಕಾರಣವಾಗಿದೆ. ಪುನೀತ್ ರಾಜ್ ಕುಮಾರ್ ಉತ್ತಮವಾಗಿ ಅಭಿನಯಿಸಲು ಸಾಧ್ಯವಾಗುತ್ತಿಲಿಲ್ಲ. ಕನ್ನಡ ಚಿತ್ರರಂಗ ರಾಜ್ ಕುಟುಂಬದ ಕೈಯಲ್ಲಿದ್ದು ಎಲ್ಲರು ಅವರ ಅಣತಿಯಂತೆಯೇ ನಡೆದುಕೊಳ್ಳಬೇಕು. ಅದರಿಂದಾಗಿ ಕನ್ನಡ ಚಿತ್ರರಂಗ ಹಿಂದುಳಿದಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿರುವುದು ಕನ್ನಡಿಗರನ್ನು ಕೆರಳಿಸಿದೆ.

ಕರಣ್ ಜೋಹರ್ ಅವರನ್ನು ಡಾ.ರಾಜ್‌ಕುಮಾರ್‌ಗೆ ಹೋಲಿಸಬೇಡಿ. ಮತ್ತು ಪುನೀತ್ ರಾಜ್‌ಕುಮಾರ್ ವಂಶವಾಹಿನಿ ನಟರಲ್ಲ. ಅವರು 10 ವರ್ಷದವರಾಗಿದ್ದಾಗಲೆ ನಟನೆಗಾಗಿ ಅಭಿಮಾನಿಗಳನ್ನು ಹೊಂದಿದ್ದರು. ರಾಜ್ ಕುಟುಂಬವು ಯಾರ ವಿರುದ್ಧವೂ ಎಂದೂ ದ್ವೇಷದ ಮಾತುಗಳನ್ನಾಡಿಲ್ಲ. ಆದರೆ ನೀವು ಅವರನ್ನು ತುಂಬಾ ದ್ವೇಷಿಸುತ್ತಿದ್ದೀರಿ ಎಂದು ಕನ್ನಡಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಅರ್ಥಹೀನವಾಗಿ ಮಾತನಾಡಬೇಡಿ. ಡಾ.ರಾಜ್‌ಕುಮಾರ್ ಅವರ ಕುಟುಂಬದ ಮೇಲಿನ ಅಭಿಮಾನವು ಗೌರವದಿಂದ ಬಂದಿದೆಯೇ ಹೊರತು ಬಲವಂತದಿಂದಲ್ಲ. ಪುನೀತ್ ಅವರು ಬಹಳ ಒಳ್ಳೆಯ ಮನುಷ್ಯರಾಗಿದ್ದರು ಮತ್ತು ಅದ್ಭತ ಪ್ರತಿಭೆ ಅವರಲ್ಲಿತ್ತು. ಈ ರೀತಿಯ ಪ್ರತಿಭೆ ಇದ್ದರೆ ಪ್ರತಿ ನಟನ ಮಕ್ಕಳು ಯಶಸ್ವಿಯಾಗುತ್ತಾರೆ. ನಿಮ್ಮ RSS ಕನ್ನಡ ವಿರೋಧಿ ನಿಲುವು ಈ ಟ್ವೀಟ್‌ನಲ್ಲಿದೆ ಎಂದು ನೀಹ ಎಂಬುವವರು ಕಿಡಿಕಾರಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು 8 ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ, ದಯವಿಟ್ಟು ಅವರು ಹಾಡಿದ ಹಾಡುಗಳನ್ನು ಕೇಳಿ, ನಮ್ಮ ಎಷ್ಟು ನಟರು ಹಾಡುವಲ್ಲಿ ಮತ್ತು ಅತ್ಯುತ್ತಮ ನಟನೆ ಮಾಡುವಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ? ಪುನೀತ್ ಅವರು ಪ್ರತಿಭೆಯ ಕಣಜ ಮತ್ತು ಆಂಕರ್ ಕೂಡ ಆಗಿದ್ದರು ಎಂದು ಅಪ್ಪು ಸಾಗರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಹಾಡು ಹೇಳಿ ಬಂದ ಹಣದಿಂದ ಸಾಮಾಜಿಕ ಕಾರ್ಯ ಮಾಡಿದ್ದಾರೆ. ನಾವು ಕನ್ನಡಿಗರು, ಎಲ್ಲರನ್ನೂ ಗೌರವಿಸುತ್ತೇವೆ. ರಿಷಬ್ ಶೆಟ್ಟಿ ಅವರ ಮೇಲೂ ನಮಗೆ ತುಂಬ ಗೌರವ ಇದೆ. ಅವರು ಅಪ್ಪು ಅವರ ಮೇಲಿನ ಗೌರವದಿಂದ ಹೇಳಿದ್ದಾರೆ ಅಷ್ಟೆ. ಗೌರವವನ್ನ ಹೆದರಿಸಿ ಅಥವಾ ಹಣದಿಂದ ಪಡೆಯೋಕೆ ಆಗಲ್ಲ. ಸಾಧನೆ ನೋಡಿ ಗೌರವ ಕೊಡುತ್ತಾರೆ ಎಂದು ಕನ್ನಡಿಗ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಅಪ್ಪು ಬಗ್ಗೆ ಹಗುರವಾಗಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಯಾರನ್ನೋ ಮೆಚ್ಚಿಸುವ ಸಲುವಾಗಿ ಹೀಗೆ ಬಾಯಿಗೆ ಬಂದಂತೆ ಮಾತನಾಡುವುದು ಬೇರೆಯವರ ಗಮನವನ್ನು ಸೆಳೆಯಲಿಕ್ಕೆ ಹಾಗೂ ತಮ್ಮ ಹೆಸರು ಚಾಲ್ತಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಮಾಡುವ cheap gimmick ಅಷ್ಟೇ. ರಾಜಕುಮಾರ್, ಏನು, ಅವರ ಹಾಗೂ ಅವರ ಕುಟುಂಬದ ಕಾಣಿಕೆ ಕನ್ನಡ ಚಿತ್ರರಂಗವನ್ನು ಕಟ್ಟಲು ಎಷ್ಟು ಎಂಬುದು ಎಲ್ಲರಿಗೂ ಗೊತ್ತಿದೆ. ರಿಷಬ್ ಶೆಟ್ಟಿ ಒಬ್ಬ ಪ್ರತಿಭಾವಂತ ನಟ ನಿರ್ದೇಶಕರು, ಅವರಿಂದ ಇನ್ನೂ ಒಳ್ಳೆಯ ಚಿತ್ರಗಳು ಬರಬೇಕಿದೆ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡುವುದನ್ನು ಸಂಘ ಪರಿವಾರಿಗಳು ನಿಲ್ಲಿಸಬೇಕು. ಪುನೀತ್ ಮಾಡಿರುವ ಸಾಮಾಜಿಕ ಕೆಲಸದಲ್ಲಿ ಅರ್ಧದಷ್ಟು ಸಂಘ ಪರಿವಾರದವರು ಮಾಡಿದ್ದರೆ ಹೇಳಲಿ.

  2. ಮತ್ತೆ ಸಂಘ ಪರಿವಾರದ ಬಗ್ಗೆ ಅಂದುಕೊಂಡಿದ್ದೀರಾ ಅವರ ಗುಲಾಮಗಿರಿ ಚಾಕರಿ ಮಾಡದಿದ್ದರೆ ಬರೀ ಮುಸಲ್ಮಾನರಿಗೆ ಮಾತ್ರ ಅಲ್ಲ ಯಾರಿಗೂ ಜಾಗ ಇಲ್ಲ, ಈಗ ನೋಡಿ ಡಾಕ್ಟರ್ ರಾಜಕುಮಾರ್ ಕುಟುಂಬದವರು ಸಂಘ ಪರಿವಾರಕ್ಕೆ ಅಷ್ಟೊಂದು ಹೊಂದಿಕೊಂಡು ಹೋಗದ ಕಾರಣ ಹೊಟ್ಟೆಯ ಅಗ್ನಿ ಸಲ್ಪ ಸಲ್ಲನೆ ಹೊರ ಬರುತ್ತಿದೆ

  3. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ಬೊಗಳುವವರು ಬೊಗಳುತ್ತನೆ ಇರಲಿ ಉರಿದುಕೊಳ್ಳುವವರು ಉರ್ಕಂತನೇ ಇರಲಿ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...