ವಿದೇಶಿಯರ ಗಡೀಪಾರು ಮಾಡುವ ಬದಲು ರಾಜ್ಯದ ಬಂಧನ ಕೇಂದ್ರಗಳಲ್ಲಿ ಏಕೆ ಇರಿಸಲಾಗಿದೆ ಎಂಬುದನ್ನು ವಿವರಿಸಲು ವಿಫಲವಾದ ಅಸ್ಸಾಂ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಟೀಕಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಅಸ್ಸಾಂನ ಗೋಲ್ಪಾರ ಜಿಲ್ಲೆಯ ಮಾಟಿಯಾ ಟ್ರಾನ್ಸಿಸ್ಟ್ ಶಿಬಿರದಲ್ಲಿ ಬಂಧಿಸಲ್ಪಟ್ಟ 270 ವಿದೇಶಿ ಪ್ರಜೆಗಳ ಗಡೀಪಾರು ಸಂಬಂಧ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ ಎಂದು ಪಿಟಿಐ ವರದಿ ಮಾಡಿದೆ. ವಿದೇಶಿಯರ ಗಡೀಪಾರು
ಡಿಸೆಂಬರ್ 9 ರಂದು ರಾಜ್ಯ ಸರ್ಕಾರಕ್ಕೆ ಅಫಿಡವಿಟ್ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಲಾಗಿದ್ದು, ಶಿಬಿರದಲ್ಲಿ ವಿದೇಶಿ ಪ್ರಜೆಗಳನ್ನು ಬಂಧಿಸಲು ಕಾರಣಗಳನ್ನು ಮತ್ತು ಅವರ ಗಡೀಪಾರುಗಾಗಿ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒದಗಿಸಬೇಕೆಂದು ನಿರೀಕ್ಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದಾಗ್ಯೂ, ರಾಜ್ಯ ಸರ್ಕಾರ ಸಲ್ಲಿಸಿದ ಅಫಿಡವಿಟ್ ದೋಷಪೂರಿತವಾಗಿದೆ ಎಂದು ಪೀಠ ಹೇಳಿದೆ.
“ಬಂಧನಕ್ಕೆ ಯಾವುದೇ ಸಮರ್ಥನೆಯನ್ನು ಅಫಿಡವಿಟ್ ನೀಡುವುದಿಲ್ಲ… ಗಡೀಪಾರು ಮಾಡಲು ತೆಗೆದುಕೊಂಡ ಕ್ರಮಗಳನ್ನು ನಿಗದಿಪಡಿಸಲಾಗಿಲ್ಲ. ಇದು ಈ ನ್ಯಾಯಾಲಯದ ಆದೇಶಗಳ ಸಂಪೂರ್ಣ ಉಲ್ಲಂಘನೆಯಾಗಿದೆ.” ಎಂದು ಪೀಠವು ಹೇಳಿದೆ ಎಂದು ಪಿಟಿಐ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬದುಕುವ ಮೂಲಭೂತ ಹಕ್ಕು ನಾಗರಿಕರಿಗೆ ಮಾತ್ರವಲ್ಲದೆ ವಿದೇಶಿಯರು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದ್ದು, 270 ಜನರನ್ನು ಅವರ ದೇಶಗಳಿಗೆ ಗಡೀಪಾರು ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮುಂದಿನ ವಿಚಾರಣೆಯಲ್ಲಿ ವಿವರಣೆಯೊಂದಿಗೆ ವರ್ಚುವಲ್ ಆಗಿ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆಯ ಸಮಯದಲ್ಲಿ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ವಿದೇಶಿಯರ ನ್ಯಾಯಮಂಡಳಿಯು ವ್ಯಕ್ತಿಗಳನ್ನು ವಿದೇಶಿಯರೆಂದು ಘೋಷಿಸಿದ ನಂತರವೇ ಅವರನ್ನು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆದಾಗ್ಯೂ, ಗಡೀಪಾರು ಪ್ರಕ್ರಿಯೆಯನ್ನು ಪ್ರಾರಂಭಿಸದೆ ಬಂಧನಗಳು ಏಕೆ ಮುಂದುವರೆದಿವೆ ಎಂದು ಪೀಠ ಕೇಳಿತು.
ರಾಜ್ಯ ಸರ್ಕಾರದ ವಕೀಲರು ಅಫಿಡವಿಟ್ ಗೌಪ್ಯವಾಗಿದ್ದು, ಅದನ್ನು ಮೊಹರು ಮಾಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದರು ಎಂದು ಲೈವ್ ಲಾ ವರದಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಓಕಾ ಅವರು, ಇದು ಹೇಗೆ ಸೂಕ್ಷ್ಮ ವಿಚಾರ ಎಂಬುದನ್ನು ವಿವರಿಸಲು ಕೇಳಿದ್ದಾರೆ. ಆಗ ಪ್ರತಿಕ್ರಿಯಿಸಿದ ವಕೀಲರು, ಅಫಿಡವಿಟ್‌ನಲ್ಲಿ ವಿದೇಶಿಯರ ವಿಳಾಸಗಳು ಇವೆ ಎಂದು ಹೇಳಿದರು.
“ಸಲ್ಲಿಸಿದ ಅಫಿಡವಿಟ್‌ನ ವಿಷಯಗಳು ಗೌಪ್ಯವಾಗಿರುವುದರಿಂದ ಅದನ್ನು ಮುಚ್ಚಿದ ಲಕೋಟೆಯಲ್ಲಿ ಇಡಬೇಕು ಎಂದು ಅಸ್ಸಾಂ ವಕೀಲರು ಹೇಳುತ್ತಾರೆ. ಅದನ್ನು ಮುಚ್ಚಿದ ಲಕೋಟೆಯಲ್ಲಿ ಇಡಬೇಕೆಂದು ನಾವು ನಿರ್ದೇಶಿಸುತ್ತಿದ್ದೇವೆ, ಅದರೆ ಈ ವಿಷಯದಲ್ಲಿ ಗೌಪ್ಯತೆಯಿದೆ ಎಂಬ ವಕೀಲರ ಹೇಳಿಕೆಯ ಬಗ್ಗೆ ನಮಗೆ ಸಮಮತವಿಲ್ಲ” ಎಂದು ಪೀಠವೂ ಹೇಳಿದೆ.
ಗೋಲ್ಪಾರದಲ್ಲಿರುವ ಬಂಧನ ಕೇಂದ್ರವು ಜನವರಿ 2023 ರಲ್ಲಿ ಕಾರ್ಯಾರಂಭ ಮಾಡಿತು. ಇದು ಭಾರತದ ಅತಿದೊಡ್ಡ ಬಂಧನ ಕೇಂದ್ರವಾಗಿದ್ದು, ಸೆಪ್ಟೆಂಬರ್ 18 ರ ಹೊತ್ತಿಗೆ, ಇಲ್ಲಿ 274 ಕೈದಿಗಳನ್ನು ಇರಿಸಲಾಗಿತ್ತು.
ಡಿಸೆಂಬರ್ 9 ರಂದು ನಡೆದ ಕೊನೆಯ ವಿಚಾರಣೆಯಲ್ಲಿ, ಬಂಧನ ಶಿಬಿರದಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಗಳ ಹೆಸರುಗಳು, ಅವರ ಬಂಧನವನ್ನು ಸಮರ್ಥಿಸುವ ದಾಖಲೆಗಳು ಮತ್ತು ಅವರನ್ನು ಗಡೀಪಾರು ಮಾಡಲು ತೆಗೆದುಕೊಂಡ ಕ್ರಮಗಳ ಕುರಿತು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು ಎಂದು ಲೈವ್ ಲಾ ವರದಿ ಮಾಡಿದೆ.
ನವೆಂಬರ್ 4 ರಂದು, ಮಾಟಿಯಾ ಟ್ರಾನ್ಸಿಸ್ಟ್ ಶಿಬಿರದಲ್ಲಿನ ಪರಿಸ್ಥಿತಿಗಳು “ತೃಪ್ತಿಕರವಾಗಿಲ್ಲ” ಎಂದು ನ್ಯಾಯಾಲಯ ಹೇಳಿತ್ತು ಮತ್ತು ಒಂದು ತಿಂಗಳೊಳಗೆ ಸೌಲಭ್ಯಗಳನ್ನು ಸುಧಾರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಬಂಧನ ಕೇಂದ್ರದಲ್ಲಿರುವ ನಿರಾಶ್ರಿತರ ಜೀವನ ಪರಿಸ್ಥಿತಿಗಳನ್ನು ಪರಿಶೀಲಿಸಲು ಅಸ್ಸಾಂ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅನಿರೀಕ್ಷಿತ ಭೇಟಿಗಳನ್ನು ನೀಡುವಂತೆ ಕೂಡಾ ಸುಪ್ರಿಂಕೋರ್ಟ್ ನಿರ್ದೇಶಿಸಿತ್ತು.
ಬಂಧಿತರಲ್ಲಿ ಹೆಚ್ಚಿನವರು – 102 ರೋಹಿಂಗ್ಯಾಗಳು ಮತ್ತು 32 ಚಿನ್ – ಕಿರುಕುಳದಿಂದ ಪಲಾಯನ ಮಾಡಿದ ಮ್ಯಾನ್ಮಾರ್‌ನ ನಿರಾಶ್ರಿತರಾಗಿದ್ದಾರೆ. ಸೆಪ್ಟೆಂಬರ್ 10 ರಂದು, ನ್ಯಾಯಾಲಯವು ಅಸ್ಸಾಂ ಸರ್ಕಾರಕ್ಕೆ ವಿದೇಶಿಯರನ್ನು ಗಡೀಪಾರು ಮಾಡುವ ಯೋಜನೆಯನ್ನು ಸಲ್ಲಿಸುವಂತೆ ಆದೇಶಿಸಿತು. ಸೆಪ್ಟೆಂಬರ್ 9 ರಂದು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಮ್ಯಾನ್ಮಾರ್‌ನ ನೂರಕ್ಕೂ ಹೆಚ್ಚು ರೋಹಿಂಗ್ಯಾ ಮತ್ತು ಚಿನ್ ನಿರಾಶ್ರಿತರು ಶಿಬಿರದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಸ್ಕ್ರಾಲ್ ವರದಿ ಮಾಡಿದೆ.
ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಿಂದ ನೀಡಲಾದ ಕಾರ್ಡ್‌ಗಳನ್ನು ಹೊಂದಿರುವ ನಿರಾಶ್ರಿತರು, ತಮ್ಮನ್ನು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ಗೆ ಹಸ್ತಾಂತರಿಸಬೇಕು, ದೆಹಲಿಯ ಬಂಧನ ಕೇಂದ್ರಕ್ಕೆ ವರ್ಗಾಯಿಸಬೇಕು ಮತ್ತು ಅಂತಿಮವಾಗಿ ಮೂರನೇ ದೇಶದಲ್ಲಿ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದನ್ನೂಓದಿ: ಜಲಗಾಂವ್ ರೈಲು ಅಪಘಾತ | ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ; 8 ಮೃತದೇಹಗಳ ಗುರುತು ಪತ್ತೆ
ಜಲಗಾಂವ್ ರೈಲು ಅಪಘಾತ | ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ; 8 ಮೃತದೇಹಗಳ ಗುರುತು ಪತ್ತೆ


