ರಾಜ್ಯಸಭಾ ಸ್ಪೀಕರ್ ಜಗದೀಪ್ ಧನಕರ್ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಆಡಳಿತರೂಢ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದದ ನಂತರ ರಾಜ್ಯಸಭೆಯನ್ನು ಡಿಸೆಂಬರ್ 16 ಕ್ಕೆ ಶುಕ್ರವಾರ ಮುಂದೂಡಲಾಗಿದೆ. ಪ್ರತಿಪಕ್ಷಗಳು ಪ್ರಸ್ತಾವನೆಯ ಮೇಲೆ ಚರ್ಚೆಗೆ ಒತ್ತಾಯಿಸುತ್ತಿದ್ದಂತೆ ಕೋಲಾಹಲ ಉಂಟಾಗಿದ್ದು, ಆದರೆ ಆಡಳಿತರೂಢ ಪಕ್ಷಗಳು ಆಕ್ಷೇಪಿಸಿದವು. ಈ ವೇಳೆ ಸದನದಲ್ಲಿ ಗೊಂದಲ ಉಂಟಾಗಿ ಕಲಾಪ ಮುಂದೂಡಿಕೆಗೆ ಕಾರಣವಾಯಿತು.
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರನ್ನು ‘ಅತ್ಯಂತ ಪಕ್ಷಪಾತಿ’ ಎಂದು ಆರೋಪಿಸಿರುವ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಅವಿಶ್ವಾಸ ನಿರ್ಣಯದ ನೋಟಿಸ್ ಅನ್ನು ಮಂಡಿಸಿವೆ. ಗದ್ದಲದ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಧನಕರ್ ಅವಕಾಶ ನೀಡಿದ್ದಾರೆ. ಧನಕರ್ ವಿರುದ್ಧದ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆಡಳಿತರೂಢ ಪೀಠದಿಂದ ಸಂಸದರಿಗೆ ಮಾತನಾಡಲು ಹೆಚ್ಚಿನ ಸಮಯಾವಕಾಶ ನೀಡುವ ಮೂಲಕ ಸಭಾಪತಿಗಳು ಒಲವು ತೋರುತ್ತಿದ್ದಾರೆ ಎಂದು ಆರೋಪಿಸಿದ ಖರ್ಗೆ, ಕಾಂಗ್ರೆಸ್‌ಗೆ ಅಗೌರವ ತೋರುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಧನಕರ್ ಅವರು ಖರ್ಗೆ ಮತ್ತು ಸಭಾನಾಯಕ ಜೆಪಿ ನಡ್ಡಾ ಅವರನ್ನು ಅಧ್ಯಕ್ಷರ ಚೇಂಬರ್‌ನಲ್ಲಿ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನದಲ್ಲಿ ತಮ್ಮನ್ನು ಭೇಟಿಯಾಗುವಂತೆ ಆಹ್ವಾನಿಸಿದ್ದಾರೆ. ನಂತರ ಅವರು ಡಿಸೆಂಬರ್ 16 ಕ್ಕೆ ಕಲಾಪವನ್ನು ಮುಂದೂಡಿದ್ದಾರೆ.
ಈ ನಡುವೆ, ವಿರೋಧ ಪಕ್ಷವು ಹಂಗೇರಿಯನ್ ಅಮೆರಿಕನ್ ಉದ್ಯಮಿ ಮತ್ತು ಲೋಕೋಪಕಾರಿ ಜಾರ್ಜ್ ಸೊರೊಸ್ ಅವರೊಂದಿಗೆ ಪಿತೂರಿ ನಡೆಸುತ್ತಿದೆ ಎಂದು ಪ್ರತಿಪಾದಿಸಿ “ಮಾನಹಾನಿಕರ ಮತ್ತು ಅವಮಾನಕರ” ಹೇಳಿಕೆ ನೀಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ಗುರುವಾರ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪಕ್ಷವು ದೇಶವನ್ನು ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವರ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಸೊರೊಸ್‌ನೊಂದಿಗೆ ಪಿತೂರಿ ನಡೆಸುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯು ತನ್ನ ಆರೋಪಗಳನ್ನು ಪುನರುಚ್ಚರಿಸಿದ ನಂತರ ಸಂಸತ್ತಿನ ಉಭಯ ಸದನಗಳು ಕಳೆದ ಕೆಲವು ದಿನಗಳಲ್ಲಿ ಕೋಲಾಹಲಕ್ಕೆ ಸಾಕ್ಷಿಯಾಗುತ್ತಿವೆ.
ಇದನ್ನೂ ಓದಿ: ಸಿನಿಮಾ ಥಿಯೇಟರ್ ಕಾಲ್ತುಳಿದ ಪ್ರಕರಣದಲ್ಲಿ ಬಂಧನ; ನಟ ಅಲ್ಲು ಅರ್ಜುನ್ ಮೇಲಿನ ಆರೋಪಗಳೇನು?
ಸಿನಿಮಾ ಥಿಯೇಟರ್ ಕಾಲ್ತುಳಿದ ಪ್ರಕರಣದಲ್ಲಿ ಬಂಧನ; ನಟ ಅಲ್ಲು ಅರ್ಜುನ್ ಮೇಲಿನ ಆರೋಪಗಳೇನು?


