ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಶವಗಳ ಶೋಧ ಕಾರ್ಯ ಮೂರನೇ ದಿನವೂ (ಗುರುವಾರ) ಮುಂದುವರಿದಿದೆ. ಇಂದು ದೂರುದಾರ ತೋರಿಸಿರುವ ಪಾಯಿಂಟ್ ನಂಬರ್ 6,7,8,9,10ರಲ್ಲಿ ಮಣ್ಣು ಅಗೆತ ನಡೆಯುವ ಸಾಧ್ಯತೆ ಇದೆ.
ಇಂದು 12 ಗಂಟೆಯ ಸುಮಾರಿಗೆ ಎಸ್‌ಐಟಿ ಮತ್ತು ಇತರ ಅಧಿಕಾರಿಗಳು ದೂರುದಾರ ಅನಾಮಿಕ ವ್ಯಕ್ತಿಯನ್ನು ಧರ್ಮಸ್ಥಳದ ನೇತ್ರಾವತಿ ಸೇತುವೆ ಬಳಿ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ದೂರುದಾರ ಗುರುತಿಸಿರುವ 6ನೇ ಪಾಯಿಂಟ್ ಇದೆ.
ಮಣ್ಣು ಅಗೆಯಲು ಕಾರ್ಮಿಕರು ಹಾರೆ, ಪಿಕಾಸಿನೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಜೊತೆಗೆ ಒರತೆ ಬಂದರೆ ನೀರು ತೆಗೆಯಲು ಪಂಪ್ ಸೆಟ್ ಕೂಡ ಸ್ಥಳಕ್ಕೆ ತರಿಸಲಾಗಿದೆ. ಅರಣ್ಯ ಮತ್ತು ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಜೆಸಿಬಿಯನ್ನೂ ಕರೆಸಿದ್ದಾರೆ.
ನಿನ್ನೆ (ಬುಧವಾರ) ದೂರುದಾರ ಗುರುತಿಸಿರುವ ಪಾಯಿಂಟ್ ನಂಬರ್ 2 ರಿಂದ 5ರವರೆಗೆ 4 ರಿಂದ 6 ಅಡಿ ಮಣ್ಣು ಅಗೆಯಲಾಗಿದೆ. ಈ ವೇಳೆ ಶವಗಳನ್ನು ಹೂತಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಹಾಗಾಗಿ, ಇಡೀ ದೇಶ ಇಂದಾದರು ಏನಾದರು ಸಿಗಬಹುದೇ ಎಂಬ ಕುತೂಹಲದಲ್ಲಿದೆ.
ಇನ್ನು ದೂರುದಾರ ಗುರುತಿಸಿರುವ ಪಾಯಿಂಟ್ ನಂಬರ್ 13ರತ್ತ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ದೂರುದಾರ ಹೇಳಿದ್ದಾರೆ. ಈ ಪಾಯಿಂಟ್ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಯಲಿನಲ್ಲೇ ಇದೆ. ಇಲ್ಲಿ ಇಂದು (ಗುರುವಾರ) ಶೋಧ ನಡೆಯುವ ಸಾಧ್ಯತೆ ಇಲ್ಲ.
ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದರೆ ಎಸ್ಐಟಿಗೆ ಬೇರೆ ಅಧಿಕಾರಿ ನೇಮಕ ಕುರಿತು ಚರ್ಚೆ: ಡಾ. ಜಿ ಪರಮೇಶ್ವರ್


