ಎರಡು ವರ್ಷಗಳ ಹಿಂದೆ ತನ್ನ ತಾಯಿಗೆ ಕ್ಯಾನ್ಸರ್ ರೋಗವಿದೆ ಎಂದು ಹೇಳಿಕೊಂಡಿದ್ದ ಯುವಕನಿಗೆ ಗೋಮೂತ್ರದ ಮದ್ದು ಹೇಳಿಕೊಟ್ಟಿದ್ದ ಸ್ವಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ, ಫೆಬ್ರವರಿ 23ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ 200 ಕೋಟಿ ರೂಪಾಯಿ ವೆಚ್ಚದ ಕ್ಯಾನ್ಸರ್ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿಸಿದ್ದಾರೆ.
2022ರಲ್ಲಿ ಧೀರೇಂದ್ರ ಶಾಸ್ತ್ರಿ ಕ್ಯಾನ್ಸರ್‌ಗೆ ಮದ್ದು ಹೇಳಿಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು.
ಅದರಲ್ಲಿ “ನಿಮ್ಮ ತಾಯಿ ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಮೂರು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಅವರು ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿದ್ದಾರೆ ಮತ್ತು ಗಂಭೀರ ಸ್ಥಿತಿಯಲ್ಲಿದ್ದಾರೆ. ನಿರಂತರವಾಗಿ ನೋವು ಅನುಭವಿಸುತ್ತಿದ್ದಾರೆ. ಅವರು ಔಷಧಿಗಳನ್ನು ತೆಗೆದುಕೊಂಡಿದ್ದಾರೆ, ಆದರೆ ಅವು ಪರಿಣಾಮ ಬೀರಿಲ್ಲ. ವಿಶೇಷ ಪ್ರಾರ್ಥನೆ ಮಾಡಿ, ನಿಮ್ಮ ಮನೆಯಲ್ಲಿ 11 ದಿನಗಳ ಕಾಲ ನಿರಂತರವಾಗಿ ದೀಪ ಬೆಳಗಿ (ಅಖಂಡ ಜ್ಯೋತಿ) ಸ್ಥಳೀಯ ಹಸುವಿನಿಂದ 50 ಗ್ರಾಂ ಗೋಮೂತ್ರವನ್ನು ತೆಗೆದುಕೊಂಡು ಬಂದು, ಅದನ್ನು ಎರಡು ಅರಿಶಿನ ಬೇರುಗಳೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ರೋಗಿಯಾದ ನಿಮ್ಮ ತಾಯಿಗೆ ಕುಡಿಯಲು ಕೊಡಿ. ಶೇ.100ರಷ್ಟು ಫಲಿತಾಂಶ ಸಿಗಲಿದೆ..ಭಾಗೇಶ್ವರ ಧಾಮ್ ಕಿ ಜೈ!” ಎಂದಿದ್ದರು.
THREAD by @shinjineemjmdr
On Feb 23, Dhirendra Shastri, who has previously ‘prescribed’ gaumutra & haldi as a cure for cancer, laid the foundation for a ₹200cr cancer hospital. PM Modi attended the event & praised his ‘younger brother’ for his efforts in unifying Hindus. pic.twitter.com/trggvVTYOV
— Mohammed Zubair (@zoo_bear) February 26, 2025
ಮಧ್ಯಪ್ರದೇಶದ ಛತ್ತರ್‌ಪುರ್‌ನಲ್ಲಿರುವ ಬಾಗೇಶ್ವರ ಧಾಮ ದೇವಾಲಯದ ಮುಖಸ್ಥರಾಗಿರುವ ಧೀರೇಂದ್ರ ಶಾಸ್ತ್ರಿ, ಫೆಬ್ರವರಿ 23, 2025ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಗೆ ಶಿಲಾನ್ಯಾಸ ಮಾಡಿಸಿದ್ದಾರೆ.
ವರದಿಗಳ ಪ್ರಕಾರ, 200 ಕೋಟಿ ರೂಪಾಯಿ ವೆಚ್ಚದ ಈ ಕ್ಯಾನ್ಸರ್ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರಲಿದ್ದು, ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಲಿದೆ.
ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ,”ನನ್ನ ಕಿರಿಯ ಸಹೋದರ ಧೀರೇಂದ್ರ ಶಾಸ್ತ್ರಿ ಹಿಂದೂಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದರು. ಹಿಂದೂಗಳ ನಂಬಿಕೆಯನ್ನು ಅಪಹಾಸ್ಯ ಮತ್ತು ‘ಸ್ವಭಾವತಃ ಪ್ರಗತಿಪರವಾದ ಧರ್ಮದ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಖಂಡಿಸಿದ್ದರು. ಧೀರೇಂದ್ರ ಶಾಸ್ತ್ರಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲು ಮುಂದಾಗಿರುವುದು ಸಮಾಜ ಮತ್ತು ಜನರ ಹಿತಾಸಕ್ತಿಗಾಗಿ ತೆಗೆದುಕೊಂಡ ಮತ್ತೊಂದು ನಿರ್ಣಯವಾಗಿದೆ. ನೀವು ಈಗಾಗಲೇ ಬಾಗೇಶ್ವರ ಧಾಮದಲ್ಲಿ, ಭಜನೆ, ಆಹಾರ ಮತ್ತು ಆರೋಗ್ಯಕರ ಜೀವನದ ಆಶೀರ್ವಾದವನ್ನು ಪಡೆಯುತ್ತೀರಿ” ಎಂದು ಹೇಳಿದ್ದರು.
#WATCH | Chhattarpur, Madhya Pradesh | Prime Minister Narendra Modi says, "Nowadays we see that there is a group of leaders who mock religion, ridicule it, are engaged in dividing people and many times foreign powers also try to weaken the country and religion by supporting these… pic.twitter.com/afDz29eMUx
— ANI (@ANI) February 23, 2025
ಸಂಸ್ಥೆಯ ವೆಬ್‌ಸೈಟ್ ಪ್ರಕಾರ, ಬಾಗೇಶ್ವರ ಧಾಮವು 300 ವರ್ಷಗಳ ಹಿಂದೆ ಮಧ್ಯ ಪ್ರದೇಶದ ಚತ್ತರ್‌ಪುರದ ಗಧಾ ಗ್ರಾಮದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಹಿಂದಿ ಪದ ‘ಧಾಮ’ವು ತೀರ್ಥಯಾತ್ರೆಯ ಸ್ಥಳವನ್ನು ಸೂಚಿಸುತ್ತದೆ. ಇಂದಿನ ದೇವಾಲಯದ ಹಿಂದೆ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಅಜ್ಜ ಸೇತುಲಾಲ್ ಗರ್ಗ್ ಸನ್ಯಾಸಿ ಬಾಬಾ ಅವರ ಸಮಾಧಿ ಇದೆ. ಅವರು ಧಾಮವನ್ನು ಪ್ರಾರಂಭಿಸಿದವರು. ಈ ದೇವಾಲಯವು ಹಿಂದೂ ದೇವರುಗಳಾದ ಬಾಲಾಜಿ ಮತ್ತು ಹನುಮನಿಗೆ ಸಮರ್ಪಿತವಾಗಿದೆ. ವೆಬ್‌ಸೈಟ್ ಪ್ರಕಾರ, ಜನರು ತಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಕೋರಿ ಬಾಗೇಶ್ವರ ಧಾಮಕ್ಕೆ ಬರುತ್ತಾರೆ. “ಬಾಲಾಜಿ ಮಹಾರಾಜರು ಅರ್ಜಿ ಮೂಲಕ ನಿಮ್ಮ ಸಮಸ್ಯೆಯನ್ನು ಆಲಿಸುತ್ತಾರೆ ಮತ್ತು ಧಾಮದ ಪೀಠಾಧೀಶ್ವರ ಮೂಲಕ ಪರಿಹಾರವನ್ನು ಸೂಚಿಸುತ್ತಾರೆ” ಎಂದು ವೆಬ್‌ಸೈಟ್ ಹೇಳುತ್ತದೆ. ಅನ್ನಪೂರ್ಣ ರಸೋಯಿ (ಸಮುದಾಯ ಅಡುಗೆಮನೆ), ಬಡ ಹುಡುಗಿಯರಿಗೆ ವಾರ್ಷಿಕ ಸಾಮೂಹಿಕ ವಿವಾಹಗಳು, ವೈದಿಕ ಶಿಕ್ಷಣಕ್ಕಾಗಿ ಗುರುಕುಲ ಮತ್ತು ಪರಿಸರ ಸಂರಕ್ಷಣೆಗಾಗಿ ಬಾಗೇಶ್ವರ ಉದ್ಯಾನಗಳು ಸೇರಿದಂತೆ ಹಲವಾರು ಸಾಮಾಜಿಕ ಕಲ್ಯಾಣ ಉಪಕ್ರಮಗಳನ್ನು ಧಾಮ ನಡೆಸುತ್ತಿದೆ. ಇದು ಗೋ ರಕ್ಷಣೆಯನ್ನು ಉತ್ತೇಜಿಸುತ್ತದೆ ಮತ್ತು ನಿರ್ಗತಿಕ ಮಕ್ಕಳಿಗೆ ಆಹಾರ ಮತ್ತು ಶಿಕ್ಷಣವನ್ನು ಒದಗಿಸುತ್ತದೆ” ಎಂದು ಹೇಳಲಾಗಿದೆ.
ಗಾಂಧಿ ಹಂತಕ ಗೋಡ್ಸೆಯನ್ನು ಹೊಗಳಿದ್ದ ಪ್ರಾಧ್ಯಾಪಕಿಗೆ ಎನ್‌ಐಟಿ ಡೀನ್ ಆಗಿ ಭಡ್ತಿ : ತೀವ್ರ ವಿರೋಧ


