ಸೆಪ್ಟೆಂಬರ್ 26ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಹಳೆಯ ಪೋಟೋಗಳಿಗೆ ಅಪಾರ್ಥ ಕಲ್ಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕರು, “ಗಾಂಧಿ ಕುಟುಂಬ ಮನಮೋಹನ ಸಿಂಗ್ ಅವರಿಗೆ ಅಗೌರವ ತೋರಿಸಿದೆ” ಎಂದು ಬಿಂಬಿಸಲು ಯತ್ನಿಸಿದ್ದಾರೆ. ಬಿಜೆಪಿ ಬೆಂಬಲಿಗರು ಈ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ರಿಶಿ ಭಾಗ್ರೀ ಎನ್ನುವ ಬಿಜೆಪಿ ಬೆಂಬಲಿಗರು ಹಂಚಿಕೊಂಡಿರುವ ಪೋಟೋಗಳನ್ನು ನೋಡಿರಿ.
The Man in Blue turban was the Indian Prime Minister for 10 years. pic.twitter.com/QqEZpVfkwI
— Rishi Bagree (@rishibagree) September 26, 2021
ಈ ರೀತಿಯ ಪೋಟೋಗಳನ್ನು ಭಾಗ್ರಿಯವರು 2018 ಮತ್ತು 2020ರಲ್ಲೂ ಹಂಚಿಕೊಂಡಿದ್ದಾರೆ. ಈ ಪೋಟೋಗಳನ್ನು ಹೊರತುಪಡಿಸಿ, ಸೋನಿಯಾ ಗಾಂಧಿಯವರು ಮನಮೋಹನ್ ಸಿಂಗ್ ಅವರಿಗೆ ನಮಸ್ಕರಿಸದೆ ನಡೆದ ಹದಿನೈದು ಸೆಕೆಂಡ್‌ಗಳ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ.
Wishing former PM Manmohan Singh a very happy birthday. pic.twitter.com/pV0IMlnUyP
— Ajit Datta (@ajitdatta) September 26, 2021
ಈ ವಿಡಿಯೋ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಇದನ್ನು ಕರ್ನಾಟಕದ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ. ಬಿಜೆಪಿ ಬೆಂಬಲಿಗರಾದ ರಿತು ಹಾಗೂ ಮಹೇಶ್ ವಿಕ್ರಂ ಹೆಗ್ಡೆ ಕೂಡ ಹಂಚಿಕೊಂಡಿದ್ದಾರೆ. ಇವುಗಳ ಸತ್ಯಾಸತ್ಯತೆಯನ್ನು ‘ಆಲ್ಟ್ ನ್ಯೂಸ್’ ಬಯಲು ಮಾಡಿದೆ.
Indians can never forget those days ! pic.twitter.com/JigXzNdjJo
— BJP Karnataka (@BJP4Karnataka) August 19, 2021
When Manmohan Singh was India's Prime Minister, watch how Sonia Gandhi insulted him!
When Manmohan Singh isn't in power, watch how India's powerful man MODI respected him!
That's what Bharatiya Sanskaar teaches you! pic.twitter.com/UX1vNNF1rf
— Mahesh Vikram Hegde ?? (@mvmeet) November 10, 2019
ಸತ್ಯಾಂಶವೇನು?
ಚಿತ್ರ 1
ನವೆಂಬರ್ 23, 2017ರಂದು ಶ್ರೀಲಂಕದ ಪ್ರಧಾನಿ ರಾನಿಲ್ ವಿಕ್ರಮ್‌ಸಿಂಘೇ ಅವರನ್ನು ಭೇಟಿಯಾದಾಗ ಪೋಟೋಗ್ರಾಪರ್ ಕ್ಲಿಕ್ಕಿಸಿರುವ ಚಿತ್ರಗಳಿವು.
#Delhi: Congress' Sonia Gandhi, Rahul Gandhi, Manmohan Singh, Anand Sharma met Sri Lankan prime minister Ranil Wickremesinghe, today pic.twitter.com/ItoQy4HLV6
— ANI (@ANI) November 23, 2017
ಈ ಕಾರ್ಯಕ್ರಮ ನಡೆದಾಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರಲಿಲ್ಲ. ಸೋನಿಯಾಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ವಿರೋಧ ಪಕ್ಷದ ನಾಯಕರನ್ನು ಶ್ರೀಲಂಕಾ ಪ್ರಧಾನಿ ಭೇಟಿಯಾಗಿದ್ದರು.
ಚಿತ್ರ 2
ಅಕ್ಟೋಬರ್ 6, 2019ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರನ್ನು ಭೇಟಿಯಾದಾಗ ತೆಗೆದ ಪೋಟೋವಿದು. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸೋನಿಯಾ ಗಾಂಧಿಯವರು ಸಿಂಗ್ ಅವರನ್ನು ಮೂಲೆಗೆ ತಳ್ಳಿದ್ದು ಹೀಗೆ ಎಂದು ಈ ಹಿಂದೆಯೂ ಈ ಫೋಟೋ ಹರಿದಾಡಿದಾಗ ಆಲ್ಟ್ ನ್ಯೂಸ್ ಈ ಫೋಟೋದ ಹಿಂದಿನ ಕಾರಣವನ್ನು ತಿಳಿಸಿತ್ತು.
ಚಿತ್ರ 3
ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ 2012ರ ಜುಲೈ 19ರಂದು ಈ ಪೋಟೋವನ್ನು ತೆಗೆಯಲಾಗಿದೆ. ಮನಮೋಹನ್ ಸಿಂಗ್ ಅವರು ಮತದಾನ ಮಾಡುತ್ತಿರುವುದನ್ನು ಎಪಿ ಹಾಗೂ ಗೆಟ್ಟಿ ಪೋಟೋಗ್ರಫಿಯಲ್ಲೂ ಕಾಣಬಹುದು.

ಚಿತ್ರ 4
2014, ಜನವರಿ 17ರಂದು ಎಐಸಿಸಿ ಅಧಿವೇಶನದಲ್ಲಿ ತಾಳ್‌ಕೋಟ್ರಾ ಸ್ಟೇಡಿಯಂನಲ್ಲಿ ಧ್ವಜಾರೋಹಣ ಮಾಡಿದ ವೇಳೆ ಮೇಲೆ ತೆಗೆದ ಫೋಟೋವಿದು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೊವನ್ನು ಜೀ ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲೂ ಪ್ರಸಾರ ಮಾಡಿದೆ. ರಾಹುಲ್ ಗಾಂಧಿಯವರ ಪಕ್ಕದಲ್ಲಿ ನಿಂತಿದ್ದ ಸುಶೀಲ್ ಕುಮಾರ್ ಸಿಂಧೆಯವರಿಗೆ ಮನಮೋಹನ ಸಿಂಗ್ ಅವರು ನಮಸ್ಕರಿಸುವುದನ್ನು ಕಾಣಬಹುದು. ಸಿಂಗ್ ಅವರು ನಮಸ್ಕರಿಸುವುದನ್ನು ರಾಹುಲ್ ಗಾಂಧಿಯವರು ಗಮನಿಸಿಯೇ ಇಲ್ಲ. ಅದೇ ಸಂದರ್ಭದಲ್ಲಿ ಅವರು ಹಾರವನ್ನು ತೆಗೆಯುತ್ತಿರುವುದನ್ನು ಫೋಟೋಗ್ರಾಫರ್ ಕ್ಲಿಕ್ಕಿಸಿದ್ದಾನೆ. ಆದರೆ ಇದನ್ನೇ ರಾಹುಲ್ ಗಾಂಧಿಯವರು ಮನಮೋಹನ ಸಿಂಗ್ ಅವರಿಗೆ ಅಗೌರವ ತೋರಿಸಿದರು ಎಂಬಂತೆ ಬಿಂಬಿಸಲಾಗಿದೆ. ಸಿಂಗ್ ಅವರು ನಮಸ್ಕರಿಸಿರುವುದು ಶಿಂಧೆಯವರಿಗೆ ಎಂಬುದು ಇಲ್ಲಿನ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.
ಸೋನಿಯಾ ಗಾಂಧಿಯವರು ಮನಮೋಹನ ಸಿಂಗ್ ಅವರನ್ನು ಗೌರವಿಸುತ್ತಿಲ್ಲ ಎಂದು ಹರಿದಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆಯೂ ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸೋನಿಯಾ ಗಾಂಧಿಯವರ ಈ ವಿಡಿಯೋ ನೋಡಿದರೆ ಅವರು ಮನಮೋಹನಸಿಂಗ್ ಅವರನ್ನು ನಿರ್ಲಕ್ಷಿಸಿದ್ದಾರೆ ಎನಿಸುವುದಿಲ್ಲ. ಸನ್ನಿವೇಶ ಹಾಗೂ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ವಿಡಿಯೋವನ್ನು ಪೂರ್ಣ ವೀಕ್ಷಿಸಿದರೆ ಸೋನಿಯಾ ಗಾಂಧಿಯವರು ಇದೇ ಕಾರ್ಯಕ್ರಮದಲ್ಲಿ ಮನಮೋಹನ ಸಿಂಗ್ ಅವರಿಗೆ ನಮಸ್ಕರಿಸುತ್ತಿರುವುದನ್ನೂ ಕಾಣಬಹುದು.
ಇದನ್ನೂ ಓದಿರಿ: ಫ್ಯಾಕ್ಟ್ ಚೆಕ್: ಮೋದಿ ಕೊನೆಯ ಭರವಸೆಯೆಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿಲ್ಲ, ಇದು ಎಡಿಟ್ ಫೋಟೊ



