ಸೆಪ್ಟೆಂಬರ್‌ 26ರಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಜನ್ಮದಿನದಂದು ಹಳೆಯ ಪೋಟೋಗಳಿಗೆ ಅಪಾರ್ಥ ಕಲ್ಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕರು, “ಗಾಂಧಿ ಕುಟುಂಬ ಮನಮೋಹನ ಸಿಂಗ್‌ ಅವರಿಗೆ ಅಗೌರವ ತೋರಿಸಿದೆ” ಎಂದು ಬಿಂಬಿಸಲು ಯತ್ನಿಸಿದ್ದಾರೆ. ಬಿಜೆಪಿ ಬೆಂಬಲಿಗರು ಈ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ರಿಶಿ ಭಾಗ್ರೀ ಎನ್ನುವ ಬಿಜೆಪಿ ಬೆಂಬಲಿಗರು ಹಂಚಿಕೊಂಡಿರುವ ಪೋಟೋಗಳನ್ನು ನೋಡಿರಿ.

ಈ ರೀತಿಯ ಪೋಟೋಗಳನ್ನು ಭಾಗ್ರಿಯವರು 2018 ಮತ್ತು 2020ರಲ್ಲೂ ಹಂಚಿಕೊಂಡಿದ್ದಾರೆ. ಈ ಪೋಟೋಗಳನ್ನು ಹೊರತುಪಡಿಸಿ, ಸೋನಿಯಾ ಗಾಂಧಿಯವರು ಮನಮೋಹನ್‌ ಸಿಂಗ್‌ ಅವರಿಗೆ ನಮಸ್ಕರಿಸದೆ ನಡೆದ ಹದಿನೈದು ಸೆಕೆಂಡ್‌ಗಳ ವಿಡಿಯೋವನ್ನು ಅನೇಕರು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಹಲವು ವರ್ಷಗಳಿಂದ ಹರಿದಾಡುತ್ತಿದೆ. ಇದನ್ನು ಕರ್ನಾಟಕದ ಬಿಜೆಪಿಯ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲೂ ಹಂಚಿಕೊಳ್ಳಲಾಗಿದೆ. ಬಿಜೆಪಿ ಬೆಂಬಲಿಗರಾದ ರಿತು ಹಾಗೂ ಮಹೇಶ್‌ ವಿಕ್ರಂ ಹೆಗ್ಡೆ ಕೂಡ ಹಂಚಿಕೊಂಡಿದ್ದಾರೆ. ಇವುಗಳ ಸತ್ಯಾಸತ್ಯತೆಯನ್ನು ‘ಆಲ್ಟ್‌ ನ್ಯೂಸ್’ ಬಯಲು ಮಾಡಿದೆ.

ಸತ್ಯಾಂಶವೇನು?

ಚಿತ್ರ 1

ನವೆಂಬರ್‌ 23, 2017ರಂದು ಶ್ರೀಲಂಕದ ಪ್ರಧಾನಿ ರಾನಿಲ್‌ ವಿಕ್ರಮ್‌ಸಿಂಘೇ ಅವರನ್ನು ಭೇಟಿಯಾದಾಗ ಪೋಟೋಗ್ರಾಪರ್ ಕ್ಲಿಕ್ಕಿಸಿರುವ ಚಿತ್ರಗಳಿವು.

ಈ ಕಾರ್ಯಕ್ರಮ ನಡೆದಾಗ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿರಲಿಲ್ಲ. ಸೋನಿಯಾಗಾಂಧಿಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ವಿರೋಧ ಪಕ್ಷದ ನಾಯಕರನ್ನು ಶ್ರೀಲಂಕಾ ಪ್ರಧಾನಿ ಭೇಟಿಯಾಗಿದ್ದರು.

ಚಿತ್ರ 2

ಅಕ್ಟೋಬರ್‌ 6, 2019ರಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನಸಿಂಗ್‌ ಅವರನ್ನು ಭೇಟಿಯಾದಾಗ ತೆಗೆದ ಪೋಟೋವಿದು. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸೋನಿಯಾ ಗಾಂಧಿಯವರು ಸಿಂಗ್‌ ಅವರನ್ನು ಮೂಲೆಗೆ ತಳ್ಳಿದ್ದು ಹೀಗೆ ಎಂದು ಈ ಹಿಂದೆಯೂ ಈ ಫೋಟೋ ಹರಿದಾಡಿದಾಗ  ಆಲ್ಟ್‌ ನ್ಯೂಸ್ ಈ ಫೋಟೋದ ಹಿಂದಿನ ಕಾರಣವನ್ನು ತಿಳಿಸಿತ್ತು.

ಚಿತ್ರ 3

ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ 2012ರ ಜುಲೈ 19ರಂದು ಈ ಪೋಟೋವನ್ನು ತೆಗೆಯಲಾಗಿದೆ. ಮನಮೋಹನ್ ಸಿಂಗ್‌ ಅವರು ಮತದಾನ ಮಾಡುತ್ತಿರುವುದನ್ನು ಎಪಿ ಹಾಗೂ ಗೆಟ್ಟಿ ಪೋಟೋಗ್ರಫಿಯಲ್ಲೂ ಕಾಣಬಹುದು.

 

ಈ ಕುರಿತ ವಿಡಿಯೋವನ್ನೂ ಆಲ್ಟ್‌ನ್ಯೂಸ್ ಪತ್ತೆ ಹಚ್ಚಿದೆ.

ಚಿತ್ರ 4

2014, ಜನವರಿ 17ರಂದು ಎಐಸಿಸಿ ಅಧಿವೇಶನದಲ್ಲಿ ತಾಳ್‌ಕೋಟ್ರಾ ಸ್ಟೇಡಿಯಂನಲ್ಲಿ ಧ್ವಜಾರೋಹಣ ಮಾಡಿದ ವೇಳೆ ಮೇಲೆ ತೆಗೆದ ಫೋಟೋವಿದು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೊವನ್ನು ಜೀ ನ್ಯೂಸ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲೂ ಪ್ರಸಾರ ಮಾಡಿದೆ. ರಾಹುಲ್‌ ಗಾಂಧಿಯವರ ಪಕ್ಕದಲ್ಲಿ ನಿಂತಿದ್ದ ಸುಶೀಲ್‌ ಕುಮಾರ್‌ ಸಿಂಧೆಯವರಿಗೆ ಮನಮೋಹನ ಸಿಂಗ್‌ ಅವರು ನಮಸ್ಕರಿಸುವುದನ್ನು ಕಾಣಬಹುದು. ಸಿಂಗ್‌ ಅವರು ನಮಸ್ಕರಿಸುವುದನ್ನು ರಾಹುಲ್‌ ಗಾಂಧಿಯವರು ಗಮನಿಸಿಯೇ ಇಲ್ಲ. ಅದೇ ಸಂದರ್ಭದಲ್ಲಿ ಅವರು ಹಾರವನ್ನು ತೆಗೆಯುತ್ತಿರುವುದನ್ನು  ಫೋಟೋಗ್ರಾಫರ್‌ ಕ್ಲಿಕ್ಕಿಸಿದ್ದಾನೆ. ಆದರೆ ಇದನ್ನೇ ರಾಹುಲ್‌ ಗಾಂಧಿಯವರು ಮನಮೋಹನ ಸಿಂಗ್ ಅವರಿಗೆ ಅಗೌರವ ತೋರಿಸಿದರು ಎಂಬಂತೆ ಬಿಂಬಿಸಲಾಗಿದೆ. ಸಿಂಗ್‌ ಅವರು ನಮಸ್ಕರಿಸಿರುವುದು ಶಿಂಧೆಯವರಿಗೆ ಎಂಬುದು ಇಲ್ಲಿನ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ.

ಸೋನಿಯಾ ಗಾಂಧಿಯವರು ಮನಮೋಹನ ಸಿಂಗ್ ಅವರನ್ನು ಗೌರವಿಸುತ್ತಿಲ್ಲ ಎಂದು ಹರಿದಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆಯೂ ಇದೇ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸೋನಿಯಾ ಗಾಂಧಿಯವರ ಈ ವಿಡಿಯೋ ನೋಡಿದರೆ ಅವರು ಮನಮೋಹನಸಿಂಗ್ ಅವರನ್ನು ನಿರ್ಲಕ್ಷಿಸಿದ್ದಾರೆ ಎನಿಸುವುದಿಲ್ಲ. ಸನ್ನಿವೇಶ ಹಾಗೂ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ವಿಡಿಯೋವನ್ನು ಪೂರ್ಣ ವೀಕ್ಷಿಸಿದರೆ ಸೋನಿಯಾ ಗಾಂಧಿಯವರು ಇದೇ ಕಾರ್ಯಕ್ರಮದಲ್ಲಿ ಮನಮೋಹನ ಸಿಂಗ್ ಅವರಿಗೆ ನಮಸ್ಕರಿಸುತ್ತಿರುವುದನ್ನೂ ಕಾಣಬಹುದು.

ಕೃಪೆ: ಆಲ್ಟ್‌ ನ್ಯೂಸ್‌


ಇದನ್ನೂ ಓದಿರಿ: ಫ್ಯಾಕ್ಟ್ ಚೆಕ್: ಮೋದಿ ಕೊನೆಯ ಭರವಸೆಯೆಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿಲ್ಲ, ಇದು ಎಡಿಟ್ ಫೋಟೊ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here