ಬೆಂಗಳೂರಿನ 83 ವರ್ಷದ ಮಹಿಳೆಯೊಬ್ಬರಿಗೆ ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ವಂಚಕರು 1.24 ಕೋಟಿ ರೂಪಾಯಿ ವಂಚಿಸಿದ್ದಾರೆ. ವಂಚಕರ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡ ಸಂತ್ರಸ್ತೆ, ನಗರದ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ನಡುವೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯ ದೂರಿನ ಪ್ರಕಾರ, ವಂಚಕರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಮತ್ತು ಮುಂಬೈ ಪೊಲೀಸ್ ಅಧಿಕಾರಿಗಳಂತೆ ವರ್ತಿಇಸಿದ್ದಾರೆ. ಆಕೆಯ ಫೋನ್ ನಂಬರ್ ಒಂದರ ಮೂಲಕ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಬೆದರಿಸಿದ್ದರು.
ಆಕೆಯ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿಕೊಂಡು, ವಂಚಕರು ಅವರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿದ್ದಾರೆ. ಆಕೆಯ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು. ಮಹಿಳೆ ತನ್ನ ವಿರುದ್ಧದ ಆರೋಪಗಳನ್ನು ನಂಬಿ, ಹೀಗೆ ಒಟ್ಟು ₹1.24 ಕೋಟಿಗಳನ್ನು ಬಹು ಕಂತುಗಳಲ್ಲಿ ವರ್ಗಾಯಿಸಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಲ್ಲಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಅಕ್ಟೋಬರ್ 15 ರಿಂದ ನವೆಂಬರ್ 4 ರ ನಡುವೆ ವಂಚನೆ ಮಾಡಲಾಗಿದೆ.
ಎಫ್‌ಐಆರ್‌ನಲ್ಲಿ ಮಹಿಳೆಯು ವಂಚಕರಿಗೆ ಮಾಡಿದ ನಾಲ್ಕು ಪ್ರತ್ಯೇಕ ವಹಿವಾಟುಗಳನ್ನು ವಿವರಿಸಲಾಗಿದೆ. ಅಕ್ಟೋಬರ್ 23 ರಂದು ಖಾತೆಯಿಂದ ₹32 ಲಕ್ಷ, ಎರಡು ದಿನಗಳ ನಂತರ ಪ್ರತ್ಯೇಕ ಖಾತೆಯಿಂದ ₹50 ಲಕ್ಷ, ಅಕ್ಟೋಬರ್ 29 ರಂದು ₹32 ಲಕ್ಷ ಮತ್ತು ಅಕ್ಟೋಬರ್ 31 ರಂದು ₹10 ಲಕ್ಷ ಕಳುಹಿಸಿದ್ದಾರೆ.
ಹಣವನ್ನು ವರ್ಗಾವಣೆ ಮಾಡಿದ ನಂತರ ಎಲ್ಲ ಸಂವಹನಗಳನ್ನು ಕಡಿತಗೊಳಿಸಿದ ನಂತರವೇ ಮಹಿಳೆಗೆ ತಾನು ಆನ್‌ಲೈನ್ ವಂಚನೆಗೆ ಬಲಿಯಾಗಿದ್ದೇನೆ ಎಂದು ಅರಿತುಕೊಂಡಿದ್ದಾರೆ. ಪಿರ್ಯಾದಿದಾರರು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಅಧಿಕಾರಿಗಳು ಎಲ್ಲ ರೀತಿಯ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಮನಾರ್ಹವಾಗಿ, ಅಂತಹುದೇ ಘಟನೆಯೊಂದು ಇತ್ತೀಚೆಗೆ ವರದಿಯಾಗಿದೆ, ಅಲ್ಲಿ ಇನ್ನೊಬ್ಬ ಹಿರಿಯ ವ್ಯಕ್ತಿಯಿಂದ ‘ಡಿಜಿಟಲ್ ಅರೆಸ್ಟ್’ ಮೂಲಕ ₹10 ಲಕ್ಷ ವಂಚಿಸಿದ್ದರು.
ಇದನ್ನೂ ಓದಿ; 21 ನಕಲಿ ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿದ ಕೇಂದ್ರ ಸರ್ಕಾರ; ಅಗ್ರ ಸ್ಥಾನದಲ್ಲಿ ದೆಹಲಿ


