“ಗೌರವದಿಂದ ಬದುಕುವ ಹಕ್ಕು ಸೆರೆವಾಸದಲ್ಲಿರುವವರಿಗೂ ಅನ್ವಯಿಸುತ್ತದೆ”, ಒಂದು ವೇಳೆ ಈ ಹಕ್ಕು ಅವರಿಗೆ ನಿರಾಕರಣೆಯಾದರೆ ಅದು “ವಸಾಹತುಶಾಹಿ ಮತ್ತು ಪೂರ್ವ ವಸಾಹತುಶಾಹಿ ಕಾರ್ಯವಿಧಾನಗಳ ಪಳೆಯುಳಿಕೆಯಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಗುರುವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಈ ಅವಲೋಕನಗಳನ್ನು ಮಾಡಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ತೀರ್ಪು ಜಾತಿ-ಆಧಾರಿತ ತಾರತಮ್ಯವಾದ ದೈಹಿಕ ಕಾರ್ಮಿಕರ ವಿಭಜನೆ, ಬ್ಯಾರಕ್‌ಗಳ ಪ್ರತ್ಯೇಕತೆ ಮತ್ತು ಡಿನೋಟಿಫೈಡ್ ಬುಡಕಟ್ಟುಗಳ ಕೈದಿಗಳು ಮತ್ತು ಅಭ್ಯಾಸ ಅಪರಾಧಿಗಳ ವಿರುದ್ಧ ಪಕ್ಷಪಾತವನ್ನು ನಿಷೇಧಿಸಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 10 ರಾಜ್ಯಗಳ ಕೆಲವು ಆಕ್ಷೇಪಾರ್ಹ ಜೈಲು ಕೈಪಿಡಿ ನಿಯಮಗಳನ್ನು ಈ ತೀರ್ಪು ಅಸಂವಿಧಾನಿಕ ಎಂದು ಪರಿಗಣಿಸಿದೆ.
ಇದನ್ನೂ ಓದಿ: ಪುಣೆ | ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ; ಸ್ನೇಹಿತನಿಗೆ ಮೇಲೆ ಹಲ್ಲೆ
21 ನೇ ವಿಧಿಯ ಅಡಿಯಲ್ಲಿ ವ್ಯವಹರಿಸುವಾಗ, “ಗೌರವದಿಂದ ಬದುಕುವ ಹಕ್ಕು ಜೈಲಿನಲ್ಲಿರುವವರಿಗೂ ಅನ್ವಯಿಸುತ್ತದೆ ಎಂದು ತೀರ್ಪು ಹೇಳಿದೆ. ಕೈದಿಗಳಿಗೆ ಘನತೆಯನ್ನು ನೀಡದಿರುವುದು ವಸಾಹತುಶಾಹಿಗಳು ಮತ್ತು ಪೂರ್ವ ವಸಾಹತುಶಾಹಿ ಕಾರ್ಯವಿಧಾನಗಳ ಪಳೆಯುಳಿಕೆಯಾಗಿದೆ. ವಸಾಹತುಶಾಹಿಗಳ ಆಡಳಿತದ ದಬ್ಬಾಳಿಕೆಯ ವ್ಯವಸ್ಥೆಗಳನ್ನು ಸರ್ಕಾರದ ನಿಯಂತ್ರಣದಲ್ಲಿರುವವರನ್ನು ಅಮಾನವೀಯಗೊಳಿಸಲು ಮತ್ತು ಕೇಳುಮಟ್ಟಕ್ಕೆ ತರಲು ವಿನ್ಯಾಸಗೊಳಿಸಲಾಗಿದೆ ಎಂದು ತೀರ್ಪು ಹೇಳಿದೆ.
“ಸಂವಿಧಾನಪೂರ್ವ ಯುಗದ ನಿರಂಕುಶ ಪ್ರಭುತ್ವಗಳು ಜೈಲುಗಳನ್ನು ಬಂಧನದ ಸ್ಥಳಗಳಾಗಿ ಮಾತ್ರವಲ್ಲದೆ ತನ್ನ ಪ್ರಾಬಲ್ಯದ ಸಾಧನಗಳಾಗಿಯೂ ನೋಡಿದವು. ಈ ನ್ಯಾಯಾಲಯವು ಸಂವಿಧಾನವು ತಂದ ಬದಲಾದ ಕಾನೂನು ಚೌಕಟ್ಟಿನ ಮೇಲೆ ಕೇಂದ್ರೀಕರಿಸಿದ್ದು, ಕೈದಿಗಳು ಕೂಡಾ ಘನತೆಯ ಹಕ್ಕಿಗೆ ಅರ್ಹರು ಎಂದು ಗುರುತಿಸಿದೆ” ಎಂದು ತೀರ್ಪು ಉಲ್ಲೇಖಿಸಿದೆ.
ಸಂವಿಧಾನದ ಆರ್ಟಿಕಲ್ 14 ಸರ್ಕಾರವು ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆ ಅಥವಾ ಭಾರತದ ಪ್ರದೇಶದೊಳಗಿನ ಕಾನೂನುಗಳ ಸಮಾನ ರಕ್ಷಣೆಯನ್ನು ನಿರಾಕರಿಸಬಾರದು ಮತ್ತು ಸಮಾನತೆಯು ಸಾಂವಿಧಾನಿಕ ದೃಷ್ಟಿಕೋನದ ನಿರ್ಣಾಯಕ ಅಂಶವಾಗಿದೆ ಎಂದು ಹೇಳಿದೆ. ನಂತರ ತೀರ್ಪು ಜಾತಿ, ಜನಾಂಗ, ಧರ್ಮ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಭಾರತೀಯ ಸಂವಿಧಾನ 15 ನೇ ವಿಧಿಯ ಬಗ್ಗೆ ಉಲ್ಲೇಖಿಸಿದೆ.
ವಿಡಿಯೊ ನೋಡಿ: ‘ಅಂಬೇಡ್ಕರ್ ರಚಿಸಲಿದ್ದ ಸಂವಿಧಾನವನ್ನು ಗುರಿಯಾಗಿಸಿಕೊಂಡಿದ್ದವರ ಮೊದಲ ಗುಂಡು ಬಿದ್ದಿದ್ದು ಗಾಂಧಿ ಎದೆಗೆ’: ಎ ನಾರಾಯಣ


