ಈ ಶೈಕ್ಷಣಿಕ ವರ್ಷದ (2025-26) 6 ನೇ ಸೆಮಿಸ್ಟರ್‌ನಲ್ಲಿರುವ ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಕಡ್ಡಾಯ ಇಂಟರ್ನ್‌ಶಿಪ್ ಅವರನ್ನು ಕೆಲಸಕ್ಕೆ ಸಿದ್ಧಗೊಳಿಸುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಮ್ಮ ನಿರ್ಧಾರನ್ನು ಸಮರ್ಥಿಸಿಕೊಂಡಿದ್ದಾರೆ.
ಸಿ -25 ಪಠ್ಯಕ್ರಮದಲ್ಲಿ, ಉದ್ಯಮದಲ್ಲಿ ಅಥವಾ ಉದ್ಯಮದೊಂದಿಗೆ ಯೋಜನೆಯನ್ನು ಪೂರ್ಣಗೊಳಿಸಲು 13 ವಾರಗಳ ಇಂಟರ್ನ್‌ಶಿಪ್ ಕಡ್ಡಾಯವಾಗಿದೆ ಎಂದು ಇಲಾಖೆ ಪ್ರಕಟಿಸಿದೆ. ಪ್ರಸ್ತುತ, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಅಸ್ತಿತ್ವದಲ್ಲಿರುವ ಪಠ್ಯಕ್ರಮದಲ್ಲಿ ಇಂಟರ್ನ್‌ಶಿಪ್ ಐಚ್ಛಿಕವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಾವು ಕೈಗಾರಿಕೆಗಳೊಂದಿಗೆ ಸಮಾಲೋಚಿಸಿ ಸಿ -25 ಪಠ್ಯಕ್ರಮವನ್ನು ವಿನ್ಯಾಸಗೊಳಿಸಿದ್ದೇವೆ ಮತ್ತು ಚರ್ಚೆಯ ಸಮಯದಲ್ಲಿ, ಉದ್ಯಮ ಪ್ರತಿನಿಧಿಗಳು ಪ್ರಾಯೋಗಿಕ ಅನುಭವದ ಬಗ್ಗೆ ಒತ್ತಿ ಹೇಳಿದ್ದಾರೆ. ಆದ್ದರಿಂದ, ಇಂಟರ್ನ್‌ಶಿಪ್ ಕಡ್ಡಾಯಗೊಳಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಲಾಖೆಯು ಸಿ -25 ಪಠ್ಯಕ್ರಮದ ಕರಡನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ ಸೇರಿದಂತೆ ಪಾಲುದಾರರಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸಿದೆ. ರಾಜ್ಯದಲ್ಲಿ 43 ಅನುದಾನಿತ ಮತ್ತು 150 ಖಾಸಗಿ ಸೇರಿದಂತೆ 107 ಸರ್ಕಾರಿ ಪಾಲಿಟೆಕ್ನಿಕ್‌ಗಳಿವೆ. ಈ ಕಾಲೇಜುಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 50,000 ಕ್ಕಿಂತ ಹೆಚ್ಚಿವೆ.
ಹಿಂದಿನ ಬಿಜೆಪಿ ಸರ್ಕಾರವು C-20 ಪಠ್ಯಕ್ರಮವನ್ನು ಪರಿಚಯಿಸಿತ್ತು. ಈ ವೇಳೆ ಮೆಕ್ಯಾನಿಕಲ್ ಮತ್ತು ಸಿವಿಲ್ ಸೇರಿದಂತೆ ಕೆಲವು ಪ್ರಮುಖ ವಿಷಯಗಳನ್ನು ತೆಗೆದುಹಾಕಿದ್ದಕ್ಕಾಗಿ ಅಧ್ಯಾಪಕರಿಂದ ಟೀಕೆಗೆ ಗುರಿಯಾಗಿತ್ತು.
C-25 ಪಠ್ಯಕ್ರಮವು ಸಂವಹನ ಕೌಶಲ್ಯ, ಕೋಡಿಂಗ್ ಮತ್ತು ವೆಬ್ ಮತ್ತು ಅಪ್ಲಿಕೇಶನ್ ವಿನ್ಯಾಸದ ಮೇಲೆ ಕೇಂದ್ರೀಕರಿಸುತ್ತದೆ. ಪಾಲಿಟೆಕ್ನಿಕ್‌ನಲ್ಲಿ ಪರಿಸರ ವಿಜ್ಞಾನ ಮತ್ತು ಸಂವಿಧಾನ ಅಧ್ಯಯನವು ಕೋರ್ಸ್‌ನ ಮೊದಲ ವರ್ಷದಲ್ಲಿ ಕಡ್ಡಾಯ ವಿಷಯಗಳಾಗಿವೆ.
ಇದನ್ನೂಓದಿ: 54 ಗ್ರಾಮಗಳ ಮುಸ್ಲಿಂ ಹೆಸರು ಮರುನಾಮಕರಣ: ಇಸ್ಲಾಂ ನಗರವನ್ನು ಈಶ್ವರಪುರವೆಂದು…
54 ಗ್ರಾಮಗಳ ಮುಸ್ಲಿಂ ಹೆಸರು ಮರುನಾಮಕರಣ: ಇಸ್ಲಾಂ ನಗರವನ್ನು ಈಶ್ವರಪುರವೆಂದು…


