ಉತ್ತರ ಪ್ರದೇಶಕ್ಕೆ ಹಿಂತಿರುಗಿರುವ ವಲಸಿಗ ಕಾರ್ಮಿಕರ ಮೇಲೆ “ಸೋಂಕುನಿವಾರಕ” ಸಿಂಪಡಿಸುತ್ತಿರುವ ಆಘಾತಕಾರಿ ವೀಡಿಯೋವೊಂದು ಹೊರಬಿದ್ದಿದೆ.
ಈ ವೀಡಿಯೊವನ್ನು ಬರೇಲಿ ಜಿಲ್ಲೆಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಲಕ್ನೋದಿಂದ ಸುಮಾರು 270 ಕಿ.ಮೀ. ದೂರದಿಂದ ವಲಸೆ ಹೊರಟವರ ತಂಡಕ್ಕೆ ವಿಶೇಷ ಬಸ್‌ಗಳನ್ನು ವ್ಯವಸ್ಥೆಗೊಳಿಸಿದ ನಂತರ ವಾರಾಂತ್ಯದಲ್ಲಿ ಯುಪಿಗೆ ಮರಳಿದ್ದಾರೆ. ಸೋಂಕುನಿವಾರಕವನ್ನು ಹಾಕುತ್ತಿರುವ ವಿಡಿಯೋದಲ್ಲಿ ಕೆಲವು ಪೊಲೀಸರು ಇದ್ದಾರೆ. ವಿಡಿಯೊ ಕ್ಲಿಪ್‌ನಲ್ಲಿ ಒಬ್ಬ ಮನುಷ್ಯ “ನಿಮ್ಮ ಕಣ್ಣುಗಳನ್ನು ಹಾಗೂ ಮಕ್ಕಳ ಕಣ್ಣುಗಳನ್ನು ಸಹ ಮುಚ್ಚಿ” ಎಂದು ಹೇಳುವುದನ್ನು ಕೇಳಬಹುದು.
ವಿಡಿಯೊ ಕ್ಲಿಪ್ ಜಿಲ್ಲಾಡಳಿತದ ಟೀಕೆಗೆ ಕಾರಣವಾದ ನಂತರ, ಅಧಿಕಾರಿಯೊಬ್ಬರು “ವಲಸಿಗರಿಗೆ ಕ್ಲೋರಿನ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಲಾಗಿತ್ತು … ಯಾವುದೇ ರಾಸಾಯನಿಕ ದ್ರಾವಣವನ್ನು ಬಳಸಲಾಗಿಲ್ಲ. ನಾವು ಅವರ ಕಣ್ಣುಗಳನ್ನು ಮುಚ್ಚಿಡಲು ಕೇಳಿದೆವು” ಎಂದು ಹೇಳಿದ್ದಾರಲ್ಲದೆ, “ಇದರಿಂದಾಗಿ ನಾವು ಅಮಾನವೀಯರೆಂದು ಅರ್ಥವಲ್ಲ … ಎಲ್ಲರನ್ನೂ ಸ್ವಚ್ಛಗೊಳಿಸುವುದು ಮುಖ್ಯವಾಗಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಜನರು ಹಿಂತಿರುಗಿದ್ದರಿಂದ ಜನರ ಸಂಖ್ಯೆ ಭಾರಿ ವಿಪರೀತವಾಗಿದೆ. ಆದ್ದರಿಂದ ನಮಗೆ ಉತ್ತಮವೆನಿಸಿದ್ದನ್ನು ನಾವು ಮಾಡಿದ್ದೇವೆ” ಎಂದು ಹೇಳಿದ್ದಾರೆ.
ಕ್ಲಿಪ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬರೇಲಿ ಜಿಲ್ಲಾಧಿಕಾರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಮುಖ್ಯಮಂತ್ರಿಗಳ ಕಚೇರಿಯ ಮೇಲ್ವಿಚಾರಣೆಯಲ್ಲಿ, ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆ ಮತ್ತು ಅಗ್ನಿಶಾಮಕ ದಳದ ತಂಡವನ್ನು ಬಸ್ಸುಗಳನ್ನು ಸ್ವಚ್ಛಗೊಳಿಸಲು ಕೇಳಲಾಯಿತು … ಆದರೆ ಅವರು ಹೆಚ್ಚಿನ ಜನವಿದ್ದ ಕಾರಣ ಇದನ್ನು ಮಾಡಿದರು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ” ಎಂದು -ಬರೆದಿದ್ದಾರೆ.
इस वीडियो की पड़ताल की गई, प्रभावित लोगों का सीएमओ के निर्देशन में उपचार किया जा रहा है। बरेली नगर निगम एवं फायर ब्रिगेड की टीम को बसों को सैनेटाइज़ करने के निर्देश थे, पर अति सक्रियता के चलते उन्होंने ऐसा कर दिया। सम्बंधित के विरुद्ध कार्रवाई के निर्देश दिए गए हैं। https://t.co/y8TmuCNyu5
— District Magistrate (@dmbareilly) March 30, 2020
ಬರೇಲಿಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಚಂದ್ರ ಮೋಹನ್ ಶರ್ಮಾ “ಸೋಂಕುನಿವಾರಕಗಳಲ್ಲಿ ರಾಸಾಯನಿಕಗಳಿವೆ. ಇದನ್ನು ಮನುಷ್ಯರ ಮೇಲೆ ಬಳಸಬಾರದು. ಕಣ್ಣುಗಳ ಸಂಪರ್ಕಕ್ಕೆ ಬರಬಾರದು. ಈ ವಿಡಿಯೋವನ್ನು ತನಿಖೆ ಮಾಡಲಾಗುತ್ತಿದೆ. ಹಿರಿಯರಿಂದ ವರದಿಯನ್ನು ಕೋರಲಾಗಿದೆ” ಎಂದು ಸುದ್ದಿಗಾರರಿಗೆ ಹೇಳಿದ್ದಾರೆ.
ವಿಡಿಯೊ ಕ್ಲಿಪ್ ಬಗ್ಗೆ ಪ್ರತಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದು, ಈ ಕ್ರಮವನ್ನು “ಅಮಾನವೀಯ” ಎಂದು ಕರೆದಿದ್ದಾರೆ. “ನಾನು ಯುಪಿ ಸರ್ಕಾರಕ್ಕೆ ಮನವಿ ಮಾಡುತ್ತೇನೆ … ಈ ಬಿಕ್ಕಟ್ಟಿನ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡುತ್ತಿದ್ದೇವೆ ಎಂದು ಯುಪಿ ಸರ್ಕಾರ ಹೇಳುತ್ತಿದೆ. ದಯವಿಟ್ಟು ಇಂತಹ ಅಮಾನವೀಯ ಕೃತ್ಯಗಳಲ್ಲಿ ತೊಡಗಬೇಡಿ. ಕಾರ್ಮಿಕರು ಈಗಾಗಲೇ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಬೇಡಿ. ಇದು ಅವರನ್ನು ರಕ್ಷಿಸುವುದಿಲ್ಲ … ಬದಲಿಗೆ ಇದು ಅವರ ಆರೋಗ್ಯಕ್ಕೆ ಹಾನಿ ಮಾಡುತ್ತದೆ “ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
यूपी सरकार से गुजारिश है कि हम सब मिलकर इस आपदा के खिलाफ लड़ रहे हैं लेकिन कृपा करके ऐसे अमानवीय काम मत करिए।
मजदूरों ने पहले से ही बहुत दुख झेल लिए हैं। उनको केमिकल डाल कर इस तरह नहलाइए मत। इससे उनका बचाव नहीं होगा बल्कि उनकी सेहत के लिए और खतरे पैदा हो जाएंगे। pic.twitter.com/ftovaFHR5q
— Priyanka Gandhi Vadra (@priyankagandhi) March 30, 2020
ಸರಣಿ ಟ್ವೀಟ್‌ಗಳಲ್ಲಿ, ಯುಪಿ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ “ಈ ಕಠಿಣ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ, ದೇಶಾದ್ಯಂತ ಅನ್ಯಾಯದ ಬಗ್ಗೆ ಹಲವಾರು ಚಿತ್ರಗಳು ಹೊರಬಂದಿವೆ … ಆದರೆ ಬರೇಲಿಯಲ್ಲಿ ವಲಸೆ ಬಂದವರ ಮೇಲೆ ಸೋಂಕುನಿವಾರಕಗಳನ್ನು ಸಿಂಪಡಿಸುವುದು ಸಂಪೂರ್ಣ ಕ್ರೌರ್ಯಕ್ಕೆ ಒಂದು ಉದಾಹರಣೆಯಾಗಿದೆ, ಅನ್ಯಾಯ. ಸರ್ಕಾರ ಕೂಡಲೇ ಗಮನ ಹರಿಸಬೇಕು” ಎಂದು ಹರಿಹಾಯ್ದಿದ್ದಾರೆ.
1. देश में जारी जबर्दस्त लाॅकडाउन के दौरान जनउपेक्षा व जुल्म-ज्यादती की अनेकों तस्वीरें मीडिया में आम हैं परन्तु प्रवासी मजदूरों पर यूपी के बरेली में कीटनााशक दवा का छिड़काव करके उन्हें दण्डित करना क्रूरता व अमानीवयता है जिसकी जितनी भी निन्दा की जाए कम है। सरकार तुरन्त ध्यान दे।
— Mayawati (@Mayawati) March 30, 2020
ಕೊರೊನ ವೈರಸ್ ವಿರುದ್ಧ ಹೋರಾಡಲು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ ನಂತರ ದೇಶದ ವಿವಿಧ ಭಾಗಗಳಲ್ಲಿ ಲಕ್ಷಾಂತರ ವಲಸಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಅಲ್ಲದೆ ದೇಶದಲ್ಲಿ 1,000 ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ, ಕನಿಷ್ಠ 29 ಮಂದಿ ಸಾವನ್ನಪ್ಪಿದ್ದಾರೆ.
ಹಲವರು ವಲಸಿಗ ಕಾರ್ಮಿಕರು ಕಾಲ್ನಡಿಗೆಯಲ್ಲಿ ನೂರಾರು ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದಾರೆ. ನಿನ್ನೆ ದೆಹಲಿಯಿಂದ 200 ಕಿ.ಮೀ ನಡೆದು 38 ವರ್ಷದ ಯುವಕ ಯುಪಿ ಹೆದ್ದಾರಿಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.


