ಕೊರೊನ ವೈರಸ್ ಲಾಕ್‌ಡೌನ್‌ನಿಂದಾಗಿ ಪ್ರಮುಖ ಆರ್ಥಿಕತೆ ಕುಸಿದ ಕಾರಣ ಅಂತರರಾಷ್ಟ್ರೀಯ ತೈಲ ಬೆಲೆಯು 17 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ತೈಲದ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಭಾರತದಲ್ಲಿ ಕಚ್ಚಾ ತೈಲ ಆಮದು ವೆಚ್ಚ ಸರಾಸರಿ ಐದನೇ ಒಂದು ಭಾಗದಷ್ಟು ಕುಸಿದಿದೆ. ಭಾರತದಲ್ಲಿ ಮಾರ್ಚ್ 16 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಥಾಸ್ಥಿತಿ ಕಾಪಾಡಲಾಗಿದೆ. ಕೊರೊನ ವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸಲು ಸರ್ಕಾರ ಇನ್ನಷ್ಟು ಪ್ರಯತ್ನಿಸಿದ ಕೂಡಲೇ ಮತ್ತೂ ಅಬಕಾರಿ ಸುಂಕ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

ಬ್ರೆಂಟ್ ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ 6.62% ರಷ್ಟು ಇಳಿದು ಬ್ಯಾರಲ್‌ಗೆ 23.28 ಡಾಲರ್‌ರಷ್ಟು ತಲುಪಿದೆ. ತೈಲ ಬೆಲೆಯ ಮತ್ತೊಂದು ಮಾನದಂಡವಾದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ಬೆಲೆ 5% ಕ್ಕಿಂತ ಕಡಿಮೆಯಾಗಿ ಬ್ಯಾರೆಲ್‌ಗೆ 20 ಡಾಲರಿನಷ್ಟು ಇಳಿದಿದೆ.

ಕೊರೊನ ವೈರಸ್ ಕಾರಣದಿಂದಾಗಿ ತೈಲದ ಬೇಡಿಕೆ ಕಡಿಮೆಯಾಗುವುದರ ಜೊತೆಗೆ, ಸೌದಿ ಅರೇಬಿಯಾ ಮತ್ತು ರಷ್ಯಾ ನಡುವಿನ ತೈಲ ಬೆಲೆಯ ಮೇಲಿನ ಸಂಘರ್ಷವೂ ಕಚ್ಚಾ ಬೆಲೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರಕ್ಕೆ ಇದು ಅನಿರೀಕ್ಷಿತ ಲಾಭವಾಗಿದೆ.

ಪೆಟ್ರೋಲಿಯಂ ರಿಫೈನರ್‌ ದಾಸ್ತಾನುಗಳ ನಷ್ಟವನ್ನು ಸರಿದೂಗಿಸಲು ಮಾರ್ಚ್ 16ರಿಂದ ಭಾರತದಲ್ಲಿ ವಾಹನ ಇಂಧನಗಳ ಬೆಲೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಮತ್ತು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನ ವೈರಸ್ ವಿರುದ್ಧದ ಹೋರಾಟಕ್ಕೆ ಧನಸಹಾಯ ನೀಡುವ ಸಲುವಾಗಿ ಆದಾಯವನ್ನು ಹೆಚ್ಚಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ಚಿಂತಿಸುತ್ತಿದೆ.

ಮಾರ್ಚ್ 14 ರಂದು ಸರ್ಕಾರ ಎರಡು ಇಂಧನಗಳ ಅಬಕಾರಿ ಸುಂಕವನ್ನು ಲೀಟರ್ 3 ರೂಪಾಯಿಯಂತೆ ಏರಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 1 ರೂ ಹೆಚ್ಚಳ ಮಾಡುವುದರಿಂದ ಸರ್ಕಾರಕ್ಕೆ ವಾರ್ಷಿಕ ಆದಾಯ 14,500 ಕೋಟಿ ರೂ. ಹೆಚ್ಚುವರಿ ಆಗಲಿದೆ.

ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಸರಾಸರಿ ಕಚ್ಚಾ ತೈಲ ಖರೀದಿ ಬೆಲೆ ಶುಕ್ರವಾರ ಬ್ಯಾರೆಲ್‌ಗೆ 1,805.22 ರೂ.ಗೆ ತೀವ್ರವಾಗಿ ಕುಸಿದಿದೆ. ಮಾರ್ಚ್ 16 ರಂದು ತೈಲ ಸಂಸ್ಕರಣಕಾರರು ಕೊನೆಯದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ಲೀಟರ್‌ಗೆ 16 ಪೈಸೆ ಮತ್ತು ಲೀಟರ್‌ಗೆ 15 ಪೈಸೆಯಷ್ಟು ಬೆಲೆಯನ್ನು ಕಡಿತಗೊಳಿಸಿದ್ದಾರೆ.

ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 69.59 ರೂ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ 62.29 ರೂಪಾಯಿ.

“ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಸನ್ನಿಹಿತವಾಗಿದೆ ಮತ್ತು ಅದರ ಅಂತಿಮ ನಿರ್ಧಾರವನ್ನು ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತದೆ” ಎಂದು ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here