ಭಾರತದ ಮೊದಲ ಮಹಿಳಾ ನೇತೃತ್ವದ ಗಿಗ್ ಕಾರ್ಮಿಕರ ಒಕ್ಕೂಟ ದೀಪಾವಳಿಯಂದು ರಾಷ್ಟ್ರವ್ಯಾಪಿ ಡಿಜಿಟಲ್ ಮುಷ್ಕರಕ್ಕೆ ಕರೆ ನೀಡಿದೆ. ಆನ್‌ಲೈನ್ ಡೆಲೆವೆರಿ ಮಾಡುವ ಆಪ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಈ ಹೋರಾಟವು ದೇಶದ ಗಮನ ಸೆಳೆದಿದೆ. ಗಿಗ್ ಕಾರ್ಮಿಕರಿಂದ
ಗಿಗ್ & ಪ್ಲಾಟ್‌ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್ (GIPSWU) 2024ರ ಅಕ್ಟೋಬರ್ 31ರಂದು ಮುಷ್ಕರ ನಡೆಯಲಿದೆ ಎಂದು ಘೋಷಿಸಿದೆ. ಅಂದು ಗಿಗ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡುವಂತೆ ಮತ್ತು ಪ್ರತಿಭಟನಾ ಸಂದೇಶಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಲು ಸಂಘಟನೆಯು ಯೋಜಿಸುತ್ತಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗಿಗ್ ಕಾರ್ಮಿಕರನ್ನು ನೌಕರರನ್ನಾಗಿ ಗುರುತಿಸುವುದು, ಕನಿಷ್ಠ ವೇತನ ಜಾರಿಗೊಳಿಸುವುದು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸೇರ್ಪಡೆಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಒಕ್ಕೂಟವು ಮುಂದಿಟ್ಟಿದೆ ಎಂದು ಯೂನಿಯನ್ ಮುಖಂಡರು ಶನಿವಾರ ಹೇಳಿದ್ದಾರೆ.
“ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ. ಕಷ್ಟಪಟ್ಟು ದುಡಿಯುತ್ತೇವೆಯಾದರೂ, ಅದಕ್ಕೆ ಪ್ರತಿಯಾಗಿ ಏನನ್ನೂ ಪಡೆಯಲಾಗುತ್ತಿಲ್ಲ. ಬಯಸಿದಾಗ ಕೆಲಸ ಮಾಡಲು ನಾವು ಸ್ವತಂತ್ರರು ಎಂದು ಅವರು ಹೇಳುತ್ತಾರೆ, ಆದರೆ ಅದು ಕೇವಲ ಸುಳ್ಳು” ಎಂದು ಬೆಂಗಳೂರಿನ GIPSWU ನಾಯಕಿ ಸೆಲ್ವಿ ಹೇಳಿದ್ದಾರೆ.
ಕಾರ್ಮಿಕರನ್ನು ಕಂಪನಿಯ ಉದ್ಯೋಗಿಗಳೆಂದು ಗುರುತಿಸುವುದು, ಶಾಸನಬದ್ಧ ಕನಿಷ್ಠ ವೇತನವನ್ನು ಜಾರಿಗೊಳಿಸುವುದು ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನಗಳನ್ನು ಸ್ಥಾಪಿಸುವ ಬೇಡಿಕೆಯನ್ನು ಒಕ್ಕೂಟವು ಮುಂದಿಟ್ಟಿದೆ. ಜೊತೆಗೆ ಸಾಮೂಹಿಕ ಚೌಕಾಸಿಗೆ ತಮ್ಮ ಹಕ್ಕನ್ನು ಅಂಗೀಕರಿಸಲು ಸಹ ಒಕ್ಕೂಟ ಬಯಸಿದೆ.
ಕಾರ್ಮಿಕ ಕಾನೂನುಗಳ ಮೂಲಕ ಗಿಗ್ ಆರ್ಥಿಕತೆಯಲ್ಲಿ ಉದ್ಯೋಗವನ್ನು ನಿಯಂತ್ರಿಸಲು ಹಾಗೂ ಇಪಿಎಫ್ ಮತ್ತು ಪಿಂಚಣಿ ಯೋಜನೆಗಳು ಸೇರಿದಂತೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ವಿಸ್ತರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು GIPSWU ಒತ್ತಾಯಿಸಿದೆ.
ಮಾತೃತ್ವ ಪ್ರಯೋಜನಗಳ ಕಾಯಿದೆಯನ್ನು ವಿಸ್ತರಿಸಿ ಗಿಗ್ ಕಾರ್ಮಿಕರನ್ನು ಅದರಲ್ಲಿ ಒಳಗೊಳ್ಳುವಂತೆ ಒಕ್ಕೂಟವು ಒತ್ತಾಯಿಸುತ್ತಿದೆ.
“ದೀಪಾವಳಿಯನ್ನು ಇತರರು ಪಟಾಕಿ ಮೂಲಕ ಸಂತೋಷದಿಂದ ಆಚರಿಸುತ್ತಿದ್ದರೆ, ನಾವು ನಮ್ಮದೇ ರೀತಿಯ ಶಬ್ದವನ್ನು ಮಾಡುತ್ತಿದ್ದೇವೆ. ಇದು ನಮ್ಮ ಹೋರಾಟಗಳನ್ನು ಪ್ರತಿಧ್ವನಿಸುವ ಪ್ರತಿಭಟನೆಯಾಗಿದೆ” ಎಂದು ಮಹಾರಾಷ್ಟ್ರದ GIPSWU ನಾಯಕಿ ನಿಶಾ ಪನ್ವಾರ್ ಹೇಳಿದ್ದಾರೆ.
ಇದನ್ನೂ ಓದಿ: ದೇಶದಾದ್ಯಂತ ಉತ್ತಮ ಮುಂಗಾರು ಮಳೆಯಾದರೂ ಆಹಾರ ಧಾನ್ಯಗಳ ಬೆಲೆ ಏರಿಕೆ!


