ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದರು ಸೋಮವಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಮತ್ತು ಹಿಂದಿ ಹೇರಿಕೆಯನ್ನು ವಿರೊಧಿಸಿ ಲೋಕಸಭೆಯಲ್ಲಿ ಧ್ವನಿ ಎತ್ತಿದ್ದರು. ಇದರಿಂದ, ಬಜೆಟ್ ಅಧಿವೇಶನದ ಎರಡನೇ ಹಂತ ಪ್ರಾರಂಭವಾದ ನಂತರ ಮಧ್ಯಾಹ್ನ 12 ಗಂಟೆಯವರೆಗೆ ಸದನವನ್ನು ಮುಂದೂಡಬೇಕಾಯಿತು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ ಸಂಸದರು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು. ಪ್ರಧಾನ್ ತಮ್ಮ ಕೆಲವು ಹೇಳಿಕೆಗಳನ್ನು ಹಿಂತೆಗೆದುಕೊಂಡರು. ಆದರೆ, ಡಿಎಂಕೆ ಸಂಸದೆ ಕನಿಮೋಳಿ ಅವರು ಪದಗಳ ಆಯ್ಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅವುಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.
ಡಿಎಂಕೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ, ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಪ್ರಧಾನ್ ಆರೋಪಿಸಿದರು. ತ್ರಿಭಾಷಾ ನೀತಿಯ ಕುರಿತು ತಮಿಳುನಾಡು ಸರ್ಕಾರದ ನಿಲುವನ್ನು ಅವರು ಟೀಕಿಸಿದರು. ಎನ್ಇಪಿಗೆ ಹೊಂದಿಕೆಯಾಗುವ ಕೇಂದ್ರ ಬೆಂಬಲಿತ ಯೋಜನೆಗಳಿಗೆ ಡಿಎಂಕೆ ವಿರೋಧವು ತಮಿಳುನಾಡು ವಿದ್ಯಾರ್ಥಿಗಳಿಗೆ ಹಾನಿಕಾರಕವಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಮತ್ತು ಡಿಎಂಕೆ ಸಂಸದ ದಯಾನಿಧಿ ಮಾರನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾರನ್ ಅವರಿಗೆ ಬಿರ್ಲಾ ಅವರು ಹೇಳುತ್ತಿರುವುದು ದಾಖಲೆಯಲ್ಲಿಲ್ಲ ಎಂದು ಹೇಳಿದ್ದರು. “ನಿಮ್ಮ ಸ್ಥಾನಕ್ಕೆ ಹೋಗಿ ಅದನ್ನು ದಾಖಲೆಯಲ್ಲಿ ಹೇಳಿ, ನಾನು ಈಗಲೇ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದರು, ಮಾರನ್ ನಮಗೆಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷ ಸ್ಥಾನಕ್ಕೆ ಅಗೌರವ ತೋರಿದ ಡಿಎಂಕೆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನಿರ್ಣಯ ಮಂಡಿಸುವ ಮೊದಲು ಸದನದ ಅಭಿಪ್ರಾಯವನ್ನು ನಿರ್ಣಯಿಸುವುದಾಗಿ ಹೇಳಿದರು, ಮಾರನ್ ಅವರ ನಡವಳಿಕೆಯನ್ನು ಟೀಕಿಸಿದರು.
ತ್ರಿಭಾಷಾ ನೀತಿ ಸ್ವೀಕಾರಾರ್ಹವಲ್ಲದ ಕಾರಣ ಎನ್‌ಇಪಿಯೊಂದಿಗೆ ನಮಗೆ ಸಮಸ್ಯೆಗಳಿವೆ ಎಂದು ಕನಿಮೋಳಿ ಹೇಳಿದರು. “ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಎನ್‌ಇಪಿಯೊಂದಿಗಿನ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಪ್ರಧಾನ್ ಅವರಿಗೆ ಪತ್ರ ಬರೆದು, ಹಣ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ” ಎಂದರು.
ತಮಿಳುನಾಡಿಗೆ ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಎನ್‌ಇಪಿಯನ್ನು ಸಂಪೂರ್ಣವಾಗಿ ಅನುಮೋದಿಸಲು ರಾಜ್ಯ ನಿರಾಕರಿಸಿದ್ದಕ್ಕಾಗಿ ಹಿಂದಿ ಹೇರಿಕೆ ಬಗ್ಗೆ ವಿವಾದಕ್ಕೆ ಕಾರಣವಾಯಿತು.
ಹಣ ನೀಡದೇ ಇರುವುದಕ್ಕೆ ಕೇಂದ್ರ ನೀಡಿರುವ ಕಾರಣವನ್ನು ಸ್ಟಾಲಿನ್ ಖಂಡಿಸಿ, ತಮಿಳುನಾಡಿನ ಮೇಲೆ ಹಿಂದಿ ಹೇರಿಕೆ ಮಾಡುವ ಪ್ರಯತ್ನ ಎಂದು ಕರೆದರು.
ಭಾನುವಾರ ಚೆನ್ನೈನಲ್ಲಿ ನಡೆದ ಡಿಎಂಕೆ ಸಂಸದರ ಸಭೆಯ ಅಧ್ಯಕ್ಷತೆಯನ್ನು ಸ್ಟಾಲಿನ್ ವಹಿಸಿದ್ದರು. ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆಯು ದಕ್ಷಿಣ ಮತ್ತು ಪೂರ್ವ ರಾಜ್ಯಗಳಾದ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆಗೆ ಕಳುಹಿಸುವ ಸಂಸದರ ಸಂಖ್ಯೆಯನ್ನು ಮರು ವ್ಯಾಖ್ಯಾನಿಸಲು 2026 ಕ್ಕೆ ಡಿಎಂಕೆ ಸಂಸದರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಈ ಪ್ರಕ್ರಿಯೆಯಿಂದ ಲೋಕಸಭೆಯ ಬಲ 668 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಉತ್ತರ ಪ್ರದೇಶದ ಸದಸ್ಯರ ಸಂಖ್ಯೆ 80 ರಿಂದ 143 ಕ್ಕೆ ಏರಿಕೆಯಾಗುವ ನಿರೀಕ್ಷೆಯಿತ್ತು. ತಮಿಳುನಾಡಿನ ಸದಸ್ಯರ ಸಂಖ್ಯೆ 39 ರಿಂದ ಕೇವಲ 49 ಕ್ಕೆ ಏರಿಕೆಯಾಗಬಹುದು. ಆದರೆ, ದಕ್ಷಿಣ ರಾಜ್ಯಗಳು ನ್ಯಾಯಯುತವಾದ ಸ್ಥಾನಗಳನ್ನು ಪಡೆಯುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಎನ್‌ಇಪಿ-ಕ್ಷೇತ್ರ ಪುನರ್‌ವಿಂಗಡಣೆ ನಿರ್ಣಯದ ಕುರಿತು ಸಭೆ ನಡೆಸಿದ ಡಿಎಂಕೆ ಸಂಸದರು


