HomeಮುಖಪುಟIIFA 2025 | ವಿವಿಧ ವಿಭಾಗಗಳಲ್ಲಿ 'ಲಾಪತಾ ಲೇಡಿಸ್' ಚಿತ್ರಕ್ಕೆ ಪ್ರಶಸ್ತಿ

IIFA 2025 | ವಿವಿಧ ವಿಭಾಗಗಳಲ್ಲಿ ‘ಲಾಪತಾ ಲೇಡಿಸ್’ ಚಿತ್ರಕ್ಕೆ ಪ್ರಶಸ್ತಿ

- Advertisement -
- Advertisement -

ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಕಿರಣ್ ರಾವ್ ನಿರ್ದೇಶನದ ಚಲನಚಿತ್ರ ‘ಲಾಪತಾ ಲೇಡೀಸ್’ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ (ಐಐಎಫ್‌ಎ-ಐಫಾ) 2025ರಲ್ಲಿ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಭಾನುವಾರ (ಮಾ.9) ಜೈಪುರದಲ್ಲಿ ನಡೆದ ಸಮಾರಂಭದಲ್ಲಿ ‘ಅತ್ಯುತ್ತಮ ಚಿತ್ರ’ ಮತ್ತು ‘ಅತ್ಯುತ್ತಮ ನಿರ್ದೇಶನ’ ಸೇರಿದಂತೆ 10 ಪ್ರಶಸ್ತಿಗಳನ್ನು ಲಾಪತಾ ಲೇಡಿಸ್ ತಂಡ ಗೆದ್ದುಕೊಂಡಿದೆ.

ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದ್ದ ಲಾಪತಾ ಲೇಡಿಸ್ ಐಫಾದ ಎಲ್ಲಾ ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ‘ಕಿರಣ್ ರಾವ್ ಅತ್ಯುತ್ತಮ ನಿರ್ದೇಶಕಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಚಿತ್ರದಲ್ಲಿ ಕಳೆದುಹೋದ ವಧುವಿನ ಪಾತ್ರ ಮಾಡಿರುವ ನಿತಾಂಶಿ ಗೋಯೆಲ್ ಪ್ರಮುಖ ಪಾತ್ರದಲ್ಲಿ (ಮಹಿಳೆ) ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರಶಸ್ತಿಯೊಂದಿಗೆ ‘ಲಾಪತಾ ಲೇಡಿಸ್’ ಚಿತ್ರ ತಂಡ  PC : x.com/IIFA

“ಲಾಪತಾ ಲೇಡೀಸ್’ ನಂತಹ ಚಿತ್ರಕ್ಕಾಗಿ ಪ್ರಶಸ್ತಿ ಗೆಲ್ಲುವುದು ಅಪರೂಪದ ಸೌಭಾಗ್ಯ. ಈ ರೀತಿಯ ಚಿತ್ರವನ್ನು ನಿರ್ಮಿಸುವುದೇ ಒಂದು ಅಪರೂಪದ ಸೌಭಾಗ್ಯ. ಈ ರಾತ್ರಿ ಸ್ಮರಣೀಯವಾದದ್ದು” ಎಂದು ಭಾನುವಾರ ರಾತ್ರಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಕಿರಣ್ ರಾವ್ ಹೇಳಿದ್ದಾರೆ.

“ನಿಮ್ಮ ಚಿತ್ರವನ್ನು ನಾವು ಒಮ್ಮೆ ಅಲ್ಲ, ಹಲವು ಬಾರಿ ನೋಡಿದ್ದೇವೆ ಎಂದು ಹೇಳುವ ಜನರ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ. ಒಬ್ಬರು ಚಲನಚಿತ್ರ ನಿರ್ಮಾಪಕರು ಬದುಕುವುದೇ ಇದಕ್ಕಾಗಿಯೇ. ಆದ್ದರಿಂದ ನಮ್ಮ ಚಲನಚಿತ್ರಗಳನ್ನು ನೋಡಿದ್ದಕ್ಕಾಗಿ ಧನ್ಯವಾದಗಳು” ಎಂದಿದ್ದಾರೆ.

‘ಲಾಪತಾ ಲೇಡಿಸ್’ ಚಿತ್ರದ ನಿರ್ದೇಶಕಿ ಕಿರಣ್ ರಾವ್   PC : x.com/IIFA

ಬಾಲಿವುಡ್ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಅವರು ‘ಭೂಲ್ ಭುಲೈಯಾ 3′ ಚಿತ್ರಕ್ಕಾಗಿ ಪ್ರಮುಖ ಪಾತ್ರದಲ್ಲಿ (ಪುರುಷ) ಅತ್ಯುತ್ತಮ ಅಭಿನಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕರಣ್ ಜೋಹರ್ ಅವರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿದ್ದ ನಟ ಆರ್ಯನ್, “ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರಿಂದ ಫ್ರಾಂಚೈಸಿಯನ್ನು ವಹಿಸಿಕೊಂಡಾಗ ಜನರು ತನ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು” ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಹೇಳಿದ್ದಾರೆ.

“ಭೂಲ್ ಭುಲೈಯಾ’ ಚಿತ್ರದ ನಟನೆಯು ಸವಾಲುಗಳಿಂದ ಕೂಡಿದ್ದ ಪ್ರಯಾಣವಾಗಿತ್ತು. ಆರಂಭದಿಂದಲೂ, ನಾನು ‘ಭೂಲ್ ಭುಲೈಯಾ 2’ಗೆ ಆಯ್ಕೆಯಾದಾಗ, ಈ ಚಿತ್ರವನ್ನು ಮುಂದುವರೆಸಲು ಸಾಧ್ಯವಾಗುತ್ತದೆಯೇ? ಎಂಬ ಹಲವು ಪ್ರಶ್ನೆಗಳು ನನ್ನಲ್ಲಿ ಎದ್ದಿತ್ತು. ಭೂಲ್ ಭುಲೈಯಾ 3ರ ಚಿತ್ರೀಕರಣದ ಸಮಯದಲ್ಲಿಯೂ ಇದೇ ರೀತಿಯ ಪ್ರಶ್ನೆಗಳು ನನ್ನಲ್ಲಿ ಮೂಡಿದ್ದವು” ಎಂದಿದ್ದಾರೆ.

ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಕಾರ್ತಿಕ್ ಆರ್ಯನ್  PC : x.com/IIFA

“ಬಾಲ್ಯದಲ್ಲಿ ದೂರದರ್ಶನದಲ್ಲಿ ಐಫಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೋಡುತ್ತಿದ್ದೆ. ಆದರೆ, ನಾನೇ ಹೋಗಿ ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ನಟಿ ನಿತಾಂಶಿ ಗೋಯೆಲ್ ಭಾವುಕರಾದರು.

“ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸುವ ಚಿತ್ರದ ಭಾಗವಾಗುವುದು ಯಾರಿಗಾದರೂ ಒಂದು ಕನಸಾಗಿರುತ್ತದೆ. ನನಗೆ ಲಾಪತಾ ಲೇಡಿಸ್‌ನಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ದೊಡ್ಡ ಗೌರವ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಹಿಗೆಯೇ ಇರಲಿ” ಎಂದು ಹೇಳಿದ್ದಾರೆ.

ಪ್ರಶಸ್ತಿಯೊಂದಿಗೆ ‘ಲಾಪತಾ ಲೇಡಿಸ್’ ನಟಿ ನಿತಾಂಶಿ ಗೋಯೆಲ್   PC x.com/IIFA

ನಿತಾಂಶಿ ಗೋಯೆಲ್ ಅವರ ಸಹ ನಟರಾದ ರವಿ ಕಿಶನ್ ಮತ್ತು ಪ್ರತಿಭಾ ರಂತ ಕ್ರಮವಾಗಿ ಅತ್ಯುತ್ತಮ ಪೋಷಕ ಪಾತ್ರ (ಪುರುಷ) ಮತ್ತು ಅತ್ಯುತ್ತಮ ಆರಂಭ (ಮಹಿಳೆ) ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಲಾಪತಾ ಲೇಡೀಸ್ ತಾಂತ್ರಿಕ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ, ಅವುಗಳಲ್ಲಿ ಬಿಪ್ಲಬ್ ಗೋಸ್ವಾಮಿಗೆ ಅತ್ಯುತ್ತಮ ಕಥೆ (ಮೂಲ), ಸ್ನೇಹಾ ದೇಸಾಯಿಗೆ ಅತ್ಯುತ್ತಮ ಚಿತ್ರಕಥೆ ಮತ್ತು ಜಬೀನ್ ಮರ್ಚೆಂಟ್‌ಗೆ ಅತ್ಯುತ್ತಮ ಸಂಕಲನ ಪ್ರಶಸ್ತಿಗಳು ಸೇರಿವೆ.

‘ಸಜ್ನಿ’ ಹಾಡಿಗೆ ಪ್ರಶಾಂತ್ ಪಾಂಡೆ ಅತ್ಯುತ್ತಮ ಸಾಹಿತ್ಯ ಮತ್ತು ರಾಮ್ ಸಂಪತ್ ಅತ್ಯುತ್ತಮ ಸಂಗೀತ ಪ್ರಶಸ್ತಿಯನ್ನು ಪಡೆದ್ದಾರೆ. ‘ಶೈತಾನ್’ ಚಿತ್ರದ ಅಭಿನಯಕ್ಕಾಗಿ ನಟಿ ಜಾನಕಿ ಬೋಡಿವಾಲಾ ಅತ್ಯುತ್ತಮ ಪೋಷಕ ಪಾತ್ರ (ಮಹಿಳೆ) ಪ್ರಶಸ್ತಿಯನ್ನು ಪಡೆದಿದ್ದು, ‘ಕಿಲ್’ ಚಿತ್ರದ ಪಾತ್ರಕ್ಕಾಗಿ ರಾಘವ್ ಜುಯಾಲ್ ಅತ್ಯುತ್ತಮ ನಕಾರಾತ್ಮಕ ಪಾತ್ರದ (Negative Role ) ಅಭಿನಯ ಪ್ರಶಸ್ತಿಯನ್ನು ಗಳಿಸಿದ್ದಾರೆ.

ಚೊಚ್ಚಲ (ಡೆಬ್ಯೂ) ವಿಭಾಗಗಳಲ್ಲಿ, ಮಡ್ಗಾಂವ್ ಎಕ್ಸ್‌ಪ್ರೆಸ್‌ಗಾಗಿ ಕುನಾಲ್ ಕೆಮ್ಮು ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿಯನ್ನು ಗೆದ್ದರೆ, ಕಿಲ್ ಚಿತ್ರದ ಪಾತ್ರಕ್ಕಾಗಿ ಲಕ್ಷ್ಯ ಲಾಲ್ವಾನಿ ಅತ್ಯುತ್ತಮ ಚೊಚ್ಚಲ (ಪುರುಷ) ಪ್ರಶಸ್ತಿಯನ್ನು ಪಡೆದಿದ್ದಾರೆ.

‘ಅಡಾಪ್ಟೇಶನ್’ ಚಿತ್ರಕ್ಕಾಗಿ ಶ್ರೀರಾಮ್ ರಾಘವನ್, ಅರಿಜಿತ್ ಬಿಸ್ವಾಸ್, ಪೂಜಾ ಲಧಾ ಸೂರ್ತಿ, ಮತ್ತು ಅನುಕೃತಿ ಪಾಂಡೆಯ ಮೇರಿ ಕ್ರಿಸ್ಮಸ್ ತಂಡಕ್ಕೆ ಅತ್ಯುತ್ತಮ ಕಥೆ ದೊರೆತಿದೆ. ತಾಂತ್ರಿಕ ವಿಭಾಗಗಳಲ್ಲಿ ಕಿಲ್ ಚಿತ್ರಕ್ಕಾಗಿ ರಫೇ ಮಹಮೂದ್ ಅವರಿಗೆ ಅತ್ಯುತ್ತಮ ಛಾಯಾಗ್ರಹಣ ಮತ್ತು ಸುಭಾಷ್ ಸಾಹೂ, ಬೊಲೊಯ್ ಕುಮಾರ್ ಡೊಲೊಯ್ ಹಾಗೂ ರಾಹುಲ್ ಕಾರ್ಪೆ ಅವರಿಗೆ ಅತ್ಯುತ್ತಮ ಧ್ವನಿ ವಿನ್ಯಾಸ ಪ್ರಶಸ್ತಿ ಸಿಕ್ಕಿದೆ.

ಪ್ರಶಸ್ತಿಯೊಂದಿಗೆ ‘ಕಿಲ್’ ಚಿತ್ರದ ನಟ ರಾಘವ್ ಜುಯಾಲ್  PC x.com/IIFA

ಆರ್ಟಿಕಲ್ 370 ಚಿತ್ರಕ್ಕಾಗಿ ಅರ್ಜುನ್ ಧವನ್, ಆದಿತ್ಯ ಧರ್, ಆದಿತ್ಯ ಸುಹಾಸ್ ಜಂಭಾಲೆ ಮತ್ತು ಮೋನಾಲ್ ಥಾಕರ್ ಅವರಿಗೆ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ದೊರೆತಿದೆ.

ವಿಕಿ ಕೌಶಲ್ ಅಭಿನಯದ ‘ಬ್ಯಾಡ್ ನ್ಯೂಝ್’ ಚಿತ್ರದ ‘ತೌಬಾ ತೌಬಾ’ ಹಾಡಿಗಾಗಿ ಬಾಸ್ಕೋ-ಸೀಸರ್ ಅತ್ಯುತ್ತಮ ನೃತ್ಯ ಸಂಯೋಜನೆ ಮತ್ತು ‘ಭೂಲ್ ಭುಲೈಯಾ 3’ ಚಿತ್ರದ ‘ರೆಡ್ ಚಿಲ್ಲೀಸ್’ ವಿಎಫ್ಎಕ್ಸ್ ಅತ್ಯುತ್ತಮ ವಿಎಫ್ಎಕ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಸಂಗೀತ ವಿಭಾಗಗಳಲ್ಲಿ, ‘ಆರ್ಟಿಕಲ್ 370ರ’ ‘ದುವಾ’ ಹಾಡಿಗಾಗಿ ಜುಬಿನ್ ನೌಟಿಯಾಲ್ ಅತ್ಯುತ್ತಮ ಗಾಯಕ (ಪುರುಷ) ಪ್ರಶಸ್ತಿಯನ್ನು ಪಡೆದಿದ್ದು, ‘ಭೂಲ್ ಭುಲೈಯಾ 3 ರ’ ‘ಅಮಿ ಜೆ ತೋಮರ್ 3.0’ ಹಾಡಿಗಾಗಿ ಶ್ರೇಯಾ ಘೋಷಾಲ್ ಅತ್ಯುತ್ತಮ ಗಾಯಕಿ (ಮಹಿಳೆ) ಪ್ರಶಸ್ತಿಯನ್ನು ಪಡೆದಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಹಿರಿಯ ಚಲನಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಅವರಿಗೆ ಭಾರತೀಯ ಸಿನಿಮಾದಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಅವರನ್ನು ಹಿರಿಯ ನಟಿ ರೇಖಾ ಸನ್ಮಾನಿಸಿದ್ದಾರೆ.

ಬೆಂಗಳೂರು ಚಲನಚಿತ್ರೋತ್ಸವ | ಹಿರಿಯ ನಟಿ ಶಬಾನಾ ಅಝ್ಮಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹನೂರು ಶೂಟೌಟ್ ಪ್ರಕರಣ: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು.!

ಕಾವೇರಿ ವನ್ಯಜೀವಿ ಅಭಯಾರಣ್ಯದ ಹನೂರು ವ್ಯಾಪ್ತಿಯಲ್ಲಿ ಮೂವರು ಮೃತಪಟ್ಟಿದ್ದ ವಿವಾದಾತ್ಮಕ ಗುಂಡಿನ ದಾಳಿ ಪ್ರಕರಣಕ್ಕೆ ಇದೀಗ ಕಾನೂನು ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೂವರು ಅರಣ್ಯ ಸಿಬ್ಬಂದಿಗೆ ಕೊಳ್ಳೇಗಾಲದ ಮೊದಲ ಹೆಚ್ಚುವರಿ...

ವಂದೇ ಮಾತರಂ ಗೀತೆಯ 6 ಚರಣಕ್ಕೆ ಕರ್ನಾಟಕ ಸರ್ಕಾರದ ಬ್ರೇಕ್

ವಂದೇ ಮಾತರಂ ಗೀತೆಯ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಕಡ್ಡಾಯ ನೀತಿಗೆ ಕರ್ನಾಟಕ ಸರ್ಕಾರ ನೇರವಾಗಿ ಸೆಡ್ಡು ಹೊಡೆದಿದೆ. ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಸಂಪೂರ್ಣ...

ಸಿಜೆಪಿ ಪ್ರತಿಭಟನೆಯಲ್ಲಿ ಬಾಲಕಿ ನಿಶು ಆಜಾದ್‌ಗೆ ಬೆದರಿಕೆ; ಕ್ರಮಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ನಿಶು ಆಜಾದ್‌ಗೆ ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಹಾಗೂ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ...

ಜಾದವ್‌ಪುರ ವಿವಿ ವಿರುದ್ಧ ಸುವೇಂದು ಅಧಿಕಾರಿಯ ‘ಕೇಸರಿ ಯಾತ್ರೆ’: ‘ಆಜಾದಿ’, ‘ಲಾಲ್ ಸಲಾಂ’ ಕೂಗುವವರನ್ನು ಬೇರುಸಹಿತ ಕಿತ್ತುಹಾಕುತ್ತೇನೆ ಎಂದು ಬೆದರಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದತ್ತ ನಡೆದ ‘ಗೆರುವಾ ಸಮ್ಮಾನ್ ಯಾತ್ರೆ’ (ಕೇಸರಿ ಗೌರವ ಮೆರವಣಿಗೆ) ಇದೀಗ ರಾಜ್ಯದ ರಾಜಕೀಯ ವಲಯದಲ್ಲಿ...

SIR : ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಮುನ್ನ, ಯಮುನಾ ನದಿ ಪಾತ್ರದ ಕೊಳಗೇರಿ ಪ್ರದೇಶವಾದ ಬೇಲಾ ಎಸ್ಟೇಟ್‌ನ ಭಾಗವೊಂದನ್ನು ಒಳಗೊಂಡಿರುವ ಮತಗಟ್ಟೆಯಲ್ಲಿ 729 ನೋಂದಾಯಿತ ಮತದಾರರಿದ್ದರು. ಆದರೆ, ಆಗಸ್ಟ್‌ನಲ್ಲಿ ಕರಡು...

ಬಂಗಾಳದ ನಾನ್‌ವೆಜ್ ವಿವಾದ: ಬಾಗೇಶ್ವರ್ ಬಾಬಾ ಹೇಳಿಕೆಗೆ ಹಿಂದೂ ವಲಯದಲ್ಲೇ ವಿರೋಧ; ‘ಹಿಂದೂ ಧರ್ಮ ಆಹಾರದ ಕೋಡ್ ಅಲ್ಲ!

ದುರ್ಗಾ ಪೂಜೆಯ ಸಂದರ್ಭದಲ್ಲಿ ಮೀನು, ಮಾಂಸ ಸೇವನೆ ಹಾಗೂ ಮಾರಾಟದ ವಿರುದ್ಧ ಬಾಗೇಶ್ವರ್ ಧಾಮದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿದ್ದ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ವಿವಾದ ಹುಟ್ಟುಹಾಕಿದ ಬೆನ್ನಲ್ಲೇ, ಇದೀಗ...

SIR: ಪಂಜಾಬ್‌ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದ್ದ ರಾಘವ್ ಚಡ್ಡಾ ಹೆಸರು ದೆಹಲಿಯಲ್ಲಿ ಎಂಟ್ರಿ!

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರು ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಕೆಲವೇ ದಿನಗಳಲ್ಲಿ, ದೆಹಲಿಯ ಮತದಾರರ ಪಟ್ಟಿಯಲ್ಲಿ ದಿಢೀರನೆ ಪ್ರತ್ಯಕ್ಷವಾಗಿರುವುದು ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ...

ರಾಜ್ಯ ಕಾಂಗ್ರೆಸ್‌ಗೆ 35 ನೂತನ ಜಿಲ್ಲಾಧ್ಯಕ್ಷರ ನೇಮಕ; ಹೈಕಮಾಂಡ್ ಪಟ್ಟಿಯಲ್ಲಿ ಮಹಿಳೆಯರಿಗಿಲ್ಲ ಪ್ರಾತಿನಿಧ್ಯ!

ಕರ್ನಾಟಕ ಕಾಂಗ್ರೆಸ್‌ನ ಬಹುನಿರೀಕ್ಷಿತ ಜಿಲ್ಲಾ ಪುನರ್‌ರಚನೆಗೆ ಕೊನೆಗೂ ಚಾಲನೆ ದೊರೆತಿದ್ದು, ರಾಜ್ಯದ 35 ಸಾಂಸ್ಥಿಕ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ (DCC) ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ....

ತ್ರಿಪುರ| ಬಿಜೆಪಿ ಬೇಡಿಕೆಗೆ ಸ್ಪಂದಿಸಿದ ಇಸಿಐ; ಗ್ರಾಮ ಸಮಿತಿ ಚುನಾವಣೆ ಹಿನ್ನೆಲೆಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಂದೂಡಿಕೆ

ಆಡಳಿತರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಬೇಡಿಕೆಗೆ ಸ್ಪಂದಿಸಿರುವ ಭಾರತೀಯ ಚುನಾವಣಾ ಆಯೋಗ (ಇಸಿಐ), ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಗ್ರಾಮ ಸಮಿತಿ...

SIR: ಸ್ವತಃ BLO ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ತಾಂತ್ರಿಕ ಎಡವಟ್ಟುಗಳು ಮತ್ತು ಗೊಂದಲಗಳು ಪ್ರತಿದಿನವೂ ಒಂದಲ್ಲ ಒಂದು ವಿಲಕ್ಷಣ ಘಟನೆಗಳಿಗೆ ಕಾರಣವಾಗುತ್ತಿದ್ದು, ಇದೀಗ ಸ್ವತಃ ಮತದಾರರ ಪಟ್ಟಿ ಪರಿಷ್ಕರಣೆ...