HomeಮುಖಪುಟE20 ಪೆಟ್ರೋಲ್ ಪ್ರಕರಣ : 'ಗ್ರ್ಯಾಂಡ್ ವಿಟಾರಾ' ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

- Advertisement -
- Advertisement -

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ ‘ಗ್ರಾಂಡ್ ವಿಟಾರಾ’ ಕಾರನ್ನು ನೀಡುವಂತೆ ಕಾರು ತಯಾರಿಕಾ ಕಂಪನಿ ಮಾರುತಿ ಸುಝುಕಿಗೆ ಆದೇಶಿಸಿದೆ. ಗ್ರಾಹಕನಿಗೆ ನೀಡುವ ಹೊಸ ಕಾರು ಕಡ್ಡಾಯವಾಗಿ E20 ಇಂಧನಕ್ಕೆ ಹೊಂದಿಕೊಳ್ಳುವಂತಹ (E20-compatible) ಇಂಜಿನ್ ಹೊಂದಿರಬೇಕು ಎಂದು ಗ್ರಾಹಕ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಈ ಆದೇಶವನ್ನು ಜುಲೈ 14 ರಂದು ಡಿಸಿಡಿಆರ್‌ಸಿ ಅಧ್ಯಕ್ಷ ಪ್ರಶಾಂತ್ ಕುಂದು ಮತ್ತು ಸದಸ್ಯ ಡಾ. ಆನಂದ್ ಎ. ವರ್ಗೀಸ್ ಅವರನ್ನೊಳಗೊಂಡ ಪೀಠ ಹೊರಡಿಸಿದೆ. ಮಾರುತಿ ಸುಝುಕಿ ಸಂಸ್ಥೆ ಮತ್ತು ಅದರ ಅಧಿಕೃತ ಡೀಲರ್ ಆದ ‘ನೆಕ್ಸಾ ಮ್ಯಾಗ್ನೆಟೋ’ ವಿರುದ್ಧ ಡಾ. ಪ್ರೇಮರಾಜ್ ದೇವಂಗನ್ ಅವರು ಸಲ್ಲಿಸಿದ್ದ ಗ್ರಾಹಕ ದೂರನ್ನು ಪುರಸ್ಕರಿಸಿ ಈ ತೀರ್ಪು ನೀಡಲಾಗಿದೆ.

ಆದೇಶ ಹೊರಡಿಸಿದ 45 ದಿನಗಳ ಒಳಗಾಗಿ ಡಾ. ದೇವಂಗನ್ ಅವರ ಗ್ರಾಂಡ್ ವಿಟಾರಾ ಕಾರಿನ ಬದಲಿಗೆ, ಅದೇ ಮಾಡೆಲ್‌ನ ಹಾಗೂ ಕಡ್ಡಾಯವಾಗಿ E20 ಇಂಧನಕ್ಕೆ ಹೊಂದಿಕೊಳ್ಳುವಂತಹ ಇಂಜಿನ್ ಹೊಂದಿರುವ ಹೊಸ ಕಾರನ್ನು ನೀಡಬೇಕು ಎಂದು ಗ್ರಾಹಕ ಆಯೋಗವು ಮಾರುತಿ ಸುಝುಕಿ ಮತ್ತು ನೆಕ್ಸಾ ಮ್ಯಾಗ್ನೆಟೋಗೆ ನಿರ್ದೇಶನ ನೀಡಿದೆ.

ಒಂದು ವೇಳೆ ನಿಗದಿತ ಅವಧಿಯಲ್ಲಿ ಕಾರನ್ನು ಬದಲಾಯಿಸಿಕೊಡದಿದ್ದರೆ, ಮಾರುತಿ ಸುಝುಕಿ ಮತ್ತು ನೆಕ್ಸಾ ಮ್ಯಾಗ್ನೆಟೋ ಡಾ. ದೇವಂಗನ್ ಅವರು 2023ರಲ್ಲಿ ಕಾರಿಗಾಗಿ ಪಾವತಿಸಿದ್ದ 18.29 ಲಕ್ಷ ರೂಪಾಯಿ ಮಾರಾಟದ ಮೊತ್ತವನ್ನು ಮಾತ್ರವಲ್ಲದೆ, ಅವರು ವಾಹನಕ್ಕಾಗಿ ಪಾವತಿಸಿದ್ದ 1,86,850 ರೂಪಾಯಿ ಆರ್‌ಟಿಒ ಶುಲ್ಕ ಮತ್ತು 34,644 ರೂಪಾಯಿ ವಿಮಾ ಪ್ರೀಮಿಯಂ ಮೊತ್ತವನ್ನು ಸಹ ಮರುಪಾವತಿಸಬೇಕು. ಈ ಒಟ್ಟು ಮೊತ್ತವು 20,50,494 ರೂಪಾಯಿ ಆಗಿರುತ್ತದೆ ಎಂದು ಆಯೋಗ ತಿಳಿಸಿದೆ.

ಯಾವ ಪರಿಸ್ಥಿತಿಯೇ ಇರಲಿ (ಕಾರು ಬದಲಾಯಿಸಿಕೊಡುವುದು ಅಥವಾ ಹಣ ಮರುಪಾವತಿಸುವುದು), ಗ್ರಾಹಕರಿಗೆ ಉಂಟಾದ ಮಾನಸಿಕ ತೊಂದರೆ ಮತ್ತು ಕಿರುಕುಳಕ್ಕೆ ಪರಿಹಾರವಾಗಿ 1 ಲಕ್ಷ ರೂಪಾಯಿ ಹಾಗೂ ನ್ಯಾಯಾಲಯದ ವೆಚ್ಚಕ್ಕಾಗಿ 10,000 ರೂಪಾಯಿ ಮೊತ್ತವನ್ನು ಪಾವತಿಸುವಂತೆ ಮಾರುತಿ ಸುಝುಕಿ ಮತ್ತು ನೆಕ್ಸಾ ಮ್ಯಾಗ್ನೆಟೋಗೆ ಆದೇಶಿಸಲಾಗಿದೆ. ಈ ಪಾವತಿಯನ್ನು ಸಹ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಮಾಡಬೇಕಾಗಿದೆ.

ಡಾ. ದೇವಂಗನ್ ಅವರು ತಾವು 2023ರಲ್ಲಿ ಮಾರುತಿ ಗ್ರಾಂಡ್ ವಿಟಾರಾ ಐಇ ಸ್ಟ್ರಾಂಗ್ ಹೈಬ್ರಿಡ್ ಝೆಟಾ ಪ್ಲಸ್ ಕಾರನ್ನು ಖರೀದಿಸಿದ್ದಾಗಿ ಆಯೋಗಕ್ಕೆ ತಿಳಿಸಿದ್ದರು. ಆದರೆ, ಈ ಕಾರು E20 ಇಂಧನಕ್ಕೆ ಹೊಂದಿಕೊಳ್ಳುವ ತಂತ್ರಜ್ಞಾನ ಹೊಂದಿಲ್ಲದ ಕಾರಣ, ನಂತರದ ದಿನಗಳಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದ್ದರು.

E20 ಪೆಟ್ರೋಲ್ ಎನ್ನುವುದು ಶೇಕಡಾ 20 ರಷ್ಟು ಎಥನಾಲ್ ಮತ್ತು ಶೇಕಡಾ 80 ರಷ್ಟು ಪೆಟ್ರೋಲ್‌ನ ಮಿಶ್ರಣವಾಗಿದೆ. ಇದು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಲು, ಮಾಲಿನ್ಯವನ್ನು ತಗ್ಗಿಸಲು ಮತ್ತು ದೇಶೀಯವಾಗಿ ಉತ್ಪಾದಿಸುವ ಜೈವಿಕ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಭಾರತ ಸರ್ಕಾರ ರೂಪಿಸಿರುವ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ.

ಆದರೆ, E20 ಇಂಧನ ಪರಿಚಯವು ಒಂದು ಆತಂಕವನ್ನು ಹುಟ್ಟುಹಾಕಿದೆ. ವಿಶೇಷವಾಗಿ E20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಳಿಸದ ಹಳೆಯ ವಾಹನಗಳಲ್ಲಿ ಹೊಂದಾಣಿಕೆಯ ಸಮಸ್ಯೆಗಳು ಇಂಧನ ವ್ಯವಸ್ಥೆ ತುಕ್ಕು ಹಿಡಿಯುವುದು (fuel system corrosion) ಮತ್ತು ಮೈಲೇಜ್ ಅಥವಾ ಇಂಧನ ದಕ್ಷತೆ ಕಡಿಮೆಯಾಗುವ (reduced fuel efficiency) ಸಾಧ್ಯತೆಗಳಿವೆ ಎಂಬ ಕಳಕಳಿ ವ್ಯಕ್ತವಾಗಿದೆ.

ವಾಹನ ತಯಾರಕರು ಈಗ ಹೆಚ್ಚೆಚ್ಚು E20-ಹೊಂದಾಣಿಕೆಯ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ, ಆದರೆ 2023ಕ್ಕಿಂತ ಮೊದಲು ಮಾರಾಟವಾದ ವಾಹನಗಳ ಹೊಂದಾಣಿಕೆಯ ಬಗ್ಗೆ ಇನ್ನೂ ಹಲವು ಪ್ರಶ್ನೆಗಳು ಉಳಿದಿವೆ.

ಡಾ. ದೇವಂಗನ್ ಅವರ ಪ್ರಕರಣದಲ್ಲಿ, ಅವರು ಇಂಧನವನ್ನು ಸಂಪೂರ್ಣವಾಗಿ ಹೊರಹಾಕಿ (drain), ಇಂಧನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ನಂತರ ಮತ್ತೆ ಹೊಸ ಪೆಟ್ರೋಲ್ ಅನ್ನು ತುಂಬಿಸಿದ್ದೇನೆ. ಆದಾಗ್ಯೂ, ವಾಹನ ಪದೇ ಪದೇ ಮಧ್ಯದಲ್ಲೇ ನಿಂತುಹೋಗುವ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಲೇ ಇತ್ತು ಹೇಳಿದ್ದರು.

ಇಂತಹ ಮರುಕಳಿಸುವ ದೋಷಗಳಿಂದಾಗಿ ಅವರು ತಮ್ಮ ವಾಹನವನ್ನು ಪದೇ ಪದೇ ರಿಪೇರಿಗಾಗಿ ಮಾರುತಿ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಾಯಿತು ಎಂದು ಗ್ರಾಹಕ ನ್ಯಾಯಾಲಯದ ಆದೇಶದಲ್ಲಿ ದಾಖಲಿಸಲಾಗಿದೆ.

ವಾಹನದಲ್ಲಿ ಕಾಣಿಸಿಕೊಂಡ ಸಮಸ್ಯೆಗೆ ಕಳಪೆ ಗುಣಮಟ್ಟದ ಇಂಧನ ಬಳಕೆಯೇ ಕಾರಣ ಎಂದು ಮಾರುತಿ ಸುಝುಕಿ ಮತ್ತು ನೆಕ್ಸಾ ಮ್ಯಾಗ್ನೆಟೋ ವಾದಿಸಿದ್ದರು. ಅಲ್ಲದೆ, ಹೊಸ E20 ಇಂಧನ ಸ್ನೇಹಿ ಮಾಡೆಲ್ ನೀಡಲು ನಿರಾಕರಿಸಿದ್ದರು. ಇದರಿಂದಾಗಿ ಡಾ. ದೇವಂಗನ್ ಅವರು ನ್ಯಾಯ ಮತ್ತು ಪರಿಹಾರಕ್ಕಾಗಿ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಜುಲೈ 14 ರಂದು ನೀಡಿದ ತನ್ನ ತೀರ್ಪಿನಲ್ಲಿ, ಮಾರುತಿ ಸುಝುಕಿ ಕಂಪನಿ ಮತ್ತು ಅದರ ಡೀಲರ್ ಗ್ರಾಹಕ ಸೇವೆ ಹಾಗೂ ನ್ಯಾಯೋಚಿತ ವ್ಯಾಪಾರ ಪದ್ಧತಿಯಲ್ಲಿ ಲೋಪ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸುವಲ್ಲಿ ಡಾ. ದೇವಂಗನ್ ಯಶಸ್ವಿಯಾಗಿದ್ದಾರೆ ಎಂದು ಗ್ರಾಹಕ ಆಯೋಗವು ತೀರ್ಪು ನೀಡಿದೆ.

ಅದರಂತೆ, ಡಾ. ದೇವಂಗನ್ ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಮತ್ತು ಅವರ ಕಾರನ್ನು ಬದಲಾಯಿಸಿಕೊಡಬೇಕು ಅಥವಾ ಅವರು ಕಾರಿನ ಖರೀದಿಗೆ ಸಂಬಂಧಿಸಿದಂತೆ ಭರಿಸಿದ ಸಂಪೂರ್ಣ ವೆಚ್ಚವನ್ನು ಮರುಪಾವತಿಸಬೇಕು ಎಂದು ಆದೇಶಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...

ಸಂವಿಧಾನಬದ್ಧ ದಾಖಲೆಗಳಿದ್ದರೂ ಪಶ್ಚಿಮ ಬಂಗಾಳದ ಮುಸ್ಲಿಂ ಮಹಿಳೆ ‘ಒಳನುಸುಳುಕೋರ’ರೆಂದು ಬಾಂಗ್ಲಾಕ್ಕೆ ಗಡೀಪಾರು: ಭಾರತದಲ್ಲೇ ಉಳಿದ ಪತಿ, ಇಬ್ಬರು ಮಕ್ಕಳು

ಭಾರತೀಯ ಪೌರತ್ವವನ್ನು ಸ್ಪಷ್ಟವಾಗಿ ಸಾಬೀತುಪಡಿಸುವ ಜನನ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಮತ್ತು ಸ್ವಂತ ಭೂಮಿಯ ದಾಖಲೆಗಳು ಕೈಯಲ್ಲಿದ್ದರೂ, ಪಶ್ಚಿಮ ಬಂಗಾಳದ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರನ್ನು 'ಒಳನುಸುಳುಕೋರ' ಎಂಬ...

SIR ನಂತರ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ : ನಟ ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ...

ಸರ್ಕಾರಿ ಶಾಲೆಗಳ ಸುಧಾರಣೆಗೆ ದೇಶಾದ್ಯಂತ ಅಭಿಯಾನ ಘೋಷಿಸಿದ ಅಭಿಜೀತ್ ದೀಪ್ಕೆ

ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಸುಧಾರಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. "ಪೋಷಕರು ಶಾಲೆಗಳ ಮೂಲಭೂತ ಸೌಲಭ್ಯಗಳ ಸಾಮಾಜಿಕ ಲೆಕ್ಕಪರಿಶೋಧನೆ ನಡೆಸಬೇಕು, ಶಾಲೆಗಳನ್ನು ಸುಧಾರಿಸುವ...

ಕರ್ನಾಟಕದ ASDDO ಸಂಖ್ಯೆ 3 ಲಕ್ಷದಷ್ಟು ಇಳಿಕೆ : SIR ಪ್ರಕ್ರಿಯೆ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದ ವರದಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಲ್ಲಿ ಇದುವರೆಗಿನ ಅತಿ ದೊಡ್ಡ ತಿದ್ದುಪಡಿ ಕರ್ನಾಟಕದಲ್ಲಿ ಆಗಿದ್ದು, ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಸುಮಾರು 3 ಲಕ್ಷ ಜನರನ್ನು ಮತ್ತೆ ಮತದಾರರ ಪಟ್ಟಿಗೆ...

ವಸತಿಗೃಹದಲ್ಲಿ ಹೋಮ-ಪೂಜೆ ಆಯೋಜನೆ; ಬಾಗಲಕೋಟೆ ತೋಟಗಾರಿಕೆ ವಿವಿ ಕುಲಪತಿಗಳಿಂದ ಅಧಿಕಾರ ದುರುಪಯೋಗ

ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅಧಿಕೃತ‌ ಲೆಟರ್‌ಹೆಡ್‌ ಮೂಲಕ ಆಹ್ವಾನವನ್ನೂ ಹೊರಡಿಸುವ ಮೂಲಕ ಕುಲಪತಿ ಡಾ. ವಿಷ್ಣುವರ್ಧನ ಅವರು ಅಧಿಕಾರ ದುರುಪಯೋಗ...

ಕಪ್ಪು ಕುರ್ತಾ-ಪೈಜಾಮ ಧರಿಸಿದ್ದ ಕಲಾವಿದನಿಗೆ ಥಳಿಸಿದ ಹಿಂದುತ್ವ ಗುಂಪು: ಮುಸ್ಲಿಂ ಎಂದು ಶಂಕಿಸಿ ಅಮಾನವೀಯ ಹಲ್ಲೆ

ರಂಗಭೂಮಿ ಕಲಾವಿದರೊಬ್ಬರು ಕಪ್ಪು ಕುರ್ತಾ-ಪೈಜಾಮ ಧರಿಸಿದ್ದಕ್ಕಾಗಿ ಮುಸ್ಲಿಂ ಎಂದು ಶಂಕಿಸಿ ಹಿಂದುತ್ವ ಯುವಕರ ಗುಂಪೊಂದು ಅವರನ್ನು ಕ್ರೂರವಾಗಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ಶುಭಂಕರ್ ದಾಸ್ ಶರ್ಮಾ...